ಪ್ರತಿಷ್ಟಿತ ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಮಾರಾಟಕ್ಕೆ ಮುಂದಾದ ಮಾಲೀಕರು!

ಫುಟ್ಬಾಲ್ ಲೋಕದ ಪ್ರತಿಷ್ಟಿತ ಫುಟ್ಬಾಲ್ ಕ್ಲಬ್‌ಗಳಲ್ಲಿ ಒಂದಾದ ಮ್ಯಾಂಚೆಸ್ಟರ್ ಯುನೈಟೆಡ್‌ ಮಾರಾಟಕ್ಕೆ ಮಾಲೀಕರು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಫುಟ್ಬಾಲ್ ಲೆಜೆಂಡ್ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊರನ್ನು ವಿವಾದಾತ್ಮಕ ಮಾತುಗಳ ಹಿನ್ನಲೆಯಲ್ಲಿ ಒಪ್ಪಂದವನ್ನು ರದ್ದುಗೊಳಿಸಿ ತಂಡದಿಂದ ಹೊರಹಾಕಿದೆ. ಇದ್ರ ಬೆನ್ನಲ್ಲೇ ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಮಾರಾಟಕ್ಕೆ ಮಾಲೀಕರು ಮುಂದಾಗಿದ್ದಾರೆ.

17 ವರ್ಷಗಳ ಹಿಂದೆ ಮಾರಾಟವಾಗಿದ್ದ ಕ್ಲಬ್ ಅನ್ನು ಗ್ಲೇಜರ್ ಕುಟುಂಬ ಖರೀದಿಸಿ, ಇಂಗ್ಲೀಷ್ ಪ್ರೀಮಿಯರ್ ಲೀಗ್ ಸಾಕರ್ ಕ್ಲಬ್‌ನಲ್ಲಿ ಸ್ಪರ್ಧಿಸಿತು.

ಹೊಸ ಹೂಡಿಕೆ, ಮಾರಾಟ ಅಥವಾ ಇತರೆ ವಹಿವಾಟು ಸೇರಿದಂತೆ ಎಲ್ಲಾ ರೀತಿಯ ಪರ್ಯಾಯ ಕಾರ್ಯತಂತ್ರವನ್ನು ಕ್ಲಬ್ ಪರಿಗಣಿಸುತ್ತೆ ಎಂದು ಮ್ಯಾಂಚೆಸ್ಟರ್ ಯುನೈಟೆಡ್ ಪ್ರಕಟಣೆಯಲ್ಲಿ ತಿಳಿಸಿದೆ.

ಮ್ಯಾಂಚೆಸ್ಟರ್ ಯುನೈಟೆಡ್‌ನಿಂದ ಹೊರಬಿದ್ದ ಕ್ರಿಶ್ಚಿಯಾನೋ ರೊನಾಲ್ಡೋಮ್ಯಾಂಚೆಸ್ಟರ್ ಯುನೈಟೆಡ್‌ನಿಂದ ಹೊರಬಿದ್ದ ಕ್ರಿಶ್ಚಿಯಾನೋ ರೊನಾಲ್ಡೋ

2005ರಲ್ಲಿ ಅಮೆರಿಕಾದ ಗ್ಲೇಜರ್ ಕುಟುಂಬ $934 ಮಿಲಿಯನ್ ಡಾಲರ್ ನೀಡಿ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಸ್ವಾಧೀನಪಡಿಸಿಕೊಂಡಿತು. ಅಲ್ಲಿಂದ ಇಲ್ಲಿಯವರಿಗೆ ಇದ್ರ ಮಾಲೀಕರು ಮಾರಾಟಕ್ಕೆ ಮುಂದಾಗಿರಲಿಲ್ಲ. ಪ್ರಸ್ತುತ ಪ್ರೀಮಿಯರ್ ಲೀಗ್‌ನಲ್ಲಿ ಮ್ಯಾಂಚೆಸ್ಟರ್ 11 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ.

ಕ್ರಿಸ್ಟಿಯಾನೊ ರೊನಾಲ್ಡೊ ಒಪ್ಪಂದ ವಜಾ ಮಾಡಿದ್ದೇಕೆ?
'ಮ್ಯಾಂಚೆಸ್ಟರ್ ಕ್ಲಬ್ ನನ್ನನ್ನು ಬಲವಂತವಾಗಿ ಹೊರಹಾಕಲು ಪ್ರಯತ್ನಿಸುತ್ತಿದೆ' ಎಂದು ಬ್ರಿಟನ್ನ 'ಟಾಕ್ ಟಿವಿ'ಗೆ ನೀಡಿದ ಸಂದರ್ಶನದಲ್ಲಿ ರೊನಾಲ್ಡೊ ಆರೋಪಿಸಿದ್ದರು. ಆದ್ರೆ ಈಗ ಕತಾರ್‌ನಲ್ಲಿ ಫುಟ್ಬಾಲ್ ವಿಶ್ವಕಪ್‌ನಲ್ಲಿ ಬ್ಯುಸಿಯಾಗಿರುವ ರೊನಾಲ್ಡೊ, ತನ್ನ ಹಳೆಯ ವೀಡಿಯೋ ಬೆಳಕಿಗೆ ಬಂದ ಹಿನ್ನಲೆ ಒಪ್ಪಂದವನ್ನು ಮುರಿದ ಹಿನ್ನಲೆ ವಜಾಗೊಂಡಿದ್ದಾರೆ.

ಜೊತೆಗೆ ಕ್ಲಬ್ ತೊರೆದು ಸುದ್ದಿಯಾಗಿರುವ ಫುಟ್ಬಾಲ್ ಸ್ಟಾರ್‌ಗೆ ಎರಡು ಪಂದ್ಯಗಳಲ್ಲಿ ನಿಷೇಧ ಹೇರಲಾಗಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
ಫಿಫಾ ವಿಶ್ವಕಪ್ ಪೂರ್ವಭಾವಿಗಳು
VS
Story first published: Wednesday, November 23, 2022, 23:47 [IST]
Other articles published on Nov 23, 2022
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X