ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019, Live Score: ಚೆನ್ನೈ ವಿರುದ್ಧ ಬೆಂಗಳೂರಿಗಿಲ್ಲ ಚಿಂತೆ

By Isl Media
ISL 2019: No love lost as Chennai host Bengaluru

ಚೆನ್ನೈ, ಫೆಬ್ರವರಿ 8: ಇಂಡಿಯನ್ ಸೂಪರ್ ಲೀಗ್‌ನಲ್ಲಿ ಈಗಾಗಲೇ ಪ್ಲೇ ಆಫ್ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಬೆಂಗಳೂರು ಎಫ್ ಸಿ ಹಾಗೂ ಸೋಲಿನ ಮೇಲೆ ಸೋಲುಂಡು ಆಘಾತ ಅನುಭವಿಸಿ ಕೊನೆಯ ಸ್ಥಾನದಲ್ಲಿರುವ ಚೆನ್ನೈಯಿನ್ ತಂಡ ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಶನಿವಾರ (ಫೆಬ್ರವರಿ 9) ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿನ ಲಿತಾಂಶ ಅಗ್ರ ಸ್ಥಾನದಲ್ಲಿರುವ ಬೆಂಗಳೂರಿನ ಮೇಲೆ ಯಾವುದೇ ಪರಿಣಾಮ ಬೀರದು, ಅದೇ ರೀತಿ ಕೊನೆ ಸ್ಥಾನದಲ್ಲಿರುವ ಚೆನ್ನೈ ಗೆದ್ದರೂ ಪ್ರಯೋಜನವಿಲ್ಲ. ಆದರೂ ಘನತೆ ಕಾಯ್ದುಕೊಳ್ಳಲು ಹಾಲಿ ಚಾಂಪಿಯನ್ ಸೆಣಸಲಿದೆ.

ಆಕ್ಲೆಂಡ್ ಸ್ಟೇಡಿಯಂನಲ್ಲಿ ಸಾಲು ಸಾಲು ದಾಖಲೆ ಬರೆದ ರೋಹಿತ್ ಶರ್ಮಾ!ಆಕ್ಲೆಂಡ್ ಸ್ಟೇಡಿಯಂನಲ್ಲಿ ಸಾಲು ಸಾಲು ದಾಖಲೆ ಬರೆದ ರೋಹಿತ್ ಶರ್ಮಾ!

ಕಳೆದ ವರ್ಷ ಫೈನಲ್ ಪಂದ್ಯದಲ್ಲಿ ಸೆಣಸಿದ್ದ ಇತ್ತಂಡಗಳು ಈ ಬಾರಿ ಎರಡನೇ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು, ಅಲ್ಲಿ ಬೆಂಗಳೂರು ಹಾಲಿ ಚಾಂಪಿಯನ್ನರಿಗೆ ಆಘಾತ ನೀಡಿತ್ತು. ಶನಿವಾರದ ಪಂದ್ಯಕ್ಕೆ ಬೆಂಗಳೂರು ತಂಡ ನಾಯಕ ಸುನಿಲ್ ಛೆಟ್ರಿ ಹಾಗೂ ಉದಾಂತ್ ಸಿಂಗ್ ಅವರಿಗೆ ವಿಶ್ರಾಂತಿ ನೀಡಲಾಗಿದೆ, ಆದರೂ ಸೋತು ಕಂಗೆಟ್ಟಿರುವ ಚೆನ್ನೈ ' ವಿರುದ್ಧ ಜಯ ಗಳಿಸಿ ಅಗ್ರ ಸ್ಥಾನದೊಂದಿಗೆ ಪ್ಲೆ' ಆಫ್ ತಲಪುವ ಗುರಿಯನ್ನು ಬೆಂಗಳೂರು ತಂಡ ಹೊಂದಿದೆ.

