ಐಎಸ್ಎಲ್ 2018 : ಮೊದಲ ಸೀಸನ್ ನಲ್ಲಿ ಬೆಂಗಳೂರಿಗೆ ಕಹಿ, ಚೆನ್ನೈಗೆ ಸಿಹಿ

Posted By:
Mailson Brace Helps Chennaiyin Lift the Title

ಬೆಂಗಳೂರು, ಮಾರ್ಚ್ 17: ಇಲ್ಲಿನ ಶ್ರೀಕಂಠೀರವ ಸ್ಟೇಡಿಯಂನಲ್ಲಿ ಶನಿವಾರ(ಮಾರ್ಚ್ 17) ಸಂಜೆ ಫುಟ್ಬಾಲ್ ರಂಗು ಮೇಳೈಸಿತ್ತು.

ಹೀರೋ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಮೆಂಟ್ ನಲ್ಲಿ ಇದೇ ಮೊದಲ ಬಾರಿಗೆ ಆಡಿದ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ ಸಿ) ಮೊದಲ ಪ್ರವೇಶದಲ್ಲೇ ಫೈನಲ್ ತಲುಪಿದ ಸಾಧನೆಯೊಂದಿಗೆ ಟೂರ್ನಮೆಂಟ್ ನಲ್ಲಿ ವಿದಾಯ ಹಾಡಿದೆ.

ಆದರೆ, ಈ ಸೀಸನ್ ನಲ್ಲಿ ಕಪ್ ನಮ್ದೆ ಎಂದುಕೊಂಡಿದ್ದ ಅಭಿಮಾನಿಗಳಿಗೆ ನಿರಾಶೆಯಾಗಿದೆ. ಚೆನ್ನೈಯಿನ್ ಎಫ್ ಸಿ 3-2 ಅಂತರದಿಂದ ಜಯ ದಾಖಲಿಸಿದೆ.

ಯುಗಾದಿ ಹಬ್ಬದ ಮುನ್ನ ಫೈನಲ್ ಗೆದ್ದು ಅಭಿಮಾನಿಗಳಿಗೆ ಸಿಹಿ ಹೋಳಿಗೆ ತಿನ್ನಿಸುವ ನಿರೀಕ್ಷೆ ಹುಟ್ಟಿಸಿತ್ತು. ಆದರೆ, ಬಿಎಫ್ ಸಿಯನ್ನು ಚೆನ್ನೈಯಿನ್ ಎಫ್ ಸಿ ಸೋಲಿಸಿದ್ದು, ಎರಡನೇ ಬಾರಿಗೆ ಚಾಂಪಿಯನ್ ಆಗಿದೆ.

ಚೆನ್ನೈಯಿನ್ ಎಫ್ ಸಿ ಪರ ಮಿಲ್ಸನ್ 17, 45 ನಿಮಿಷದಲ್ಲಿ ಗೋಲು ಬಾರಿಸಿದರೆ, ರಫೆಲ್ ಅಗಸ್ಟೋ 67ನೇ ನಿಮಿಷದಲ್ಲಿ ಗೆಲುವು ಭದ್ರಪಡಿಸಿದರು.

ISL Final, Bengaluru FC vs Chennaiyin FC: Mailson Brace Helps Chennaiyin Lift the Title

9ನೇ ನಿಮಿಷದಲ್ಲೇ ಗೋಲು ಗಳಿಸಿದ ಸುನಿಲ್ ಛೆಟ್ರಿ, ಬೆಂಗಳೂರು ಎಫ್ ಸಿಗೆ ಮುನ್ನಡೆ ತಂದುಕೊಟ್ಟರು. ಆದರೆ, ನಂತರ ಚೆನ್ನೈಯಿನ್ ತಂಡ ತನ್ನ ಪ್ರಾಬಲ್ಯ ಮೆರೆಯಿತು.

ಹೆಚ್ಚುವರಿ ಅವಧಿಯಲ್ಲಿ 90+2 ನಿಮಿಷದಲ್ಲಿ ಫೆಡೊರ್ ಮತ್ತೊಂದು ಗೋಲು ಗಳಿಸಿದರೂ, ಚೆನ್ನಯಿನ್ ನಿಂದ ಗೆಲುವು ಕಸಿಯಲು ಆಗಲಿಲ್ಲ. ಅಂತಿಮವಾಗಿ 3-2ರಲ್ಲಿ ಬೆಂಗಳೂರು ತಂಡ ಪಂದ್ಯ ಕಳೆದುಕೊಂಡಿತು. ಈ ಮೂಲಕ ತವರು ನೆಲದಲ್ಲಿ ಗೆಲ್ಲುವುದಿಲ್ಲ ಎಂಬ ಶಾಪ ವಿಮೋಚನೆಯಾಗದೆ ಉಳಿಯಿತು.
Story first published: Saturday, March 17, 2018, 22:19 [IST]
Other articles published on Mar 17, 2018
+ ಇನ್ನಷ್ಟು
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