ಬಾರ್ಸಿಲೋನಾದಲ್ಲೇ ಉಳಿಯಲಿದ್ದಾರೆ ಸ್ಟಾರ್ ಫುಟ್ಬಾಲಿಗ ಲಿಯೋನೆಲ್ ಮೆಸ್ಸಿ

ಕ್ಯಾಂಪ್ ನೌ: ಅರ್ಜೆಂಟೀನಾದ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಬಾರ್ಸಿಲೋನಾ ತಂಡವನ್ನು ತೊರೆಯಲಿದ್ದಾರೆ ಎನ್ನಲಾಗಿತ್ತು. ಆದರೆ ಮೆಸ್ಸಿ ಬಾರ್ಸಿಲೋನಾದಲ್ಲೇ ಉಳಿಯಲಿದ್ದಾರೆ. ಅನಿವಾರ್ಯ ಕಾರಣಗಳಿಂದ ತಾನು ಬಾರ್ಸಿಲೋನಾ ತೊರೆಯುತ್ತಿಲ್ಲ ಎಂದು ಮೆಸ್ಸಿ ಹೇಳಿಕೊಂಡಿದ್ದಾರೆ.

ಕೊಹ್ಲಿ-ಅನುಷ್ಕಾರ ಮಗು ಗಂಡೋ, ಹೆಣ್ಣೋ?: ಪಂಡಿತ್ ಜಗನ್ನಾಥ್ ಭವಿಷ್ಯ

ಬಾರ್ಸಿಲೋನಾದೊಂದಿಗಿನ ತನ್ನ ಒಪ್ಪಂದವನ್ನು ರದ್ದುಗೊಳಿಸಲು ಅವಕಾಶ ಮಾಡಿಕೊಟ್ಟ ಗಡುವನ್ನು ಮೆಸ್ಸಿ ತಪ್ಪಿಸಿಕೊಂಡಿದ್ದಾರೆ. ಏಕಪಕ್ಷೀಯವಾಗಿ ನಿರ್ಗಮಿಸಿದರೆ ಕಾನೂನು ಕ್ರಮ ಜರುಗಿಸುವುದಾಗಿ ಬೆದರಿಕೆ ಹಾಕಿದ್ದ ಕ್ಲಬ್ ವಿರುದ್ಧ ನ್ಯಾಯಾಲಯಕ್ಕೆ ಹೋಗಲು ಮೆಸ್ಸಿಗೆ ಇಷ್ಟವಿಲ್ಲ. ಹೀಗಾಗಿ ಅವರು ಬಾರ್ಸಿಲೋನಾದಲ್ಲೇ ಮುಂದುವರೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಚಾಂಪಿಯನ್ಸ್ ಲೀಗ್ ಕ್ವಾರ್ಟರ್ ಫೈನಲ್‌ನಲ್ಲಿ ಬೇಯರ್ಸ್ ವಿರುದ್ಧ ಬಾರ್ಸಿಲೋನಾ ತಂಡ 8-2ರ ಸೋಲಿನೊಂದಿಗೆ ಟೂರ್ನಿಯಿಂದ ಹೊರಬಿದ್ದಿತ್ತು. ಈ ಸೋಲಿನಿಂದ ಮುಖಭಂಗ ಅನುಭವಿಸಿದ್ದ ಮೆಸ್ಸಿ, ತಾನು ಬಾರ್ಸಿಲೋನಾ ತೊರೆಯುವುದಾಗಿ ಹೇಳಿಕೊಂಡಿದ್ದರು.

ಐಪಿಎಲ್ 2020: ಸೆಪ್ಟೆಂಬರ್ 19ರ ಉದ್ಘಾಟನಾ ಪಂದ್ಯಕ್ಕೆ ತಂಡಗಳು ಪ್ರಕಟ

ಬಾರ್ಸಿಲೋನಾ ಜೊತೆಗಿನ ಮೆಸ್ಸಿಯ ಒಪ್ಪಂದ ಮುಂಬರುವ ಜೂನ್ 10ಕ್ಕೆ ಕೊನೆಗೊಳ್ಳುತ್ತದೆ. ಅದಕ್ಕೂ ಮುನ್ನ ಮೆಸ್ಸಿ ತಂಡ ತೊರೆಯುವುದಾದರೆ ಕ್ಲಬ್‌ಗೆ €700 ಮಿಲಿಯನ್ (ಸುಮಾರು 60,71,34,53,395 ರೂ.) ಪಾವತಿಸಬೇಕಾಗುತ್ತದೆ. ಈ ಕಾರಣದಿಂದಾಗಿ ಮೆಸ್ಸಿ ಒಪ್ಪಂದ ಮುಗಿಯುವವರೆಗೆ ಬಾರ್ಸಿಲೋನಾದಲ್ಲೇ ಉಳಿಯುವ ನಿರ್ಧಾರ ತಾಳಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Friday, September 4, 2020, 23:42 [IST]
Other articles published on Sep 4, 2020
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X