ಪಂದ್ಯದ Live Score ಇಲ್ಲಿದೆ. ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
1042959

14 ಪಂದ್ಯಗಳನ್ನಾಡಿರುವ ಬೆಂಗಳೂರು ತಂಡ 31 ಅಂಕಗಳನ್ನು ಗಳಿಸಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಬಹುತೇಕ ಪ್ಲೇ ಆಫ್ ಹಂತ ತಲುಪಿರುವ ಬೆಂಗಳೂರಿಗೆ ಇನ್ನೊಂದು ಜಯ ಅಂತಿಮ ನಾಲ್ಕರ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಲಿದೆ. ಇತ್ತಂಡಗಳ ನಡುವಿನ ಜಿದ್ದು ನಾಳೆಯ ಪಂದ್ಯವನ್ನು ಕುತೂಹಲದ ಕ್ಷಣಗಳಿಗೆ ಎಡೆ ಮಾಡಿಕೊಡಲಿದೆ.

'ನಟ ಸಾರ್ವಭೌಮ'ನ ಕೊಂಡಾಡಿದ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ'ನಟ ಸಾರ್ವಭೌಮ'ನ ಕೊಂಡಾಡಿದ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ

ಮಿಕು ಅವರ ಆಗಮನ ಬೆಂಗಳೂರು ತಂಡದ ಬಲವನ್ನು ಹೆಚ್ಚಿಸಿದೆ. ಕೇರಳ ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ ಮಿಕು ವಿಶ್ರಾಂತಿ ಪಡೆದಿದ್ದರು, ಆದರೆ ದ್ವಿತಿಯಾ'ರ್ದದಲ್ಲಿ ಕೆಲ ಹೊತ್ತು ಅಂಗಣಕ್ಕಿಳಿದಿದ್ದರು. 'ಮಿಕು ಅವರ ಆಗಮನದಿಂದ ಅಟ್ಯಾಕ್ ವಿಭಾಗದ ಬಲ ಹೆಚ್ಚಿದೆ. ಡಿಫೆನ್ಸ್ ವಿಭಾಗದಲ್ಲಿ ನಾವು ಹೆಚ್ಚು ಗಮನ ಹರಿಸಲಿದ್ದೇವೆ. ಆರಂ'ದಲ್ಲಿ ನಾವು ಸಣ್ಣ ಪ್ರಮಾಣದಲ್ಲಿ ಸಮಸ್ಯೆ ಎದುರಿಸಿದ್ದೆವು, ನಿಶು ಕುಮಾರ್ ಹಾಗೂ ರಾಹುಲ್ ಬಿಕೆ ಹೊಂದಾಣಿಕೆಯ ಕೊರತೆ ಇದ್ದಿತ್ತು, ಈಗ ನಾಲ್ವರೂ ಆಟಗಾರರು ಉತ್ತಮ ರೀತಿಯಲ್ಲಿ ಆಡುತ್ತಿದ್ದಾರೆ.' ಎಂದು ಕೋಚ್ ಕಾರ್ಲಸ್ ಕ್ವಾಡ್ರಾಟ್ ಹೇಳಿದ್ದಾರೆ.

ಎಎಫ್ಸಿ ಕಪ್‌ಗೆ ಮುನ್ನ ಬೆಂಗಳೂರು ತಂಡ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿತ್ತು, ಆದರೆ ವಿಶ್ರಾಂತಿಯ ಆಗಮನದ ನಂತರ ಮುಂಬೈ ಸಿಟಿ ವಿರುದ್ಧ 1-0 ಗೋಲಿನ ಅಂತರದಲ್ಲಿ ಸೋಲನುಭವಿಸಿದ್ದು, ತಂಡದ ಮನೋಬಲವನ್ನು ಕುಸಿಯುವಂತೆ ಮಾಡಿತ್ತು. ಆದರೆ ನಾರ್ತ್ ಈಸ್ಟ್ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಗೆಲ್ಲುವ ಮೂಲಕ ಮತ್ತೆ ಅಗ್ರ ಸ್ಥಾನಕ್ಕೇರಿತು. ಕೇರಳ ವಿರುದ್ಧ ಉತ್ತಮ ಪ್ರದರ್ಶನ ತೋರಿದ ಬೆಂಗಳೂರು 2-2 ಗೋಲುಗಳಿಂದ ಡ್ರಾ ಸಾಧಿಸಿತ್ತು.

Story first published: Saturday, February 9, 2019, 20:46 [IST]
Other articles published on Feb 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X