ಇಂಡಿಯನ್ ಸೂಪರ್ ಲೀಗ್: ಕೃಷ್ಣ ಹ್ಯಾಟ್ರಿಕ್; ಅಗ್ರ ಸ್ಥಾನಕ್ಕೆ ಎಟಿಕೆ

By Isl Media

ಕೋಲ್ಕತಾ, ಫೆಬ್ರವರಿ, 8: ರಾಯ್ ಕೃಷ್ಣ (49, 60, ಮತ್ತು 63ನೇ ನಿಮಿಷ) ಅವರ ಹ್ಯಾಟ್ರಿಕ್ ಸಾಧನೆಯ ನೆರವಿನಿಂದ ಒಡಿಶಾ ತಂಡವನ್ನು 3-1 ಗೋಲುಗಳ ಅಂತರದಲ್ಲಿ ಮಣಿಸಿದ ಎಟಿಕೆ ತಂಡ ನಿರೀಕ್ಷೆಯಂತೆ ಇಂಡಿಯನ್ ಸೂಪರ್ ಲೀಗ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು. ಈ ಪಂದ್ಯಕ್ಕೆ ಮುನ್ನ 10 ಗೋಲುಗಳನ್ನು ಗಳಿಸಿದ್ದ ರಾಯ್ ಕೃಷ್ಣ ಮನೆಯಂಗಣಲ್ಲಿ ಹ್ಯಾಟ್ರಿಕ್ ಸಾಧನೆ ಮಾಡುವುದರೊಂದಿಗೆ ಒಟ್ಟು 13 ಗೋಲುಗಳ ಸಾಧನೆಯೊಂದಿಗೆ ಲೀಗ್ ನಲ್ಲಿ ಪ್ರಸಕ್ತ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರೆನಿಸಿದರು. ಒಡಿಶಾ ಪರ ಮ್ಯಾನ್ವೆಲ್ ಒನೌ 67ನೇ ನಿಮಿಷದಲ್ಲಿ ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು. ಒಡಿಶಾದ ಈ ಸೋಲು ಅಂತಿಮ ನಾಲ್ಕರ ಹಂತ ತಲಪುವ ಹಾದಿಗೆ ಮತ್ತಷ್ಟು ಮುಳ್ಳಾಯಿತು. ಚೆನ್ನೈಯಿನ್ ಹಾಗೂ ಮುಂಬೈ ಸಿಟಿ ತಂಡದ ಹೋರಾಟದ ಹಾದಿ ಮತ್ತಷ್ಟು ಸುಗಮಗೊಂಡಿತು. ಗೋವಾ ಹಾಗೂ ಎಟಿಕೆ ತಂಡಗಳು ಪ್ಲೇ ಆಫ್ ಹಂತಕ್ಕೆ ತೇರ್ಗಡೆಯಾದವು.

ಐಎಸ್‌ಎಲ್ 2020: ಗುವಾಹಟಿಯಲ್ಲಿ ಅಂಕ ಹಂಚಿಕೊಂಡ ನಾರ್ತ್, ಸೌತ್ಐಎಸ್‌ಎಲ್ 2020: ಗುವಾಹಟಿಯಲ್ಲಿ ಅಂಕ ಹಂಚಿಕೊಂಡ ನಾರ್ತ್, ಸೌತ್

ಗೋಲಿಲ್ಲದ ಪ್ರಥಮಾರ್ಧ:
ಮನೆಯಂಗಣದಲ್ಲಿ ಎಟಿಕೆ ಚೆಂಡಿನ ಮೇಲೆ ಹೆಚ್ಚು ನಿಯಂತ್ರಣ ಸಾಧಿಸಿದರೂ, ಗೋಲು ಗಳಿಸುವಲ್ಲಿ ವಿಫಲವಾಯಿತು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಎಟಿಕೆ ಯಶಸ್ಸು ಕಾಣಲಿಲ್ಲ. 41ನೇ ನಿಮಿಷದಲ್ಲಿ ರಾಯ್ ಕೃಷ್ಣ ಸಿಕ್ಕ ಅವಕಾಶವನ್ನು ಕೈಚೆಲ್ಲಿ ಫೌಲ್ ಗೆ ಬೆಲೆ ತೆರಬೇಕಾಯಿತು. ಒಡಿಶಾಕ್ಕೆ ಅವಕಾಶಗಳು ಹೆಚ್ಚು ಸಿಗಲಿಲ್ಲ. ಅಲ್ಲದೆ ಆಕ್ರಮಣಕಾರಿ ಆಟಕ್ಕೆ ಮನ ಮಾಡದ ಕಾರಣ ಮೊದಲಾರ್ಧ ಗೋಲಿಲ್ಲದೆ ಕೊನೆಗೊಂಡಿತು.

