ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2018-19: ಬೆಂಗಳೂರು ಎಫ್‌ಸಿಯ ಗೆಲುವಿನ ರುವಾರಿಗಳು

By Isl Media
ISL: Indian contingent gave Bengaluru an edge

ಮುಂಬೈ, ಮಾರ್ಚ್ 19: ಬೆಂಗಳೂರು ಎಫ್ಸಿ ಚಾಂಪಿಯನ್ ತಂಡ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಭಾನುವಾರ (ಮಾರ್ಚ್ 17) ಮುಂಬೈ ಫುಟ್ಬಾಲ್ ಅರೆನಾದಲ್ಲಿ ಗೋವಾ ತಂಡವನ್ನು 1-0 ಗೋಲಿನಿಂದ ಮಣಿಸಿದ ಬೆಂಗಳೂರು ತಂಡ ಐತಿಹಾಸಿಕ ಸಾಧನೆ ಮಾಡಿತು.

IPL 2019: ಸಂಪೂರ್ಣ ವೇಳಾಪಟ್ಟಿ ಪ್ರಕಟ, ಮೇ 12ಕ್ಕೆ ಫೈನಲ್ ಪಂದ್ಯ!IPL 2019: ಸಂಪೂರ್ಣ ವೇಳಾಪಟ್ಟಿ ಪ್ರಕಟ, ಮೇ 12ಕ್ಕೆ ಫೈನಲ್ ಪಂದ್ಯ!

ಸರ್ಗಿಯೋ ಲೊಬೆರಾ ಪಡೆ ನೀಡಿದ ಸವಾಲುಗಳನ್ನು ಬೆಂಗಳೂರು ತಂಡ ಸಮರ್ಥವಾಗಿ ಎದುರಿಸಿತು. ದ್ವಿತಿಯಾರ್ಧದಲ್ಲಿ ಗೋವಾ ತಂಡ ಚೆಂಡಿನ ಮೇಲೆ ಹೆಚ್ಚು ನಿಯಂತ್ರಣ ಸಾಧಿಸಿದರೂ ಗೋಲು ಗಳಿಸುವಲ್ಲಿ ವಿಫಲವಾಯಿತು. ಸೂಪರ್ ಕಪ್ ಚಾಂಪಿಯನ್ ಬೆಂಗಳೂರು ಏಕೈಕ ಗೋಲು ಗಳಿಸಿ ಗೋವಾಕ್ಕೆ ಮತ್ತೊಮ್ಮೆ ನಿರಾಸೆಯನ್ನುಂಟು ಮಾಡಿತು.

ಆರ್ ಸಿಬಿ ತಂಡಕ್ಕೆ ಅಧಿಕೃತ ಜೀವವಿಮೆ ಒದಗಿಸುತ್ತಿದೆ ಮ್ಯಾಕ್ಸ್ ಲೈಫ್ಆರ್ ಸಿಬಿ ತಂಡಕ್ಕೆ ಅಧಿಕೃತ ಜೀವವಿಮೆ ಒದಗಿಸುತ್ತಿದೆ ಮ್ಯಾಕ್ಸ್ ಲೈಫ್

ಪಂದ್ಯ ಗೆಲ್ಲಲು ಗೋವಾ ಹಲವು ರೀತಿಯ ರಣತಂತ್ರಗಳನ್ನು ರಚಿಸಿತು. ಎದುರಾಳಿಗಳ ಮೇಲೆ ಒತ್ತಡ ಹೇರುವುದು ಹಾಗೂ ಪ್ರತಿ ದಾಳಿಯನ್ನು ರೂಪಿಸಿ ಗೋಲು ಗಳಿಸುವುದು ಗೋವಾದ ಉದ್ದೇಶವಾಗಿತ್ತು. ಆದರೆ ಬೆಂಗಳೂರು ಪ್ರತಿಯೊಂದಕ್ಕೂ ಉತ್ತರ ನೀಡಿ ಪ್ರಭುತ್ವ ಸಾಧಿಸಿತು. ಸುನಿಲ್ ಛೆಟ್ರಿ ಹಾಗೂ ಎರಿಕ್ ಪಾರ್ತಲು ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಿದ್ದರೂ ಕಳೆದ ಋತುವಿನ ಪ್ರದರ್ಶನ ಕಂಡು ಬಂದಿಲ್ಲ. ಗೋವಾ ವಿರುದ್ಧದ ಮನೆಯಂಗಣದ ಪಂದ್ಯದಲ್ಲಿ ಕೇವಲ 10 ಮಂದಿ ಆಟಗಾರರನ್ನು ಒಳಗೊಂಡಿದ್ದರೂ 3-0 ಗೋಲಿನಿಂದ ಜಯ ಗಳಿಸಿತ್ತು.

