ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ಪಂದ್ಯ ಸಮಬಲ, ನಾರ್ತ್ ಈಸ್ಟ್ ಪ್ಲೇ ಆಫ್ ಆಸೆ ಜೀವಂತ

By Isl Media
ISL 2019: Pune leave NorthEast with plenty to do

ಗುವಾಹಟಿ, ಫೆಬ್ರವರಿ 20: ನಾರ್ತ್ ಈಸ್ಟ್ ಯುನೈಟೆಡ್ ಪರ ಲಿನ್ ಬೋರ್ಗೆಸ್ ( 47ನೇ ನಿಮಿಷ) ಹಾಗೂ ಎಫ್ ಸಿ ಪುಣೆ ಸಿಟಿ ಪರ ರೌಲಿನ್ ಬೋರ್ಗೆಸ್ (69ನೇ ನಿಮಿಷ) ಗಳಿಸಿದ ಗೋಲಿನಿಂದ ಇಂಡಿಯನ್ ಸೂಪರ್ ಲೀಗ್ ನ 81ನೇ ಪಂದ್ಯ 1-1 ಗೋಲಿನಿಂದ ಸಮಬಲಗೊಂಡಿತು. ಇದರಿಂದ ನಾರ್ತ್ ಈಸ್ಟ್ ಯುನೈಟೆಡ್ ನ ಪ್ಲೇ ಆಫ್ ತೀರ್ಮಾನ ಮತ್ತೊಂದು ಪಂದ್ಯವನ್ನು ಅವಲಂಭಿಸಿತು.

ಉತ್ತಪ್ಪ ಮತ್ತೆ ಕಣಕ್ಕೆ, ಸೌರಾಷ್ಟ್ರ ಪರ ಟಿ20 ಟೂರ್ನಮೆಂಟ್ ನಲ್ಲಿ ಬ್ಯಾಟಿಂಗ್ಉತ್ತಪ್ಪ ಮತ್ತೆ ಕಣಕ್ಕೆ, ಸೌರಾಷ್ಟ್ರ ಪರ ಟಿ20 ಟೂರ್ನಮೆಂಟ್ ನಲ್ಲಿ ಬ್ಯಾಟಿಂಗ್

ದ್ವಿತಿಯಾರ್ಧದ ಆರಂಭದಲ್ಲೇ ಆತಿಥೇಯ ನಾರ್ತ್ ಈಸ್ಟ್ ಯುನೈಟೆಡ್ ತಂಡಕ್ಕೆ ಗೋಲಿನ ಯಶಸ್ಸು. 47ನೇ ನಿಮಿಷದಲ್ಲಿ ಬಾರ್ತ್‌ಲೋಮ್ಯೊ ಒಗ್ಬಚೆ ಹಾಗೂ ರೌಲಿನ್ ಬೋರ್ಗೆಸ್ ಒನ್ ಟು ಒನ್ ಪಾಸ್ ಮೂಲಕ ಚೆಂಡನ್ನು ನಿಯಂತ್ರಿಸಿ ಮುನ್ನಡೆಸಿದರು. ಒಂದು ಹಂತದಲ್ಲಿ ಒಗ್ಬಚೆ ದೀರ್ಘ ಪಾಸ್ ನೀಡಿದರು. ಅದನ್ನು ಕಮಲ್ಜಿತ್ ಸಿಂಗ್ ತಡೆಯಲು ಮುಂದೆ ಬಂದರು, ಆದರೆ ಚೆಂಡು ಬೋರ್ಗೆಸ್ ಅವರ ನಿಯಂತ್ರಣಕ್ಕೆ ಸಿಕ್ಕಿತು. ಸುಲಭವಾಗಿ ಗೋಲು ಗಳಿಸಿ ತಂಡಕ್ಕೆ ಅಮೂಲ್ಯ ಮುನ್ನಡೆ ಕಲ್ಪಿಸಿದರು. ನಾರ್ತ್ ಈಸ್ಟ್ ನ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. 69ನೇ ನಿಮಿಷದಲ್ಲಿ ಆದಿಲ್ ಖಾನ್ ಗಳಿಸಿದ ಗೋಲು ತಂಡವನ್ನು 1-1 ಗೋಲಿನಿಂದ ಸಮಬಲಗೊಳಿಸಿತು.