ಅಗ್ರ ಸ್ಥಾನದ ಗುರಿ:
ಎಟಿಕೆ ತಂಡಕ್ಕೆ ಮನೆಯಂಗಣದಲ್ಲಿ ಗೆದ್ದು ಅಗ್ರ ಸ್ಥಾನಕ್ಕೇರುವ ಹಂಬಲ, ಒಡಿಶಾ ಎಫ್ ಸಿ ತಂಡಕ್ಕೆ ಜಯ ಗಳಿಸಿ ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯುವ ಹಂಬಲ. ಎರಡೂ ತಂಡಗಳು ಜಯವನ್ನೇ ಗುರಿಯಾಗಿಸಿಕೊಂಡು ಅಂಗಣಕ್ಕಿಳಿದವು. ಪ್ರತಿಯೊಂದು ಪಂದ್ಯದಲ್ಲೂ ಉತ್ತಮ ಪ್ರದರ್ಶನ ತೋರಿರುವ ಎಟಿಕೆ ಈ ಋತುವಿನಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿದೆ. ಪಿಚ್ ನ ಎರಡೂ ಕಡೆಗಳಲ್ಲೂ ಪ್ರಭುತ್ವ ಸಾಧಸಿರುವ ಎಟಿಕೆಯನ್ನು ನಿಯಂತ್ರಿಸುವುದು ಒಡಿಶಾ ತಂಡಕ್ಕೆ ಅಷ್ಟು ಸುಲಭವಾದುದಲ್ಲ. ರಾಯ್ ಕೃಷ್ಣ, ಡೇವಿಡ್ ವಿಲಿಯಮ್ಸ್ ಮತ್ತು ಎಡು ಗಾರ್ಸಿಯಾ ಅವರಿಂದ ಕೂಡಿದ ತಂಡದ ಸವಾಲನ್ನು ಸ್ವೀಕರಿಸಲು ಒಡಿಶಾ ಸಜ್ಜಾಯಿತು.

ಒಂಬತ್ತು ಕ್ಲೀನ್ ಶೀಟ್ ಸಾಧನೆ ಮಾಡಿರುವ ಎಟಿಕೆ ಮತ್ತೊಂದು ಯಶಸ್ಸಿನ ಹೆಜ್ಜೆಗೆ ಮುಂದಾಯಿತು. ಹಿಂದಿನ ಪಂದ್ಯದಲ್ಲಿ ಗೋವಾ ವಿರುದ್ಧ ಸೋಲುವ ಮೂಲಕ ಸಂಕಷ್ಟಕ್ಕೆ ಗುರಿಯಾಯಿತು. ಈಗ ತಂಡಕ್ಕೆ ಜಯದ ಹೊರತಾಗಿ ಬೇರೇನೂ ಬೇಕಾಗಿಲ್ಲ. ಮುಂಬೈ ಹಾಗೂ ಚೆನ್ನೈಯಿನ್ ತಂಡಗಳು ಹಿನ್ನಡೆ ಕಂಡರೆ ಒಡಿಶಾಕ್ಕೆ ವರವಾಗಲಿದೆ. ತಂಡದ ಎರವಲು ಆಟಗಾರ ಮ್ಯಾನ್ವೆಲ್ ಒನೌ ಇದುವರೆಗೂ ಆಡಿರುವ ಪಂದ್ಯಗಳಲ್ಲಿ ನ್ಯಾಯ ಒದಗಿಸಿದ್ದಾರೆ. ಅರಿದಾನೆ ಸ್ಯಾಂಟನಾ ಅವರ ಅನುಪಸ್ಥಿತಿ ತಂಡವನ್ನು ಕಾಡಲಿದೆ. ಶುಭಂ ಸಾರಂಗಿ, ಕಾರ್ಲೊಸ್ ಡೆಲ್ಗಾಡೊ, ಮಾರ್ಕೊಸ್ ತೆಬರ್ ಮತ್ತು ನಂದಕುಮಾರ್ ಶೇಕರ್ ಅವರು ತಮ್ಮ ನೈಜ ಸಾಮರ್ಥ್ಯ ತೋರಿದರೆ ಎಟಿಕೆಗೆ ದಿಟ್ಟ ಸವಾಲೊಡ್ಡಬಹುದು. '

For Quick Alerts
ALLOW NOTIFICATIONS
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS
Story first published: Sunday, February 9, 2020, 18:36 [IST]
Other articles published on Feb 9, 2020
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X