ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಸಲಾ ಬೀಳಿಸಿದ ರಾಮೋಸ್ ಶಿಕ್ಷಿಸಿ ಎಂದ 5 ಲಕ್ಷ ಮಂದಿ!

By Mahesh
Mohamed Salah injury: Punish Ramos petition hits 500,000 signatures

ಮ್ಯಾಡ್ರಿಡ್, ಮೇ 30: ಚಾಂಪಿಯನ್ ಲೀಗ್ ಪಂದ್ಯದಲ್ಲಿ ಲಿವರ್ ಪೂಲ್ ನ ಪ್ರಮುಖ ಆಟಗಾರ ಈಜಿಪ್ಟಿನ ಮೊಹಮ್ಮದ್ ಸಲಾ ಗಾಯಗೊಂಡಿದ್ದು, ಅಭಿಮಾನಿಗಳಿಗೆ ಭಾರಿ ಆಘಾತವನ್ನು ತಂದಿದೆ.

ಬಲ ಭುಜಕ್ಕೆ ಗಾಯ ಮಾಡಿಕೊಂಡ ಸಲಾ ಅವರು ರಷ್ಯಾದಲ್ಲಿ ನಡೆಯಲಿರುವ ಈ ಬಾರಿಯ ವಿಶ್ವಕಪ್ ಫುಟ್ಬಾಲ್ ನ ಮೊದಲ ಕೆಲವು ಪಂದ್ಯಗಳನ್ನು ಮಿಸ್ ಮಾಡಿಕೊಳ್ಳುವ ಸಾಧ್ಯತೆಯಿದೆ. ಈ ನಡುವೆ ಸಲಾ ಅವರನ್ನು ಕೆಳಕ್ಕೆ ದೂಡಿದ ಸರ್ಗಿಯೋ ರಮೋಸ್ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ಶುರು ಮಾಡಿದ್ದ ಆನ್ ಲೈನ್ ಅಭಿಯಾನ ಈಗ 5 ಲಕ್ಷ ಸಹಿ ಪಡೆದು ತನ್ನ ಗುರಿ ಮುಟ್ಟಿದೆ.

ಚಾಂಪಿಯನ್ಸ್ ಲೀಗ್ 2018 : ಹ್ಯಾಟ್ರಿಕ್ ಸಾಧಿಸಿದ ರಿಯಲ್ ಮ್ಯಾಡ್ರಿಡ್ಚಾಂಪಿಯನ್ಸ್ ಲೀಗ್ 2018 : ಹ್ಯಾಟ್ರಿಕ್ ಸಾಧಿಸಿದ ರಿಯಲ್ ಮ್ಯಾಡ್ರಿಡ್

ಶನಿವಾರದಂದು ನಡೆದ ಪಂದ್ಯದಲ್ಲಿ ಸಲಾ ಅವರು ಪಂದ್ಯದ ಅರ್ಧ ಗಂಟೆ ಮಾತ್ರ ಮೈದಾನದಲ್ಲಿದ್ದರು. ಈ ಪಂದ್ಯವನ್ನು 3-1 ಅಂತರದಿಂದ ರಿಯಲ್ ಮ್ಯಾಡ್ರಿಡ್ ಎದುರು ಲಿವರ್ ಪೂಲ್ ಸೋತಿತು.

ರಮೋಸ್ ಒರಟಾಟ: ವಿಡಿಯೋ ರೀಪ್ಲೇಗಳಲ್ಲಿ ನೋಡಿದಾಗ ರಮೋಸ್ ಅವರು ಬೇಕಂತಲೇ ಸಲಾ ಅವರ ಭುಜವನ್ನು ಹಿಡಿದುಕೊಂಡಿರುವುದು ಸ್ಪಷ್ಟವಾಗಿತ್ತು. ಇದನ್ನು ನೋಡಿ ಆಕ್ರೋಶಗೊಂಡ ಅಭಿಮಾನಿಗಳು ಬುಧವಾರದಂದು ಆರಂಭಿಸಿದ ಒಂದು ಮಿಲಿಯನ್ ಸಹಿ ಅಭಿಯಾನವನ್ನು ಚೇಂಜ್. ಆರ್ಗ್ ನಲ್ಲಿ ಮಾಡುವ ಮೂಲಕ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ರಮೋಸ್ ವಿರುದ್ಧ 1 ಬಿಲಿಯನ್ ಯುರೋ ಕೇಸ್ ದಾಖಲಿಸಿರುವ ಈಜಿಪ್ಟಿನ ವಕೀಲರೊಬ್ಬರು ಫೀಫಾ ಗೆ ದೂರು ನೀಡಿದ್ದಾರೆ.

ಈ ಬಾರಿ ವಿಶ್ವಕಪ್ ನಲ್ಲಿ ಎ ಗುಂಪಿನಲ್ಲಿರುವ ಈಜಿಪ್ಟ್ ಜೂನ್ 15ರಂದು ಉರುಗ್ವೆ ವಿರುದ್ಧ ಆಡಲಿದೆ. ರಮೋಸ್ ಉದ್ದೇಶಪೂರ್ವಕವಾಗಿ ಸಲಾ ಅವರು ಗಾಯಗೊಳ್ಳುವಂತೆ ಮಾಡಿದ್ದಾರೆ. ಅವರ ಅನುಪಸ್ಥಿತಿ ವಿಶ್ವಕಪ್ ಪಂದ್ಯಗಳ ಮೇಲೆ ಪರಿಣಾಮ ಬೀರಲಿದೆ ಎಂದು ವಾದಿಸಲಾಗಿದೆ.

Story first published: Wednesday, May 30, 2018, 23:36 [IST]
Other articles published on May 30, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X