ಇಂದಿನಿಂದ ಐಎಸ್‌ಎಲ್ ಆರಂಭ: ಮೊದಲ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಹಾಗೂ ಈಸ್ಟ್ ಬೆಂಗಾಲ್ ಮುಖಾಮುಖಿ

ಭಾರತದ ಖ್ಯಾತ ಫುಟ್ಬಾಲ್ ಲೀಗ್ ಇಂಡಿಯನ್ ಸೂಪರ್ ಲೀಗ್‌ನ 2022-23ನೇ ಆವೃತ್ತಿಗೆ ಇಂದು ಚಾಲನೆ ದೊರೆಯಲಿದೆ. ಕೇರಳದ ಕೊಚ್ಚಿಯಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದು ಮೊದಲ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡಕ್ಕೆ ಈಸ್ಟ್ ಬೆಂಗಾಲ್ ತಂಡ ಸವಾಲೊಡ್ಡಲಿದೆ. 11 ತಂಡಗಳು ಈ ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಸ್ಪರ್ಧಿಸಲಿದ್ದು ಮೊದಲಿಗೆ ಲೀಗ್ ಹಂತ ನಂತರ ಪ್ಲೇಆಫ್ ಹಾಗೂ ಬಳಿಕ ಫೈನಲ್ ಪಂದ್ಯ ನಡೆಯಲಿದೆ.

ಈ ಬಾರಿ ಪ್ಲೇಆಫ್ ಹೊಸ ಮಾದರಿಯಲ್ಲಿ ನಡೆಯಲಿದ್ದು ಟೂರ್ನಿಯ ಕುತೂಹಲವನ್ನು ಹೆಚ್ಚಿಸಿದೆ. ಒಟ್ಟು 11 ತಂಡಗಳು ಭಾಗವಹಿಸುವ ಟೂರ್ನಿ ಇದಾಗಿದ್ದು ಒಂದೇ ಗುಂಪಿನಲ್ಲಿದ್ದು ಎಲ್ಲಾ ತಂಡಗಳು ತಲಾ ಎರಡು ಬಾರಿ ಲೀಗ್ ಹಂತದಲ್ಲಿ ಮುಖಾಮುಖಿಯಾಗಲಿದೆ. ಹೋಮ್ ಮತ್ತು ಅವೇ ಮಾದರಿಯಲ್ಲಿ ಈ ಮುಖಾಮುಖಿ ನಡೆಯಲಿದೆ.

IND vs SA 2022 : ಮೊದಲನೆ ಏಕದಿನ ಪಂದ್ಯದಲ್ಲಿ ನಿರ್ಮಾಣವಾದ ಮೂರು ದಾಖಲೆಗಳಿವುIND vs SA 2022 : ಮೊದಲನೆ ಏಕದಿನ ಪಂದ್ಯದಲ್ಲಿ ನಿರ್ಮಾಣವಾದ ಮೂರು ದಾಖಲೆಗಳಿವು

ಪ್ಲೇಆಫ್‌ಗೆ ಹೊಸ ಮಾದರಿ

ಪ್ಲೇಆಫ್‌ಗೆ ಹೊಸ ಮಾದರಿ

ಕಳೆದ ಆವೃತ್ತಿಯ ವರೆಗೆ ಲೀಗ್ ಹಂತದಲ್ಲಿ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದ ತಂಡಗಳು ಸೆಮಿಫೈನಲ್‌ಗೆ ಪ್ರವೇಶ ಪಡೆದು ಅಲ್ಲಿ ಫೈನಲ್ ಹಂತಕ್ಕೆ ಹೋರಾಟ ನಡೆಸುತ್ತಿದ್ದವು. ಆದರೆ ಈ ಬಾರಿ ಕುತೂಹಲಕಾರಿ ಬದಲಾವಣೆ ಮಾಡಿಕೊಳ್ಳಲಾಗಿದೆ. ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆದುಕೊಂಡ ತಂಡಗಳು ನೇರವಾಗಿ ಸೆಮಿಫೈನಲ್‌ಗೆ ಪ್ರವೇಶ ಪಡೆಯಲಿದೆ. ನಂತರದ ಎರಡು ಸ್ಥಾನಗಳಿಗೆ ಎಲಿಮಿನೇಟರ್ ಪಂದ್ಯಗಳು ನಡೆಯಲಿದೆ. ಇಲ್ಲಿ ಮೂರನೇ ಸ್ಥಾನದಲ್ಲಿರುವ ತಂಡ ಹಾಗೂ 6ನೇ ಸ್ಥಾನದಲ್ಲಿರುವ ತಂಡಗಳು ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾದರೆ ಎರಡನೇ ಎಲಿಮಿನೇಟರ್ ಪಂದ್ಯದಲ್ಲಿ 4 ಹಾಗೂ 5ನೇ ಸ್ಥಾನದಲ್ಲಿರುವ ತಂಡಗಳು ಮುಖಾಮುಖಿಯಾಗಲಿದೆ.