ಕೋಚ್ ಕಾರ್ಲಸ್ ಕ್ವಾಡ್ರಾಟ್

ಕೋಚ್ ಕಾರ್ಲಸ್ ಕ್ವಾಡ್ರಾಟ್

ನಾರ್ತ್ ಈಸ್ಟ್ ಯುನೈಟೆಡ್ ತಂಡದ ವಿರುದ್ಧ ನಡೆದ ಮೊದಲ ಲೆಗ್‌ನ ಸೆಮಿಫೈನಲ್ ಪಂದ್ಯದಲ್ಲಿ ಬೆಂಗಳೂರು ತಂಡ 1-2 ಗೋಲುಗಲ ಅಂತರದಲ್ಲಿ ಸೋಲುಂಡು ಆತಂಕದ ಹಂತ ತಲುಪಿತ್ತು. ಎರಡನೇ ಲೆಗ್‌ನ ಪಂದ್ಯದಲ್ಲಿ ಬೆಂಗಳೂರು 70 ನಿಮಿಷಗಳ ಕಾಲ ಗೋಲು ಗಳಿಸಿರಲಿಲ್ಲ, ಆದರೆ ಆ ನಂತರ ಮೂರು ಗೋಲುಗಳನ್ನು ಗಳಿಸಿ ಪಂದ್ಯ ಗೆದ್ದು ಫೈನಲ್ ತಲುಪಿತ್ತು. ಕೇವಲ ಚೆಂಡನ್ನು ನಿಯಂತ್ರಣದಲ್ಲಿರಿಸಿಕೊಂಡರೆ ಗೋಲಾಗುವುದಿಲ್ಲ, ಅದೇ ರೀತಿ ಆಕ್ರಮಣಕಾರಿ ಆಟವೂ ಅಗತ್ಯವಿದೆ ಎಂಬುದನ್ನು ಕೋಚ್ ಕಾರ್ಲಸ್ ಕ್ವಾಡ್ರಾಟ್ ತೋರಿಸಿಕೊಟ್ಟಿದ್ದಾರೆ.

ಯಶಸ್ಸಿನ ಹಾದಿ ತುಳಿದಿತ್ತು.

ಯಶಸ್ಸಿನ ಹಾದಿ ತುಳಿದಿತ್ತು.

50 ವರ್ಷ ಪ್ರಾಯದ ಕೋಚ್ ಕಾರ್ಲಸ್, ಕಳೆದ ಋತುವಿನಲ್ಲಿ ಅಷ್ಟು ಪರಿಪೂರ್ಣತೆ ಇಲ್ಲದ ತಂಡಕ್ಕೆ ಆಟದಲ್ಲಿ ಮತ್ತಷ್ಟು ಪಳಗುವಂತೆ ಮಾಡಿದರು. ಇಂಡಿಯನ್ ಸೂಪರ್ ಲೀಗ್‌ನಲ್ಲಿ ಎರಡನೇ ಋತುವನ್ನು ಪೂರ್ಣಗೊಳಿಸುತ್ತಿರುವ ಬೆಂಗಳೂರು ತಂಡ ಈ ಬಾರಿ ಮಿಕು ಹಾಗೂ ಪಾರ್ತಲು ಅವರಂಥ ಪ್ರಮುಖ ಆಟಗಾರರು ಗಾಯದ ಸಮಸ್ಯೆಯನ್ನು ಎದುರಿಸಿದರೂ ಅಂತಿಮ ಹಂತದಲ್ಲಿ ಚೇರಿಸಿಕೊಂಡು ಯಶಸ್ಸಿನ ಹಾದಿ ತುಳಿದಿತ್ತು. ಉದಾಂತ್ ಸಿಂಗ್, ಸುನಿಲ್ ಛೆಟ್ರಿ, ರಾಹುಲ್ ಭಿಕೆ, ಗುರ್‌ಪ್ರೀತ್ ಸಿಂಗ್ ಸಂ‘ೂ ಸೇರಿದಂತೆ ‘ಭಾರತದ ಪ್ರಮುಖ ಆಟಗಾರರು ಬೆಂಗಳೂರು ಎ್‌ಸಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಸುನಿಲ್ ಛೆಟ್ರಿ

