ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ ಫೈನಲ್: ಚೊಚ್ಚಲ ಪ್ರಶಸ್ತಿಗಾಗಿ ಬೆಂಗಳೂರು, ಗೋವಾ ಫೈಟ್

By Isl Media
ISL Final: Bengaluru, Goa chase elusive ISL trophy

ಮುಂಬೈ, ಮಾರ್ಚ್ 16: ಈ ಎರಡೂ ತಂಡಗಳು ಹಿಂದೆ ಪ್ರಶಸ್ತಿಗಾಗಿ ಹೋರಾಡಿದ್ದವು, ಆದರೆ ವೈಫಲ್ಯಕಂಡಿದ್ದವು. ಈ ಬಾರಿ ಹಿಂದೆ ಸೋತಂತ ಎರಡೂ ತಂಡಗಳು ಮುಖಾಮುಖಿಯಾಗಲಿವೆ. ಭಾನುವಾರ ಮಾರ್ಚ್ 17) ಮುಂಬೈ ಫುಟ್ಬಾಲ್ ಅರೆನಾದಲ್ಲಿ ನಡೆಯಲಿರುವ ಹೀರೋ ಇಂಡಿಯನ್ ಸೂಪರ್ ಲೀಗ್ ಫೈನಲ್‌ನಲ್ಲಿ ಹೊಸ ಚಾಂಪಿಯನ್ ಮೂಡಿಬರುವುದು ಸ್ಪಷ್ಟ.

IPL 2019: ಟೂರ್ನಿಯ ಅವಿಸ್ಮರಣೀಯ ಪಂದ್ಯ ಮೆಲುಕು ಹಾಕಿದ ವಿರಾಟ್ ಕೊಹ್ಲಿIPL 2019: ಟೂರ್ನಿಯ ಅವಿಸ್ಮರಣೀಯ ಪಂದ್ಯ ಮೆಲುಕು ಹಾಕಿದ ವಿರಾಟ್ ಕೊಹ್ಲಿ

ಲೀಗ್ ಹಂತದಲ್ಲಿ ಬಲಿಷ್ಠವೆನಿಸಿರುವ ಎರಡು ತಂಡಗಳು ಫೈನಲ್ ಪ್ರವೇಶಿಸಿವೆ. ಈ ಹಿಂದೆಯೂ ಈ ಎರಡು ತಂಡಗಳು ಫೈನಲ್‌ಗೆ ಲಗ್ಗೆ ಇಟ್ಟಿದ್ದವು. ಬೆಂಗಳೂರು ತಂಡ ಕಳೆದ ವರ್ಷ ಫೈನಲ್ ತಲುಪಿ ಚೆನ್ನೈಯಿನ್ ವಿರುದ್ಧ ಸೋಲನುಭವಿಸಿತ್ತು. 2015ರಲ್ಲಿ ಗೋವಾ ತಂಡ ಚೆನ್ನೈಯಿನ್ ವಿರುದ್ಧ ಸೋತು ಪ್ರಶಸ್ತಿಯಿಂದ ವಂಚಿತವಾಗಿತ್ತು.

ಪಂದ್ಯದ Live Score ಕೆಳಗಿದೆ. ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
1053230

'ಭಾರತದ ಫುಟ್ಬಾಲ್ ಇತಿಹಾಸದಲ್ಲೇ ಅತ್ಯಂತ ಕುತೂಹಲದ ಹೋರಾಟವೆನಿಸಿರುವ ಫೈನಲ್‌ನಲ್ಲಿ ಬೆಂಗಳೂರು ತಂಡ ೇವರಿಟ್ ಆಗಿ ಕಂಡು ಬಂದಿದೆ. ಆದರೆ ಇದೇ ಅಂಗಣದಲ್ಲಿ ಮುಂಬೈ ಸಿಟಿ ತಂಡವನ್ನು5-2 ಗೋಲುಗಳಿಂದ ಸೋಲಿಸಿದ ಗೋವಾ ವಿರುದ್ಧ ಬೆಂಗಳೂರು ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತದೆ.

