ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

'ಪೆನಾಲ್ಟಿಗೆ ಅವಕಾಶ ಕೊಡಲಿಲ್ಲ, ಕೆಲವೊಮ್ಮೆ ಅದು ಲಾಟರಿ ಇದ್ದಂತೆ'

ISL analysis: We didnt want to take it to penalties, says Carles Cuadrat

ಮಂಬೈ ಮಾರ್ಚ್ 18 : ಭಾನುವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಎಫ್ ಸಿ ಗೋವಾ ವಿರುದ್ಧ ಏಕೈಕ ಗೋಲಿನಿಂದ ಜಯ ಗಳಿಸಿದ ಬೆಂಗಳೂರು ಫುಟ್ಬಾಲ್ ಕ್ಲಬ್ ಮೊದಲ ಬಾರಿಗೆ ಇಂಡಿಯನ್ ಸೂಪರ್ ಲೀಗ್ ಪ್ರಶಸ್ತಿ ಗೆದ್ದುಕೊಂಡಿತು. ಮೊದಲ ಬಾರಿಗೆ ಲೀಗ್‌ನಲ್ಲಿ ಅಗ್ರ ಸ್ಥಾನ ಗಳಿಸಿದ ತಂಡವೊಂದು ಪ್ರಶಸ್ತಿ ಗೆದ್ದುಕೊಂಡಿತು.

ಕಳೆದ ವರ್ಷ ಲೀಗ್ ಹಂತದಲ್ಲಿ ಅಗ್ರ ಸ್ಥಾನ ಪಡೆದು ಫೈನಲ್ ಪ್ರವೇಶಿಸಿದ್ದರೂ ಬೆಂಗಳೂರು ತಂಡ ಚೆನ್ನೈಯಿನ್ ವಿರುದ್ಧ ಫೈನಲ್‌ನಲ್ಲಿ ಸೋಲನುಭವಿಸಿತ್ತು, ಆ ಸೋಲಿನ ನಂತರ ಅಲ್ಬರ್ಟ್ ರೋಕಾ ಕ್ಲಬ್ ತೊರೆದರೂ ಕಾರ್ಲಸ್ ಕ್ವಾಡಾರ್ಟ್ ತಂಡವನ್ನು ಅದ್ಭುತವಾಗಿ ಸಜ್ಜುಗೊಳಿಸಿ ಪ್ರಶಸ್ತಿ ಗೆಲ್ಲುವಂತೆ ಮಾಡಿದರು.

 ಗೋವಾ ಸೋಲಿಸಿ ಐಎಸ್‌ಎಲ್ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಿದ ಬೆಂಗಳೂರು! ಗೋವಾ ಸೋಲಿಸಿ ಐಎಸ್‌ಎಲ್ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಿದ ಬೆಂಗಳೂರು!

'ಅಲ್ಬರ್ಟ್ ರೋಕಾ ಅವರು ಸೋಲಿನ ನಂತರ ಮನೆಗೆ ಹಿಂದಿರುಗಿ ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುವುದಾಗಿ ಹೇಳುತ್ತಿದ್ದರು, ಆ ಸಂದ'ರ್ದಲ್ಲಿ ಆಟಗಾರರು ಕಾರ್ಲಸ್ ಅವರು ಆ ಕೆಲಸವನ್ನು ಮುಂದುವರಿಸಬಲ್ಲರು ಎಂದು ನಂಬಿಕೊಂಡಿದ್ದೆ, ನಾನು ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ಏನೇ ಜವಾಬ್ದಾರಿ ವಹಿಸಿದರೂ ಆಟಗಾರರು ನಿಭಾಯಿಸುತ್ತಿದ್ದರು.

ಐಎಲ್‌ಎಲ್: ಕೊನೆಗೂ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಸ್ಪೇನ್ ಕ್ರಾಂತಿ

ಆರಂಭದಿಂದಲೂ ನಾವು ಕಳೆದ ಋತುವಿಗಿಂತ ಪ್ರತಿ ದಿನವೂ ಬದಲಾಗುತ್ತಿದ್ದೆವು, ನಾವು ಹಾಕಿಕೊಂಡಿರುವ ಯೋಜನೆಯಲ್ಲಿ ನಂಬಿಕೆ ಇರಿಸಿದ್ದೆವು,' ಎಂದು ಕ್ವಾಡ್ರಾಟ್ ಹೇಳಿದ್ದಾರೆ.

1
1053230

ಗೋವಾ ತಂಡ ಫೈನಲ್ ಪಂದ್ಯದಲ್ಲಿ ನೀಡಿರುವ ದಿಟ್ಟ ಹೋರಾಟದ ಬಗ್ಗೆ ಸ್ಪೇನ್ ಮೂಲದ ಕೋಚ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾವು ರೂಪಿಸಿರುವ ರಣತಂತ್ರ ಉತ್ತಮ ರೀತಿಯಲ್ಲಿ ಫಲ ನೀಡಿದೆ, ಅದರ ಪ್ರತಿಲವೇ ಎಂಬಂತೆ ರಾಹಲ್ ಭಿಕೆ ಚಾಂಪಿಯನ್ ಗೋಲು ಗಳಿಸಿದರು.