ಸುನಿಲ್ ಛೆಟ್ರಿ

ಉದಾಂತ್ ಸಿಂಗ್ ಮಿಂಚಿನ ಆಟವಾಡಿ ಈ ಋತುವಿನಲ್ಲಿ ಐದು ಗೋಲುಗಳನ್ನು ಗಳಿಸಿರುತ್ತಾರೆ. ಸುನಿಲ್ ಛೆಟ್ರಿ ಈ ಬಾರಿ ಗೋಲು ಗಳಿಕೆಯಲ್ಲಿ ಹಿಂದೆ ಬಿದ್ದರೂ ತಂಡಕ್ಕೆ ಆಪದ್ಭಾಂ‘ವನಂತೆ ಕೆಲಸ ಮಾಡಿದರು. ಗುರ್‌ಪ್ರೀತ್ ಸಿಂಗ್ ಅವರ ಸಾ‘ನೆಗೆ ಗೋಲ್ಡನ್ ಗ್ಲೋವ್ ಸಾಕ್ಷಿ. ಪೆನಾಲ್ಟಿ ಮೂಲಕ ಚಾಂಪಿಯನ್ ತಂಡದ ತೀರ್ಮಾನವಾಗುತ್ತದೆ ಎಂದು ಎಲ್ಲರೂ ಊಹಿಸಿರುವಾಗ ಅಂತಿಮ ಕ್ಷಣದಲ್ಲಿ ಹೆಡರ್ ಮೂಲಕ ಗೋಲು ಗಳಿಸಿದ ಭಿಕೆ ಫೈನಲ್ ಪಂದ್ಯದ ಹೀರೋ ಎನಿಸಿದರು. ಜುವಾನನ್ ಗೋವಾ ತಂಡದ ಆಟಗಾರರಿಗೆ ವಿಶೇಷವಾಗಿ ಫೆರಾನ್ ಕೊರೊಮಿನಾಸ್‌ಗೆ ಗೋಲು ಗಳಿಸುವ ಅವಕಾಶಕ್ಕೆ ಅಡ್ಡಿಯಾದರು.

ರಾಹುಲ್ ಭಿಕೆ

ರಾಹುಲ್ ಭಿಕೆ

‘‘ಭಾರತದ ಡಿಫೆಂಡರ್‌ಗಳಾದ ರಾಹುಲ್ ಭಿಕೆ, ನಿಶು ಕುಮಾರ್ ಮತ್ತು ಹರ್ಮನ್‌ಜೋತ್ ಖಾಬ್ರ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಿರುವುದು ಖುಷಿ ಕೊಟ್ಟಿದೆ. ನಾವು ಆಕ್ರಮಣಕಾರಿ ಆಟಕ್ಕೆ ಮನ ಮಾಡಿದೆವು, ನಮ್ಮ ಯೋಜನೆ ಯಶಸ್ಸು ನೀಡಿತು. ಗೋವಾಕ್ಕೆ ಹೆಚ್ಚಿನ ಅವಕಾಶ ಸಿಗಲಿಲ್ಲ. ಫೆರಾನ್ ಕೊರೊಮಿನಾಸ್‌ಗೆ ನಾವು ಅವಕಾಶ ಕಲ್ಪಿಸಲಿಲ್ಲ. ಕಳೆದ ಮೂರು ತಂಡದಲ್ಲೂ ಅವರು ಅವಕಾಶ ವಂಚಿತರಾಗಿದ್ದರು. ನಮ್ಮ ರಕ್ಷಣಾ ವಿಭಾಗದ ಬಗ್ಗೆ ಖುಷಿ ಇದೆ,‘ ಎಂದು ಬೆಂಗಳೂರು ಕೋಚ್ ಹೇಳಿದ್ದಾರೆ.

Story first published: Tuesday, March 19, 2019, 19:14 [IST]
Other articles published on Mar 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X