ಗೋಲಿಲ್ಲದ ಮೊದಲ ಅವಧಿ
ಇತ್ತಂಡಗಳು ಎಚ್ಚರಿಕೆಯ ಆಟವಾಡಿದ ಕಾರಣ ಮೊದಲ 45 ನಿಮಿಷಗಲ ಆಟ ಗೋಲಿಲ್ಲದೆ ಅಂತ್ಯಗೊಂಡಿತು. ಆತಿಥೇಯ ತಂಡ ಚೆಂಡಿನ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಿದರೂ ಪ್ರವಾಸಿ ಪುಣೆ ತಂಡ ಗೋಲು ಗಳಿಸುವ ಅವಕಾಶ ನೀಡಲಿಲ್ಲ. ಅದೇ ರೀತಿ ಆ ಅವಧಿಯಲ್ಲಿ ಗೋಲು ಗಳಿಸಲು ಹೆಚ್ಚಿನ ಅವಕಾಶ ನಿರ್ಮಾಣಗೊಳ್ಳಲಿಲ್ಲ. ಚೆಂಡನ್ನು ತನ್ನ ಹೆಚ್ಚಾಗಿ ತನ್ನ ಸ್ವಾಧೀನದಲ್ಲಿರಿಸಿಕೊಳ್ಳುವ ಮೂಲಕ ಆತಿಥೇಯ ತಂಡ ಪಂದ್ಯದ ಮೇಲೆ ಆರಂಭದಲ್ಲೇ ಪ್ರಭುತ್ವ ಸಾಧಿಸಿತು. ಆದರೆ ಗೋಲಿಗಾಗಿ ಅವಕಾಶವನ್ನು ನಿರ್ಮಿಸಿಕೊಳ್ಳುವಲ್ಲಿ ನಾರ್ತ್ ಈಸ್ಟ್ ವಿಫಲವಾಯಿತು.

ವಿಶ್ವಕಪ್‌ನಲ್ಲಿ ಭಾರತ vs ಪಾಕಿಸ್ತಾನ ಪಂದ್ಯ: ಮಹತ್ತರ ಹೆಜ್ಜೆಯಿಟ್ಟ ಬಿಸಿಸಿಐ!ವಿಶ್ವಕಪ್‌ನಲ್ಲಿ ಭಾರತ vs ಪಾಕಿಸ್ತಾನ ಪಂದ್ಯ: ಮಹತ್ತರ ಹೆಜ್ಜೆಯಿಟ್ಟ ಬಿಸಿಸಿಐ!

39ನೇ ನಿಮಿಷದಲ್ಲಿ ಪನಾಗಿಯೋಟಿಸ್ ಟ್ರಿಆಯಾಡಿಸ್ ಅವರಿಗೆ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು, ಆದರೆ ತುಳಿದ ಚೆಂಡು ಗೋಲ್‌ಬಾಕ್ಸ್‌ನಿಂದ ಹೊರಗಡೆ ಸಾಗಿದ್ದು ಪುಣೆ ತಂಡದ ಅದೃಷ್ಟವಾಗಿತ್ತು. ಇದು ಪ್ರಥಮಾ'ರ್ಧದಲ್ಲಿ ಸಿಕ್ಕ ಏಕೈಕ ಉತ್ತಮ ಅವಕಾಶವಾಗಿತ್ತು. ಒಂದು ಹಂತದಲ್ಲಿ ಆದಿಲ್ ಖಾನ್ ಅವರಿಗೂ ಗೋಲು ಗಳಿಸುವ ಅವಕಾಶವಿದ್ದಿತ್ತು, ಆದರೆ ಮಾಡಿದ ಹೆಡರ್ ನೇರವಾಗಿ ಎದುರಾಳಿ ತಂಡದ ಗೋಲ್‌ಕೀಪರ್ ಕೈ ಸೇರಿತ್ತು. ಉಳಿದಿರುವ 45 ನಿಮಿಷಗಳಲ್ಲಿ ನಾರ್ತ್ ಈಸ್ಟ್ ತಂಡ ಗೋಲು ಗಳಿಸಬೇಕಾಗಿದೆ, ಏಕೆಂದರೆ ಮೊದಲ ಬಾರಿಗೆ ಪ್ಲೇ ಆಫ್ ತಲುಪಬೇಕಾದರೆ ಈ ತಂಡ ಇಲ್ಲಿ ಜಯ ಕಾಣಲೇಬೇಕಾಗಿದೆ.