ಪೆನಾಲ್ಟಿ ಪ್ರವೇಶದ ಮೇಲೆ ಹೆಚ್ಚು ನಂಬಿಕೆ ಇಟ್ಟಿಲ್ಲ

ಪೆನಾಲ್ಟಿ ಪ್ರವೇಶದ ಮೇಲೆ ಹೆಚ್ಚು ನಂಬಿಕೆ ಇಟ್ಟಿಲ್ಲ

'ನಾವು ಪೆನಾಲ್ಟಿ ಪ್ರವೇಶದ ಮೇಲೆ ಹೆಚ್ಚು ನಂಬಿಕೆ ಇಟ್ಟಿಲ್ಲ, ಏಕೆಂದರೆ ಇದು ಅನೇಕ ಬಾರಿ ಲಾಟರಿಯಾಗಿ ಪರಿಣಮಿಸುತ್ತದೆ. ಒಂದು ಬಾರಿ ಚೆಂಡನ್ನು ನೆಟ್‌ಗೆ ತಲುಪಿಸಿದ್ದು ಖುಷಿ ಕೊಟ್ಟಿದೆ. ಐಎಸ್‌ಎಲ್ ಫೈನಲ್‌ನಲ್ಲಿ ಇದುವರೆಗೂ 14 ಗೋಲುಗಲು ದಾಖಲಾಗಿದೆ, ಅದರಲ್ಲಿ ನಿನ್ನೆಯ ಗೋಲು ಅತ್ಯಂತ ಅದ್ಭುತವಾದದು, ಈ ಬಗ್ಗೆ ನಾವು ಕಠಿಣ ಶ್ರಮವಹಿಸಿದ್ದೇವೆ,‘ ಎಂದು ಸ್ಪೇನ್ ಮೂಲದ ಕೋಚ್ ಹೇಳಿದರು.

ಗೋವಾ ತಂಡಕ್ಕೆ ಗೋಲು ಗಳಿಸಲು ಹೆಚ್ಚಿನ ಅವಕಾಶ ಸಿಗಲಿಲ್ಲ

ಗೋವಾ ತಂಡಕ್ಕೆ ಗೋಲು ಗಳಿಸಲು ಹೆಚ್ಚಿನ ಅವಕಾಶ ಸಿಗಲಿಲ್ಲ

ಈ ಋತುವಿನಲ್ಲಿ ಬೆಂಗಳೂರು ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಲ್ಬರ್ಟ್ ಸರಾನ್ ಅವರನ್ನು ಕೈ ಬಿಟ್ಟಿರುವುದು ಅಪಾಯದ ತೀರ್ಮಾನವಾಗಿತ್ತು. ಆದರೆ ಅದು ತಂಡದ ಫಲಿತಾಂಶದ ಮೇಲೆ ಪ್ರಭಾವ ಬೀರಿತು.

‘ಆ ಡಿಫೆನ್ಸ್ ವಿರುದ್ಧ ಆಡುವುದು ಅಪಾಯಕಾರಿ, ಅಲ್ಪರ್ಟ್ ಸರಾನ್ ನಮ್ಮ ಪಾಲಿಗೆ ಅಮೂಲ್ಯ ಆಟಗಾರ, ‘ಭಾರತದ ಡಿಫೆಂಡರ್‌ಗಳಾದ ರಾಹುಲ್ ಭಿಕೆ, ನಿಶು ಕುಮಾರ್ ಹಾಗೂ ಹರ್ಮನ್‌ಜೋತ್ ಖಬ್ರಾ ಅವರು ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಿರುವುದು ಖುಷಿ ಪಟ್ಟಿದೆ. ಗೋವಾ ತಂಡಕ್ಕೆ ಗೋಲು ಗಳಿಸಲು ಹೆಚ್ಚಿನ ಅವಕಾಶ ಸಿಗಲಿಲ್ಲ, ಫೆರಾನ್ ಕೊರೊಮಿನಾಸ್ ನಮ್ಮ ವಿರುದ್ಧ ನಡೆದ ಮೂರು ಪಂದ್ಯಗಳಲ್ಲಿ ಅಷ್ಟು ಪರಿಣಾಮಕಾರಿಯಾಗಿ ಆಡಿರಲಿಲ್ಲ.‘ ಎಂದು ಕ್ವಾಡ್ರಾಟ್ ಹೇಳಿದರು.