ಅಂತಾರಾಷ್ಟ್ರೀಯ ಏಕದಿನಕ್ಕೆ ದಕ್ಷಿಣ ಆಫ್ರಿಕಾ ಆಲ್ ರೌಂಡರ್ ಡುಮಿನಿ ವಿದಾಯಅಂತಾರಾಷ್ಟ್ರೀಯ ಏಕದಿನಕ್ಕೆ ದಕ್ಷಿಣ ಆಫ್ರಿಕಾ ಆಲ್ ರೌಂಡರ್ ಡುಮಿನಿ ವಿದಾಯ

ಸಂಘಟಿತ ಹೋರಾಟ ನೀಡುವ ಬೆಂಗಳೂರು ತಂಡ ಸಮತೋಲನದಿಂದ ಕೂಡಿದ ಪಡೆಯಾಗಿದೆ. ಈ ಬಾರಿಯ ಲೀಗ್ ಹಂತದ 11 ಪಂದ್ಯಗಳಲ್ಲಿ ಅಜೇಯವಾಗಿ ಸಾಗಿದ್ದ ಬೆಂಗಳೂರು ತಂಡ ಇದೇ ಮುಂಬೈ ಅರೆನಾದಲ್ಲಿ ಸೋತಿತ್ತು. ಆ ನಂತರ ಸಂಘಟಿತ ಹೋರಾಟ ನೀಡಿ ಹಲವಾರು ಸವಾಲುಗಳನ್ನು ಹತ್ತಿಕ್ಕಿ ಫೈನಲ್ ಪ್ರವೇಶಿಸಿತ್ತು.

ಗೋಲಿನಲ್ಲಿ ಗೋವಾ ಮುಂದು

ಗೋಲಿನಲ್ಲಿ ಗೋವಾ ಮುಂದು

ಗೋಲು ಗಳಿಸುವುದರಲ್ಲಿ ಗೋವಾ ತಂಡವನ್ನು ಹಿಂದಿಕ್ಕಲು ಈ ಬಾರಿಯೂ ಯಾವುದೇ ತಂಡದಿಂದ ಸಾಧ್ಯವಾಗಲಿಲ್ಲ. ಮಿಂಚಿನ ವೇಗ, ಸಂಘಟಿತ ಹೋರಾಟ ಇವುಗಳಿಂದಾಗಿ ಗೋವಾ ತಂಡ ಇದುವರೆಗೂ 41 ಗೋಲುಗಳನ್ನು ಗಳಿಸಿತ್ತು. ಗೋವಾ ತಂಡದಲ್ಲಿ ದೌರ್ಬಲ್ಯವೆಂಬುದು ವಿರಳ ಏಕೆಂದರೆ ಅತ್ಯಂತ ಸಮತೋಲನದ ತಂಡವಾಗಿ ಗೋವಾ ಬೆಳೆದು ನಿಂತಿದೆ.
ಗೋವಾ ಬೇರೆ ಎಲ್ಲ ತಂಡಗಳ ವಿರುದ್ಧ ಯಶಸ್ಸು ಕಂಡಿದ್ದರೂ ಬೆಂಗಳೂರು ವಿರುದ್ಧ ಆಡುವಾಗ ತನ್ನ ನೈಜ ಆಟವನ್ನು ಮರೆತಂತೆ ಆಡುತ್ತಿತ್ತು. ಈ ಬಾರಿ ಆಡಿರುವ ಎರಡೂ ಪಂದ್ಯಗಳಲ್ಲಿ ಸೋತಿತ್ತಲ್ಲದೆ, ಐದು ಗೋಲುಗಳನ್ನು ನೀಡಿತ್ತು. ಈ ರೀತಿಯ ಮಾನಸಿಕವಾದ ಲಾಭ ಜತೆಯಲ್ಲಿ ‘ಭಾರತದ ಉತ್ತಮ ಆಟಗಾರರಿಂದ ಕೂಡಿರುವ ಬೆಂಗಳೂರು ತಂಡ ‘ಭಾನುವಾರದ ಫೈನಲ್‌ನಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸುವುದು ಸಹಜ.