ಮೊದಲ ಎಲಿಮಿನೇಟರ್‌ನಲ್ಲಿ ಗೆದ್ದ ತಂಡ ಸೆಮಿಫೈನಲ್‌ನಲ್ಲಿ ಅಗ್ರಸ್ಥಾನದ ತಂಡವನ್ನು ಎದುರಿಸಿದರೆ ಎರಡನೇ ಎಲಿಮಿನೇಟರ್‌ನಲ್ಲಿ ಗೆದ್ದ ತಂಡ ಎರಡನೇ ಸ್ಥಾನವನ್ನು ಪಡೆದ ತಂಡವನ್ನು ಸೆಮಿಫೈನಲ್‌ನಲ್ಲಿ ಎದುರಿಸಲಿದೆ. ಇಲ್ಲಿ ಗೆದ್ದ ತಂಎಡಗಳು ಫೈನಲ್‌ಗೆ ಪ್ರವೇಶಿಸಲಿದೆ.

ಸ್ಕ್ವಾಡ್ ನಿಯಮ ಹೀಗಿದೆ

ಸ್ಕ್ವಾಡ್ ನಿಯಮ ಹೀಗಿದೆ

ಪ್ರತಿ ಐಎಸ್ಎಲ್ ಕ್ಲಬ್ ಕನಿಷ್ಠ 25 ಮತ್ತು ಗರಿಷ್ಠ 35 ಆಟಗಾರರನ್ನು ಹೊಂದಲು ಅವಕಾಶವಿದೆ. ಇದರಲ್ಲಿ ಆರು ವಿದೇಶೀ ಆಟಗಾರರಿಗೆ ಅವಕಾಶವಿದ್ದು ಈ ಪೈಕಿ ಒಬ್ಬರು ಏಷ್ಯಾದ ಯಾವುದಾದರೂ ರಾಷ್ಟ್ರದವರಾಗಿರುವುದು ಕಡ್ಡಾಯವಾಗಿದೆ.

9ನೇ ಆವೃತ್ತಿಯ ಐಎಸ್‌ಎಲ್ ಟೂರ್ನಿ

9ನೇ ಆವೃತ್ತಿಯ ಐಎಸ್‌ಎಲ್ ಟೂರ್ನಿ

ಈ ಬಾರಿ 9ನೇ ಆವೃತ್ತಿಯ ಲೀಗ್ ನಡೆಯುತ್ತಿದೆ. ಕಳೆದ ಆವೃತ್ತಿಯಲ್ಲಿ ಹೈದರಾಬಾದ್ ಎಫ್‌ಸಿ ತಂಡ ಚಾಂಪಿಯ್ ಆಗಿದ್ದರೆ ಕೇರಳ ಬ್ಲಾಸ್ಟರ್ಸ್ ತಂಡ ರನ್ನರ್‌ಅಪ್ ತಂಡವಾಗಿತ್ತು. ಪಶ್ಚಿಮ ಬಂಗಾಳದ ಕೊಲ್ಕತ್ತಾ ಮೂಲದ ಎಟಿಕೆ ಮೋಹನ್ ಬಾಗನ್ ಟೂರ್ನಿಯ ಯಶಸ್ವಿ ಫುಟ್ಬಾಲ್ ಕ್ಲಬ್ ಎನಿಸಿದ್ದು ಟೂರ್ನಿಯಲ್ಲಿ ಮೂರು ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಇನ್ನು ಬೆಂಗಳೂರು ಮೂಲದ ಬೆಂಗಳುರು ಫುಟ್ಬಾಲ್ ಕ್ಲಬ್ ಒಂದು ಬಾರಿ ಚಾಂಪಿಯನ್ ಪಟ್ಟಕ್ಕೇರಿದ ಸಾಧನೆ ಮಾಡಿದ್ದು ಈ ಬಾರಿಯೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.

For Quick Alerts
ALLOW NOTIFICATIONS
For Daily Alerts
ಫಿಫಾ ವಿಶ್ವಕಪ್ ಪೂರ್ವಭಾವಿಗಳು
VS
Story first published: Friday, October 7, 2022, 17:32 [IST]
Other articles published on Oct 7, 2022
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X