ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2021‌: ಮುಂಬೈಗೆ ಸೋಲಿನ ಶಾಕ್ ನೀಡಿದ ಜೆಮ್ಷೆಡ್ಪುರ

By Isl Media
ISL: Mumbai City suffer League Shield setback as Jamshedpur claim stunning win

ಗೋವಾ: ಗೋವಾ: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಲಿಷ್ಠ ಮುಂಬೈ ಸಿಟಿ ಎಫ್ ಸಿ ತಂಡವನ್ನು 2-0 ಗೋಲಿನಿಂದ ಮಣಿಸಿದ ಜೆಮ್ಷೆಡ್ಪುರ ಎಫ್ ಸಿ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಪ್ಲೇ ಆಫ್ ತಲಪುವ ತನ್ನ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ, ಈ ಜಯದೊಂದಿಗೆ ಜೆಮ್ಷೆಡ್ಪುರ ಅಂಕಪಟ್ಟಿಯಲ್ಲಿ 6ನೇ ಸ್ಥಾನ ತಲುಪಿತು. ಬೆಂಗಳೂರು ಮತ್ತೆ 7ನೇ ಸ್ಥಾನಕ್ಕೆ ಕುಸಿಯಿತು.

ಬಿ.ಎಸ್. ತಾಂಗಿಯಮ್ (72ನೇ ನಿಮಿಷ) ಮತ್ತು ಡಿ, ಗ್ರಾಂಡೇ (90ನೇ ನಿಮಿಷ) ಗಳಿಸಿದ ಗೋಲುಗಳು ಮುಂಬೈ ಸಿಟಿ ತಂಡವನ್ನು ಸೋಲಿನ ಅಂಚಿಗೆ ಸಿಲುಕಿತು.

ಗೋಲಿಲ್ಲದ ಪ್ರಥಮಾರ್ಧ

ಗೋಲಿಲ್ಲದ ಪ್ರಥಮಾರ್ಧ

ಜೆಮ್ಷೆಡ್ಪುರ ಹಾಗೂ ಮುಂಬೈ ಸಿಟಿ ಎಫ್ ಸಿ ನಡುವಿನ ಹೀರೋ ಇಂಡಿಯನ್ ಸೂಪರ್ ಲೀಗ್ ನ 100ನೇ ಪಂದ್ಯದ ಪ್ರಥಮಾರ್ಧ ಗೋಲಿಲ್ಲದೆ ಕೊನೆಗೊಂಡಿತು. ಜೆಮ್ಷೆಡ್ಪುರ ತಂಡ ಮೂರು ಬಾರಿ ಗೋಲು ಗಳಿಸುವ ಉತ್ತಮ ಅವಕಾಶವನ್ನು ಕೈ ಚೆಲ್ಲಿತು. ಅಲ್ಲದೆ ಚೆಂಡಿನ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಿತು. ಮುಂಬೈ ಸಿಟಿ ತಂಡ ಈಗಾಗಲೇ ಪ್ಲೇ ಆಫ್ ಹಂತ ತಲುಪಿದ್ದರಿಂದ ಗೋಲು ಗಳಿಸಲು ಆವೇಶದ ಆಟ ಆಡಲಿಲ್ಲ. ಜೆಮ್ಷೆಡ್ಪುರದ ಡಿಫೆನ್ಸ್ ವಿಭಾಗ ಈ ಬಾರಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದ ಕಾರಣ ಮುಂಬೈಗೆ ಟಾರ್ಗೆಟ್ ಗೆ ಗುರಿ ಇಡುವ ಅವಕಾಶ ಸಿಗಲಿಲ್ಲ. ಕೇವಲ ಒಂದು ಬಾರಿ ಟಾರ್ಗೆಟ್ ಗೆ ಗುರಿ ಇಟ್ಟಿತ್ತು. ಜೆಮ್ಷೆಡ್ಪುರ ಮೂರು ಬಾರಿ ಟಾರ್ಗೆಟ್ ಗೆ ಗುರಿ ಇಟ್ಟಿದ್ದರೂ ಗೋಲಿಗೆ ಅವಕಾಶ ಇರಲಿಲ್ಲ.