ಗೆಲ್ಲುವುದಕ್ಕಾಗಿ ಉತ್ಸುಕ

ಗೆಲ್ಲುವುದಕ್ಕಾಗಿ ಉತ್ಸುಕ

‘ನನ್ನ ಆಟಗಾರರ ಬಗ್ಗೆ ನನಗೆ ಗೊತ್ತು. ಅವರು ಪ್ರಶಸ್ತಿ ಗೆಲ್ಲುವುದಕ್ಕಾಗಿ ಉತ್ಸುಕರಾಗಿದ್ದಾರೆ. ಅವರು ಅತ್ಯಂತ ತಾಳ್ಮೆಯಿಂದ ಆಡಬೇಕೆಂಬುದು ನನ್ನ ಹಂಬಲ. ನಮಗೆ ಉಪಯೋಗವಾಗುವ ರೀತಿಯಲ್ಲಿ ಉತ್ತಮ ಆಟ ಪ್ರದರ್ಶಿಸಿದರೆ ಯಶಸ್ಸು ಸಹಜವಾಗಿಯೇ ಸಿಗುತ್ತದೆ. ಫೈನಲ್ ಎಂದಾಗ ಅಲ್ಲೊಂದು ವಿಶೇಷ ಪ್ರದರ್ಶನ ನೀಡಬೇಕೆಂಬುದು ಎಲ್ಲರ ಗಮನದಲ್ಲಿರುತ್ತದೆ. ಫುಟ್ಬಾಲ್ ಇತಿಹಾಸದಲ್ಲೇ ಎಲ್ಲ ಕಡೆ ಇದು ನಡೆಯುತ್ತದೆ. ದೊಡ್ಡ ಆಟದಲ್ಲಿ ಕೆಲವು ಆಟಗಾರರು ಮಿಂಚುತ್ತಾರೆ. ನಮ್ಮ ತಂಡದಲ್ಲಿ ಸುನಿಲ್, ಗುರ್‌ಪ್ರೀತ್, ಉದಾಂತ್ ಅವರಂಥ ಆಟಗಾರರಿದ್ದಾರೆ. ಅಲ್ಲದೆ ಪಂದ್ಯದಲ್ಲಿ ಮಿಂಚಬಲ್ಲ ಇತರ ಆಟಗಾರರೂ ಇದ್ದಾರೆ. ಗೋವಾ ತಂಡದಲ್ಲೂ ಉತ್ತಮ ಆಟಗಾರರಿದ್ದಾರೆ. ಅವರು ಕೂಡ ಯಶಸ್ಸಿನ ಹಾದಿ ತಲುಪಬಲ್ಲ ಆಟಗಾರರು,‘ ಎಂದು ಬೆಂಗಳೂರು ತಂಡದ ಕೋಚ್ ಕ್ವಾಡ್ರಾಟ್ ಹೇಳಿದ್ದಾರೆ.