ಕೋಚ್ ಮಾಡಿದ ಬದಲಾವಣೆ ಮೆಚ್ಚಿದ ನಾಯಕ ಛೆಟ್ರಿ

ಕೋಚ್ ಮಾಡಿದ ಬದಲಾವಣೆ ಮೆಚ್ಚಿದ ನಾಯಕ ಛೆಟ್ರಿ

ತಂಡದ ನಾಯಕ ಸುನಿಲ್ ಛೆಟ್ರಿ ಕೂಡ ತಂಡದಲ್ಲಿ ಕೋಚ್ ಮಾಡಿರುವ ಬದಲಾವಣೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ರೋಕಾ ಅವರ ತರಬೇತಿಯಲ್ಲಿ ಆಡುತ್ತಿರುವುದಕ್ಕೂ ಕ್ವಾಡ್ರಾಟ್ ಅವರ ತರಬೇತಿಯಲ್ಲಿ ಆಡಿದ ತಂಡಕ್ಕೂ ವ್ಯತ್ಯಾಸವಿದೆ. ಈ ತಂಡ ಹೆಚ್ಚು ಪ್ರಗತಿಶೀಲವಾಗಿದೆ,‘ ಎಂದು ಅವರು ಹೇಳಿದ್ದಾರೆ. ಗೋವಾ ತಂಡದ ಕೋಚ್ ಸರ್ಗಿಯೊ ಲೊಬೆರಾ ಕೂಡ ತಮ್ಮ ತಂಡದ ಆಟಗಾರರ ಯಶಸ್ಸಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೆಚ್ಚುವರಿ ಸಮಯದ ಪ್ರಥಮಾರ್ಧದಲ್ಲಿ ಅಹಮ್ಮದ್ ಜಾಹೋವ್ ಅವರಿಗೆ ರೆಡ್ ಕಾರ್ಡ್ ಸಿಕ್ಕಿದ್ದು ಪಂದ್ಯದ ಗತಿಯನ್ನೇ ಬದಲಾಯಿಸಿತು ಎಂದು ಗೋವಾದ ಕೋಚ್ ಹೇಳಿದ್ದಾರೆ.

ನಮ್ಮ ತಂಡದ ಆಟಗಾರರು ತೋರಿದ ಸಾಧನೆಯ ಬಗ್ಗೆ ಖುಷಿ ಇದೆ

ನಮ್ಮ ತಂಡದ ಆಟಗಾರರು ತೋರಿದ ಸಾಧನೆಯ ಬಗ್ಗೆ ಖುಷಿ ಇದೆ

‘ಹೆಚ್ಚುವರಿ ಸಮಯದ ಪ್ರಥಮಾರ್ಧದಲ್ಲಿ ನಾವು ಒಬ್ಬ ಆಟಗಾರರನ್ನು ಕಳೆದುಕೊಂಡಿದ್ದು ಪಂದ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಿತು, ಅತ್ಯಂತ ರೋಚಕ ಹಂತದಿಂದ ಕೂಡಿದ್ದ ಪಂದ್ಯ, ಅಲ್ಪ ಬದಲಾವಣೆ ಪಂದ್ಯದ ಗತಿಯನ್ನೇ ಬದಲಾಯಿಸಿತು. ರೆಡ್ ಕಾರ್ಡ್ ನಮ್ಮನ್ನು ಅಂಗವಿಕಲರನ್ನಾಗಿ ಮಾಡಿತು, ಬೆಂಗಳೂರು ತಂಡ ನಮಗಿಂತ ಉತ್ತಮವಾಗಿ ಕಾಣಲಿಲ್ಲ, ಅದೇ ರೀತಿ ನಮ್ಮ ತಂಡ ಕೂಡ ಬೆಂಗಳೂರಿಗಿಂತ ಉತ್ತಮವಾಗಿ ಕಾಣಲಿಲ್ಲ, ಅದೊಂದು ಉತ್ತಮ ಪಂದ್ಯವಾಗಿತ್ತು, ಬೆಂಗಳೂರು ತಂಡಕ್ಕೆ ನಮ್ಮ ನೈಜ ಆಟವನ್ನು ನಿಯಂತ್ರಿಸಲಾಗಲಿಲ್ಲ, ನಾವು ಹೇಗೆ ಆಡಬೇಕೆಂದು ತೀರ್ಮಾನಿಸಿದ್ದೆವೋ ಅದೇ ರೀತಿಯಲ್ಲಿ ಆಡಿದೆವು, ನಮ್ಮ ತಂಡದ ಆಟಗಾರರು ತೋರಿದ ಸಾಧನೆಯ ಬಗ್ಗೆ ಖುಷಿ ಇದೆ, ‘ ಎಂದು ಲೊಬೆರಾ ಹೇಳಿದ್ದಾರೆ.

Story first published: Monday, March 18, 2019, 20:25 [IST]
Other articles published on Mar 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X