100ನೇ ಪಂದ್ಯ

100ನೇ ಪಂದ್ಯ

ಹೀರೋ ಇಂಡಿಯನ್ ಸೂಪರ್ ಲೀಗ್ ನ 100ನೇ ಪಂದ್ಯದಲ್ಲಿ ಜಯವನ್ನೇ ಗುರಿಯಾಗಿಸಿಕೊಂಡು ಮುಂಬೈ ಸಿಟಿ ಎಫ್ ಸಿ ಮತ್ತು ಜೆಮ್ಷೆಡ್ಪುರ ಎಫ್ ಸಿ ತಂಡಗಳು ಮುಖಾಮುಖಿಯಾದವು. ಎಟಿಕೆ ಮೋಹನ್ ಬಾಗನ್ ವಿರುದ್ಧ 1-0 ಗೋಲಿನಿಂದ ಸೋಲನುಭವಿಸಿದ ಜೆಮ್ಷೆಡ್ಪುರ ಎಫ್ ಸಿ ಈ ಪಂದ್ಯಕ್ಕೆ ಸಜ್ಜಾಯಿತು. ಪ್ಲೇ ಆಫ್ ತಲುಪಲು ಓವೆನ್ ಕೊಯ್ಲ್ ಪಡೆಗೆ ಸ್ವಲ್ಪ ಅವಕಾಶವಿದೆ. ಉಳಿದಿರುವ ಎರಡೂ ಪಂದ್ಯಗಳಲ್ಲಿ ಜಯ ಗಳಿಸಿ ಉಳಿದ ಆಕಾಂಕ್ಷಿಗಳ ಅಂಕದಲ್ಲಿ ಕುಸಿತ ಕಂಡರೆ ಪ್ಲೇ ಆಫ್ ಹಾದಿ ಸುಗಮವಾಗಲಿದೆ.

16 ಗೋಲುಗಳನ್ನು ಗಳಿಸಿದ್ದು

16 ಗೋಲುಗಳನ್ನು ಗಳಿಸಿದ್ದು

18 ಪಂದ್ಯಗಳಲ್ಲಿ ಜೆಮ್ಷೆಡ್ಪುರ 16 ಗೋಲುಗಳನ್ನು ಗಳಿಸಿದ್ದು, ಇದು ಅತ್ಯಂತ ಕಡಿಮೆಯಲ್ಲಿ ಎರಡನೇ ಸ್ಥಾನವಾಗಿದೆ. ಸರ್ಗಿಯೋ ಲೊಬೆರಾ ಪಡೆ ಮೊದಲ 12 ಪಂದ್ಯಗಳಲ್ಲಿ ಕೇವಲ 4 ಗೋಲುಗಳನ್ನು ಎದುರಾಳಿ ತಂಡಕ್ಕೆ ನೀಡಿತ್ತು, ಮುಂಬೈ ಸಿಟಿ ತಂಡ ಪ್ಲೇ ಆಫ್ ತಲುಪಿದ ಮೊದಲ ತಂಡವಾಗಿದೆ. ಇತ್ತೀಚಿನ ಪಂದ್ಯಗಳಲ್ಲಿ ಹಿನ್ನಡೆ ಕಂಡು ಅಗ್ರ ಸ್ಥಾನವನ್ನು ಎಟಿಕೆ ಮೋಹನ್ ಬಾಗನ್ ಗೆ ಬಿಟ್ಟುಕೊಟ್ಟಿದೆ. ಅಗ್ರ ಸ್ಥಾನಕ್ಕೆ ಐದು ಅಂಕಗಳಿಂದ ಹಿಂದೆ ಬಿದ್ದಿರುವ ಮುಂಬೈ ಸಿಟಿಗೆ ಆ ಗೌರವನ್ನು ಮರಳಿ ಪಡಯಲು ಇಲ್ಲಿ ಜಯದ ಅಗತ್ಯ ಇದೆ.

Story first published: Sunday, February 21, 2021, 0:14 [IST]
Other articles published on Feb 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X