ಹಗುರವಾಗಿ ಕಾಣುವಂತಿಲ್ಲ

ಹಗುರವಾಗಿ ಕಾಣುವಂತಿಲ್ಲ

ಬೆಂಗಳೂರು ತಂಡದ ಕೋಚ್ ಹೇಳಿರುವಂತೆ ಗೋವಾ ತಂಡವನ್ನು ಯಾವುದೇ ಕಾರಣಕ್ಕೂ ಹಗುರವಾಗಿ ಕಾಣುವಂತಿಲ್ಲ. 16 ಗೋಲುಗಳನ್ನು ಗಳಿಸಿ ಗೋಲ್ಡನ್ ಬೂಟ್ ಧರಿಸಲು ಸಜ್ಜಾಗಿರುವ ಫೆರಾನ್ ಕೊರೊಮಿನಾಸ್ ಅವರಂಥ ಆಟಗಾರರು ಇರುವಾಗ ಗೋವಾ ಯಾವತ್ತೂ ಅಪಾಯಕಾರಿ ತಂಡ. ಹ್ಯುಗೋ ಬೌಮಾಸ್ ಹಾಗೂ ಎಡು ಬೇಡಿಯಾ ನೀಡುವ ಪಾಸ್‌ಗಳು ಕೊರೊಮಿನಾಸ್‌ಗೆ ಸುಲ‘ವಾಗಿ ಗೋಲು ಗಳಿಸುವಂತಿರುತ್ತದೆ. ಅದೊಂದು ಆಕ್ರಮಣಕಾರಿ ಸಂಘಟಿತ ತಂಡ.

ಸೆಂಟರ್ ಬ್ಯಾಕ್ ವಿಭಾಗ ಗೋವಾದ ನೈಜ ಶಕ್ತಿ

ಸೆಂಟರ್ ಬ್ಯಾಕ್ ವಿಭಾಗ ಗೋವಾದ ನೈಜ ಶಕ್ತಿ

ಕಾರ್ಲೋಸ್ ಪೆನಾ ಹಾಗೂ ಮೌರ್ತದಾ ಫಾಲ್ ಅವರಿಂದ ಕೂಡಿದ ಸೆಂಟರ್ ಬ್ಯಾಕ್ ವಿಭಾಗ ಗೋವಾದ ನೈಜ ಶಕ್ತಿ. ಒಂದು ವೇಳೆ ಗೋವಾ ತಂಡ ಆಕ್ರಮಣಕಾರಿ ಆಟದಲ್ಲಿ ಹಿಡಿತ ಸಾಧಿಸಿತೆಂದರೆ ಅದನ್ನು ತಡೆಯುವುದು ಕಷ್ಟ. ಆರೆ ಬೆಂಗಳೂರು ತಂಡವನ್ನು ಅರಿತು ರಣತಂತ್ರವನ್ನು ರೂಪಿಸುವುದು ಸರ್ಗಿಯೋ ಲೊಬೆರಾಗೆ ಕಷ್ಟವಾಗುವುದು ಸಹಜ.
‘ಹಿಂದೆ ನಡೆದದ್ದು ಅದು ಇತಿಹಾಸವಾಗಿಯೇ ಉಳಿಯುತ್ತದೆ. ಫೈನಲ್ ಎಂಬುದು ವಿಭಿನ್ನ ಪಂದ್ಯ. ನಾವು ಸೆಮಿಫೈನಲ್‌ನಲ್ಲಿ ಉತ್ತಮವಾಗಿ ಆಡಿದ್ದೇವೆ, ಆದರೆ ಫೈನಲ್ ಬಂದಾಗ ಅದು ವಿಭಿನ್ನವಾಗಿರುತ್ತದೆ. ನಮ್ಮ ವಿರುದ್ಧ ಬೆಂಗಳೂರು ತಂಡ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದಿರುವುದು ನಿಜ. ಆದರೆ ನಾವು ಇಲ್ಲಿಗೆ ಆಗಮಿಸಿರುವುದು ಫೈನಲ್ ಗೆಲ್ಲಲು. ಹಿಂದೆ ಮಾಡಿದ ತಪ್ಪುಗಳಿಂದ ನಾವು ಪಾಠ ಕಲಿತಿದ್ದೇವೆ,‘ ಎಂದು ಲೋಬೆರಾ ಹೇಳಿದ್ದಾರೆ.

Story first published: Saturday, March 16, 2019, 20:23 [IST]
Other articles published on Mar 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X