ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫುಟ್‌ಬಾಲ್ ದೆಸೆಯಿಂದ ಭಾರತದಲ್ಲಿ ಪಿಡ್ಜಾ, ಬೀಯರ್ ಮಾರಾಟ ಜೋರು

By Manjunatha
Pizza and beer getting higher sales in India due to Football world cup

ನವ ದೆಹಲಿ, ಜೂನ್ 29: ಅತ್ತ ರಷ್ಯಾದಲ್ಲಿ ಫುಟ್‌ಬಾಲ್ ವಿಶ್ವಕಪ್ ಪ್ರಾರಂಭವಾಗಿದ್ದೇ ತಡ ಇಲ್ಲಿ ಭಾರತದಲ್ಲಿ ಫಿಡ್ಜಾ ಮತ್ತು ಬಿಯರ್‌ನ ಮಾರಾಟ ಹೆಚ್ಚಾಗಿದೆಯಂತೆ.

ಹೌದು, ಫುಟ್‌ಬಾಲ್ ಪ್ರೇಮಿಗಳು ತಡ ರಾತ್ರಿ ಮ್ಯಾಚು ನೊಡಲು ಜೊತೆಗೆ ಫಿಡ್ಜಾ ಮತ್ತು ಬಿಯರ್‌ ಅನ್ನು ಹೆಚ್ಚು ನೆಚ್ಚಿಕೊಳ್ಳುತ್ತಿದ್ದಾರೆ ಎನ್ನುತ್ತಿದೆ ಜುಬಿಲಿಯಂಟ್ ಫುಡ್‌ವರ್ಕ್‌ ಲಿಮಿಟೆಡ್ ಸಂಸ್ಥೆ. ಇದೇ ಸಂಸ್ಥೆ ಭಾರತದಲ್ಲಿ ಡಾಮಿನೋಸ್ ಮತ್ತು ಕಿಂಗ್‌ಫಿಷರ್‌ನ ಲೆಕ್ಕಾಚಾರಗಳನ್ನು ನೋಡಿಕೊಳ್ಳುತ್ತದೆ.

ಐಪಿಎಲ್ ಸಮಯದಲ್ಲೂ ಪಿಡ್ಜಾ ಮತ್ತು ಬಿಯರ್ ಮಾರಾಟ ಹೆಚ್ಚಿಗೆಯೇ ಇತ್ತಂತೆ ಆದರೆ ಫುಟ್‌ಬಾಲ್ ಪ್ರಾರಂಭವಾದ ಮೇಲೆ ಬೇಡಿಕೆ ಇನ್ನಷ್ಟು ಹೆಚ್ಚಾಗಿದೆ ಎನ್ನಲಾಗಿದೆ.

ಹೊಸ ತಲೆಮಾರಿನ ಕ್ರೀಡಾ ಪ್ರೇಮಿಗಳು ಫಾಸ್ಟ್ ಫುಡ್ ಮತ್ತು ಬಿಯರ್ ಹೀರುತ್ತಾ ಫುಟ್‌ಬಾಲ್‌ ಆಟದ ಸವಿ ಸವೆಯಲು ಹೆಚ್ಚು ಇಷ್ಟಪಡುತ್ತಿದ್ದಾರೆ. ಜೊತೆಗೆ ಫುಟ್‌ಬಾಲ್ ಪಂದ್ಯಗಳು ತಡ ರಾತ್ರಿ ಇರುವುದರಿಂದ ನಿದ್ದೆ ಬರದಂತೆ ಎದ್ದಿರಲು ಹಾಗೂ ಹಸಿವು ಕ್ರೀಡಾ ಪ್ರೇಮಕ್ಕೆ ಅಡ್ಡಿಯಾಗದಿರಲು ಇವುಗಳ ಅವಶ್ಯಕತೆ ಇದೆ ಎನ್ನುತ್ತದೆ ಜುಬಿಲಿಯಂಟ್ ಫುಡ್‌ವರ್ಕ್‌ ಲಿಮಿಟೆಡ್ ಸಂಸ್ಥೆ.

ಫುಟ್‌ಬಾಲ್ ವಿಶ್ವಕಪ್ ಪ್ರಾರಂಭವಾದಾಗಿನಿಂದಲೂ ಉನೈಟೆಡ್ ಬಿವರೇಜಸ್‌, ಬಡ್‌ವೈಸರ್‌, ಕಿಂಗ್‌ಫಿಷರ್‌, ಡಾಮಿನೋಸ್ ಸೇರಿದಂತೆ ಇನ್ನೂ ಹಲವು ಫಾಸ್ಟ್‌ಫುಡ್ ಮತ್ತು ಬಿಯರ್ ಕಂಪೆನಿಗಳಿಗೆ ಭಾರತದಲ್ಲಿ ಹೆಚ್ಚಿನ ಮಾರಾಟ ಆಗಿದೆಯಂತೆ.

Story first published: Friday, June 29, 2018, 18:34 [IST]
Other articles published on Jun 29, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X