ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌: ಅಕ್ಟೋಬರ್ 26ಕ್ಕೆ ಹಾಲಿ, ಮಾಜಿ ಚಾಂಪಿಯನ್ನರ ಕದನ ಕುತೂಹಲ

By Isl Media
ISL: Preview, ATK, Chennaiyin aim to show champion stuff

ಕೋಲ್ಕತ್ತಾ, ಅಕ್ಟೋಬರ್ 25: ಶುಕ್ರವಾರ (ಅ.26) ಇಲ್ಲಿನ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈಯಿನ್ ಎಫ್ಸಿ ಹಾಗೂ ಮಾಜಿ ಚಾಂಪಿಯನ್ ಎಟಿಕೆ ತಂಡಗಳು ಜಯವನ್ನೇ ಗುರಿಯಾಗಿಸಿಕೊಂಡು ಅಂಗಣಕ್ಕಿಳಿಯಲಿವೆ.

ಐಎಸ್‌ಎಲ್: ನಾರ್ತ್ ಈಸ್ಟ್ ಯುನೈಟೆಡ್ vs ಜೆಮ್ಶೆಡ್ಪುರ್ ಪಂದ್ಯ ಸಮಬಲಐಎಸ್‌ಎಲ್: ನಾರ್ತ್ ಈಸ್ಟ್ ಯುನೈಟೆಡ್ vs ಜೆಮ್ಶೆಡ್ಪುರ್ ಪಂದ್ಯ ಸಮಬಲ

ಐಎಸ್‌ಎಲ್‌ನ ಅಂಕಪಟ್ಟಿಯಲ್ಲಿ ಚೇತರಿಕೆ ಕಂಡುಕೊಳ್ಳಬೇಕಾದರೆ ಇತ್ತಂಡಗಳಿಗೆ ಜಯದ ಅಗತ್ಯವಿದೆ. ಎಟಿಕೆ ಆಡಿರುವ ನಾಲ್ಕು ಪಂದ್ಯಗಳಲ್ಲಿ ನಾಲ್ಕು ಅಂಕಗಳನ್ನು ಗಳಿಸಿದ್ದು, ಚೆನ್ನೆ'ಯಿನ್ ಕೇವಲ ಒಂದು ಅಂಕ ಗಳಿಸಿ ಒತ್ತಡದಲ್ಲಿದೆ.

ಶುಭ್‌ಮನ್ ಗಿಲ್ ಶತಕ: ಫೈನಲ್ ಪ್ರವೇಶಿಸಿದ ರಹಾನೆ ಬಳಗಶುಭ್‌ಮನ್ ಗಿಲ್ ಶತಕ: ಫೈನಲ್ ಪ್ರವೇಶಿಸಿದ ರಹಾನೆ ಬಳಗ

ಮನೆಯಂಗಣದಲ್ಲಿ ಸತತ ಎರಡು ಸೋಲು ಅನುಭವಿಸಿದ ನಂತರ ಎಟಿಕೆ ಡೆಲ್ಲಿ ಡೈನಮೋಸ್ ವಿರುದ್ಧದ ಪಂದ್ಯದಲ್ಲಿ ಜಯ ಗಳಿಸಿತ್ತು, ನಂತರ ಜೆಮ್ಷೆಡ್ಪುರ ವಿರುದ್ಧದ ಪಂದ್ಯದಲ್ಲಿ ಡ್ರಾ ಸಾಧಿಸಿತ್ತು. ಆದರೆ ಇತರ ಐದು ತಂಡಗಳು ಉತ್ತಮ ಪ್ರದರ್ಶನ ತೋರಿದ್ದು, ಸ್ಟೀವ್ ಕೊಪ್ಪೆಲ್ ತಂಡಕ್ಕೆ ಈಗ ಜಯದ ಅನಿವಾರ್ಯತೆ ಇದೆ.

ಸಮಾನ ಹಂತದಲ್ಲಿವೆ

ಸಮಾನ ಹಂತದಲ್ಲಿವೆ

'ಹೆಚ್ಚಿನ ತಂಡಗಳು ಸಮಾನ ಹಂತದಲ್ಲಿವೆ. ಆದರೆ ಕೆಲವು ತಂಡಗಳು ಉತ್ತಮ ಪ್ರದರ್ಶನ ತೋರಿ ಮುಂದೆ ಸಾಗಿವೆ. ನಾವು ಕೂಡ ಎಲೈಟ್ ಗುಂಪನ್ನು ತಲುಪಬೇಕಾಗಿದೆ. ಮನೆಯಂಗಣದಲ್ಲಿ ನಮಗೆ ಜಯದ ಅಗತ್ಯವಿದೆ. ಉತ್ತಮ ತಂಡಗಳು ಮನೆಯಂಗಣದಲ್ಲಿ ಜಯ ಗಳಿಸುತ್ತವೆ. ಮನೆಯಂಗಣದ ಅಭಿಮಾನಿಗಳ ಸಮ್ಮುಖದಲ್ಲಿ ನಾವು ಅಂಕ ಗಳಿಸಬೇಕಾಗಿದೆ' ಎಂದು ಕೊಪ್ಪೆಲ್ ಹೇಳಿದ್ದಾರೆ.

