ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಇಂಡಿಯನ್ ಸೂಪರ್ ಲೀಗ್ ಫೈನಲ್: ಎಟಿಕೆ ಎದುರಾಳಿ ಚೆನ್ನೈಯಿನ್

By Isl Media
ISL 2020: Williams thrills ATK to final spot over Bengaluru

ಕೋಲ್ಕತ್ತಾ, ಮಾರ್ಚ್ 9: ಡೇವಿಡ್ ವಿಲಿಯಮ್ಸ್ (63 ಮತ್ತು 79ನೇ ನಿಮಿಷ) ಹಾಗೂ ರಾಯ್ ಕೃಷ್ಣ (30ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ತಂಡವನ್ನು 3-1 (ಸರಾಸರಿ ಗೋಲು 3-2) ಗೋಲುಗಳ ಅಂತರದಲ್ಲಿ ಮಣಿಸಿದ ಎಟಿಕೆ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನ ಫೈನಲ್ ತಲುಪಿದೆ. ಫೈನಲ್ ಪಂದ್ಯದಲ್ಲಿ ಚೆನ್ನೈಯಿನ್ ಹಾಗೂ ಎಟಿಕೆ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಇದರೊಂದಿಗೆ ಇಂಡಿಯನ್ ಸೂಪರ್ ಲೀಗ್ ನಲ್ಲಿ ಯಾವುದೇ ತಂಡ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಯಿತು.

ಮೊದಲಾರ್ಧ 1-1
ದಿಟ್ಟ ಹೋರಾಟ ನೀಡಿದ ಬೆಂಗಳೂರು ಹಾಗೂ ಎಟಿಕೆ ತಂಡಗಳು ಮೊದಲಾರ್ಧದ ಗೌರವವನ್ನು 1-1 ಗೋಲಿನಿಂದ ಹಂಚಿಕೊಂಡವು. ಪಂದ್ಯ ಆರಂಭಗೊಂಡ 5ನೇ ನಿಮಿಷದಲ್ಲಿ ಆಶಿಕ್ ಕುರುನಿಯಾನ್ ಗಳಿಸಿದ ಗೋಲಿನಿಂದ ಬೆಂಗಳೂರು ತಂಡ ಮೇಲುಗೈ ಸಾಧಿಸಿತು. ಸಾಮಾನ್ಯವಾಗಿ ಎಟಿಕೆ ಪಂದ್ಯದ ಮೇಲು ಪ್ರಭುತ್ವ ಸಾಧಿಸುತ್ತದೆ ಎಂಬ ನಂಬಿಕೆ ಎಲ್ಲರ ನಿರೀಕ್ಷೆಯಾಗಿತ್ತು, ಆದರೆ ಎಟಿಕೆ ಆ ನಿರೀಕ್ಷೆಯನ್ನು ತಲುಪಿರಲಿಲ್ಲ. 30ನೇ ನಿಮಿಷದಲ್ಲಿ ರಾಯ್ ಕೃಷ್ಣ ಗಳಿಸಿದ ಗೋಲು ಯುವಭಾರತಿ ಅಂಗಣದಲ್ಲಿ ನೆರೆದ ಪ್ರೇಕ್ಷಕರನ್ನು ಸಂಭ್ರಮದಲ್ಲಿ ತೇಲುವಂತೆ ಮಾಡಿತು. ಪ್ರಥಮಾರ್ಧ 1-1ರಲ್ಲಿ ಸಮಬಲಗೊಂಡಿತು. ಗೋಲು ಸರಾಸರಿಯಲ್ಲಿ ಬೆಂಗಳೂರು 2-1 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು.

ISL 2020: Williams thrills ATK to final spot over Bengaluru

ಸಮಬಲದ ಹೋರಾಟ
ಬೆಂಗಳೂರು ಎಫ್ ಸಿ ತಂಡಕ್ಕೆ ಆತಿಥ್ಯ ನೀಡುವ ಮೂಲಕ ಹೀರೋ ಇಂಡಿಯನ್ ಸೂಪರ್ ಲೀಗ್ ನ ಫೈನಲ್ ತಲಪುವ ಎರಡನೇ ತಂಡದ ತೀರ್ಮಾನವಾಗಲಿದೆ,.ಈಗಾಗಲೇ ಮೊದಲ ಪಂದ್ಯದಲ್ಲಿ ಗೆದ್ದ ಬೆಂಗಳೂರು ಯುವಭಾರತಿ ಕ್ರೀಡಾಂಗಣದಲ್ಲಿ ಜಯ ಗಳಿಸುವ ಉದ್ದೇಶದೊಂದಿಗೆ ಇತ್ತಂಡಗಳು ಅಂಗಣಕ್ಕಿಳಿದವು. ಬೆಂಗಳೂರು ಈಗಾಗಲೇ ಫೈನಲ್ ಹಾದಿಯನ್ನು ಸುಗಮಗೊಳಿಸಿಕೊಂಡಿದ್ದರಿಂದ ಎಟಿಕೆಗೆ ಕಠಿಣ ಸವಾಲು ಎದುರಾಗಿರುವುದು ಸಹಜ.