ರಾಸ್ ಟೇಲರ್ ಏಕದಿನ ದಾಖಲೆ, ಬಾಂಗ್ಲಾ ವಿರುದ್ಧ ಕಿವೀಸ್‌ಗೆ ಸರಣಿ ಜಯರಾಸ್ ಟೇಲರ್ ಏಕದಿನ ದಾಖಲೆ, ಬಾಂಗ್ಲಾ ವಿರುದ್ಧ ಕಿವೀಸ್‌ಗೆ ಸರಣಿ ಜಯ

ಕೇವಲ ಜಯವನ್ನೇ ಗಮನದಲ್ಲಿರಿಸಿಕೊಂಡಿರುವ ಆತಿಥೇಯ ನಾರ್ತ್ ಈಸ್ಟ್ ಯುನೈಟೆಡ್ ತಂಡ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಮೊದಲ ಬಾರಿಗೆ ಪ್ಲೇ ಆಫ್ ತಲಪುವ ಗುರಿಯೊಂದಿಗೆ ಅಂಗಣಕ್ಕೆ ಕಾಲಿಟ್ಟಿತು. ಪುಣೆಯ ಆಸೆ ದೂರವಾಗಿದ್ದು, ಅಚ್ಚರಿ ಏನಾದರೂ ನಡೆದರೆ ಪ್ಲೆ'ಆಫ್ ಹಂತ ತಲುಪಬಹುದು. ಪಂದ್ಯಗಳು ಕಡಿಮೆ ಉಳಿದಿರುವುದರಿಂದ ಈ ಆಸೆಯಿಂದ ಪುಣೆ ದೂರ ಸರಿದಿದೆ, ಆದರೆ ಜಯದೊಂದಿಗೆ ಮೂರು ಅಂಕ ಗಳಿಸುವ ಉದ್ದೇಶದಿಂದ ಮಾತ್ರ ದೂರವಾಗಿಲ್ಲ. 12 ಗೋಲುಗಳನ್ನು ಗಳಿಸಿರುವ ಬಾರ್ತ್‌ಲೋಮ್ಯೊ ಒಗ್ಬಚೆ ನಾರ್ತ್ ಈಸ್ಟ್ ತಂಡದ ಜಯದ ರೂವಾರಿ ಎನಿಸಿದ್ದಾರೆ. ಮೂರು ಅಂಕ ಗಳಿಸಿ ಮೊದಲ ಬಾರಿಗೆ ತಂಡವನ್ನು ಸೆಮಿಫೈನಲ್‌ಗೆ ಕೊಂಡೊಯ್ಯಲು ಎಲ್ಲ ಆಟಗಾರರೂ ಒಗ್ಗಟ್ಟಿನ ಹೋರಾಟ ನೀಡಲು ಸಜ್ಜಾದರು. ಮುಂಬೈ ವಿರುದ್ಧದ ಜಯ ನಾರ್ತ್ ಈಸ್ಟ್ ತಂಡದ ಆತ್ಮಬಲವನ್ನು ಹೆಚ್ಚಿಸಿರುವುದು ಸ್ಪಷ್ಟ. ಅದೇ ವಿಶ್ವಾಸದ ಮೇಲೆ ಪುಣೆ ವಿರುದ್ಧ ಗೆಲ್ಲಲು ಕಾರಣವಾಗಬಹುದು.

Story first published: Wednesday, February 20, 2019, 23:54 [IST]
Other articles published on Feb 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X