ಅಂಕ ಗಳಿಸುವ ಅನಿವಾರ್ಯತೆ

ಅಂಕ ಗಳಿಸುವ ಅನಿವಾರ್ಯತೆ

ಚೆನ್ನೆ‘ಯಿನ್ ತಂಡ ಕೂಡ ಮೂರು ಅಂಕಗಳನ್ನು ಗಳಿಸುವ ಅನಿವಾರ್ಯತೆಯಲ್ಲಿದೆ. ಅವರಿಗೆ ಈಋತುವಿನ ಜಯದ ಖಾತೆಯ ಅಗತ್ಯವಿದೆ. ಇನ್ನೂ ಮೂರು ಅಂಕ ಗಳಿಸಿಲ್ಲ. ಮೂರು ಪಂದ್ಯಗಳಲ್ಲಿ ಸತತ ಸೋಲು ಅನುಭವಿಸಿದ ನಂತರ ಡೆಲ್ಲಿ ಡೈನಮೋಸ್ ವಿರುದ್ಧದ ಪಂದ್ಯದಲ್ಲಿ ಗೋಲಿಲ್ಲದೆ ಡ್ರಾ ಕಂಡಿದೆ.

ಗೆಲ್ಲುವ ಭರವಸೆ

ಗೆಲ್ಲುವ ಭರವಸೆ

ಡ್ರಾ ಫಲಿತಾಂಶದ ನಂತರ ತಂಡ ಮೂರು ಅಂಕಗಳನ್ನು ಗಳಿಸುವ ಆತ್ಮವಿಶ್ವಾಸ ಹೊಂದಿದೆ ಎಂದು ಕೋಚ್ ಜಾನ್ ಗ್ರೆಗೋರಿ ಅವರ ನಿಲುವು. ದುರ್ಬಲ ಡೆಲ್ಲಿ ವಿರುದ್ಧವೂ ಚೆನ್ನೆ‘ಯಿನ್ ತಂಡಕ್ಕೆ ಗೋಲು ಗಳಿಸಲಾಗಲಿಲ್ಲ ಎಂಬುದು ಗಮನಾರ್ಹ. ಪ್ಲೇ ಆಫ್ ಹಂತದ ಸ್ಪರ್ಧೆಯಲ್ಲಿರುವ ಹಾಲಿ ಚಾಂಪಿಯನ್ ಚೆನ್ನೆ‘ಯಿನ್ ತಂಡಕ್ಕೆ ಈಗ ಜಯದ ಹೊರತಾಗಿ ಬೇರೇನೂ ಬೇಕಾಗಿಲ್ಲ.

ಪ್ರದರ್ಶನ ಉತ್ತಮಗೊಳ್ಳುತ್ತಿದೆ

ಪ್ರದರ್ಶನ ಉತ್ತಮಗೊಳ್ಳುತ್ತಿದೆ

ನಾವು ಇದುವರೆಗೂ ನಾಲ್ಕು ಪಂದ್ಯಗಳನ್ನು ಆಡಿದ್ದೇವೆ, ತಂಡದಲ್ಲಿ ಹೊಸ ಮುಖಗಳಿವೆ. ಅವರಿಗೆ ಹೊಂದಿಕೊಳ್ಳಲು ಇನ್ನು ಕೆಲವು ಸಸಮಯ ಬೇಕಾಗುತ್ತದೆ. ದಿನದಿಂದ ದಿನಕ್ಕೆ ಪ್ರದರ್ಶನದ ಗುಣಮಟ್ಟ ಉತ್ತಮಗೊಳ್ಳುತ್ತಿದೆ. ನಾವು ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತಿದ್ದೇವೆ. ಆದರೆ ನಾವು ಉತ್ತಮ ಪ್ರದರ್ಶನ ನೀಡಲಿದ್ದೇವೆ ಎಂಬ ನಂಬಿಕೆ ಇದೆ ಎಂದು ಸಹಾಯಕ ಕೋಚ್ ಸಬೀರ್ ಪಾಶಾ ಹೇಳಿದ್ದಾರೆ. ಜಾನ್ ಗ್ರೆಗೋರಿ ಅನಾರೋಗ್ಯದ ಕಾರಣ ಅವರು ತಂಡದ ನಿರ್ವಹಣೆ ನೋಡಿಕೊಳ್ಳುತ್ತಿದ್ದಾರೆ.

Story first published: Friday, October 26, 2018, 23:45 [IST]
Other articles published on Oct 26, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X