ಪಂದ್ಯ ಸಾಕಷ್ಟು ಕುತೂಹಲದ ಕ್ಷಣಗಳಿಗೆ ಸಾಕ್ಷಿಯಾಗುವುದು ಬಹುತೇಕ ಖಚಿತವಾಗಿದೆ. ರಾಯ್ ಕೃಷ್ಣ, ಡೇವಿಡ್ ವಿಲಿಯಮ್ಸ್ ಹಾಗೂ ಎಡು ಗಾರ್ಸಿಯಾ ಅವರ ಮೇಲೆ ಹೆಚ್ಚು ಅವಲಂಬಿತವಾಗಿರುವ ತಂಡಕ್ಕೆ ಜುವಾನನ್ ಗೊನ್ಸಾಲೀಸ್ ಆವರ ಲಭ್ಯ ತಂಡದ ಬಲವನ್ನು ಹೆಚ್ಚಿಸಿದೆ. ಬೆಂಗಳೂರಿನ ಡಿಫೆನ್ಸ್ ವಿಭಾಗವನ್ನು ನಿಯಂತ್ರಿಸಿದರೆ ಪಂದ್ಯದ ಮೇಲೆ ಪ್ರಭುತ್ವ ಸಾಧಿಸಬಹುದು ಎಂಬುದನ್ನು ಎಟಿಕೆ ಪಡೆ ಚೆನ್ನಾಗಿ ಅರಿತಿದೆ.

19 ಪಂದ್ಯಗಳಲ್ಲಿ ಕೇವನ 13 ಗೋಲುಗಳನ್ನು ನೀಡಿರುವುದು ಐಎಸ್ ಎಲ್ ನಲ್ಲಿ ಕಠಿಣವಾದುದು. ಕೊನೆಯ ಪಂದ್ಯದಲ್ಲಿ ಆಂಟೋನಿಯೋ ಹಬ್ಬಾಸ್ ಪಡೆ ಜಯ ಗಳಿಸಿ ಫೈನಲ್ ತಲುಪಬೇಕಾದರೆ ಡಿಫೇನ್ಸ್ ವಿಭಾಗವೇ ಪ್ರಮುಖ ಅಸ್ತ್ರವಾಗಬೇಕಿದೆ. ಮನೆಯಂಗಣಲ್ಲಿ ಉತ್ತಮ ದಾಖಲೆಯನ್ನು ಹೊಂದಿರುವ ಎಟಿಕೆ ಆಡಿರುವ ಒಂಬತ್ತು ಪಂದ್ಯಗಳಲ್ಲಿ ಆರರಲ್ಲಿ ಜಯ ಗಳಿಸಿದೆ. ಗಳಿಸಿರುವ 33 ಗೋಲುಗಳಲ್ಲಿ 18 ಗೋಲುಗಳು ಮನೆಯಲ್ಲೇ ದಾಖಲಾಗಿವೆ. ಎಲ್ಲಕ್ಕಿಂತ ಮುಖ್ಯವಾಗಿ ಲೀಗ್ ಪಂದ್ಯದಲ್ಲಿ ಕೋಲ್ಕೊತಾಕ್ಕೆ ಆಗಮಿಸಿದ ಬೆಂಗಳೂರಿಗೆ ಎಟಿಕೆ ಸೋಲಿನ ಆಘಾತ ನೀಡಿತ್ತು.

ಎಟಿಕೆ ತಂಡ ಬಹಳ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಾಗಿದೆ, ಒಂದು ಸಣ್ಣ ಪ್ರಮಾದವೂ ಬೆಂಗಳೂರಿನ ಜಯಕ್ಕೆ ಹಾದಿ ಮಾಡಿಕೊಡಬಹುದು. ಅರಂದಂ ಭಟ್ಟಾಚಾರ್ಯ ಮಾಡಿದ ಪ್ರಮಾದದಿಂದಾಗಿ ದೆಶ್ರಾನ್ ಬ್ರೌನ್ ಗೋಲು ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು. ಬೆಂಗಳೂರು ತಂಡ ನಾವು 2-1 ಅಥವಾ 3-2 ಅಂತರದಲ್ಲಿ ಸೋಲನುಭವಿಸಿದರೂ ಫೈನಲ್ ಪ್ರವೇಶಿಸುವುದು ಖಚಿತ.

Story first published: Monday, March 9, 2020, 2:44 [IST]
Other articles published on Mar 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X