ಪುನೀತ್ ಒಡೆತನದ ಬೆಂಗಳೂರು ರಾಯಲ್ಸ್ ಗೆ ಕೇರಳ ವಿರುದ್ಧ ಜಯ

Posted By:

ಬೆಂಗಳೂರು, ಸೆ. 17: ಕನ್ನಡ ಚಲನಚಿತ್ರ ತಾರೆ 'ಪವರ್ ಸ್ಟಾರ್' ಪುನೀತ್ ರಾಜ್ ಕುಮಾರ್ ಒಡೆತನದ ಪ್ರೀಮಿಯರ್ ಫುಟ್ಸಾಲ್ ಲೀಗ್ (ಪಿಎಫ್ ಎಲ್) ತಂಡ ಬೆಂಗಳೂರು ರಾಯಲ್ಸ್ ಭರ್ಜರಿ ಜಯ ದಾಖಲಿಸಿದೆ.

ಪುನೀತ್, ಬೆಂಗಳೂರು ತಂಡಕ್ಕೆ ಒಡೆಯ

ಎರಡನೇ ಆವೃತ್ತಿಯ ಪಿಎಫ್ಎಲ್ ನಲ್ಲಿ ಬೆಂಗಳೂರು ರಾಯಲ್ಸ್ ತಂಡದ ಎದುರು ಕೇರಳ ಕೋಬ್ರಾ ತಂಡವು 4-0 ಅಂತರದ ಹೀನಾಯ ಸೋಲು ಕಂಡಿದೆ.

Premier Futsal: Bengaluru Royals thrash Kerala Cobras 4-0

ಬೆಂಗಳೂರಿನ ಪರ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ದಿಗ್ಗಜ ಪಾಲ್ ಶೋಲ್ಸ್ ಅವರು ಒಂದು ಗೋಲು ಬಾರಿಸಿದರು. ಪಂದ್ಯದ 13, 32,38 ಹಾಗೂ 40ನೇ ನಿಮಿಷದಲ್ಲಿ ಬೆಂಗಳೂರು ತಂಡ ಗೋಲು ಬಾರಿಸಿದರು.

ಬೆಂಗಳೂರಿನ ಫ್ರಾಂಚೈಸಿಗೆ ಈ ಮುಂಚೆ 'Bangalore 5s' ಎಂದು ಹೆಸರಿಡಲಾಗಿತ್ತು. ನಂತರ ಬೆಂಗಳೂರು ರಾಯಲ್ಸ್ ಎಂದು ಹೆಸರಿಸಲಾಗಿದೆ. ಪುನೀತ್ ರಾಜ್ ಕುಮಾರ್ ಅವರು ಪ್ರೀಮಿಯರ್ ಕಬಡ್ಡಿ ಲೀಗ್ ನಲ್ಲಿ ಬೆಂಗಳೂರು ಬುಲ್ಸ್ ತಂಡದ ರಾಯಭಾರಿಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

ವಿಡಿಯೋ: ರೆಹಮಾನ್ ಮ್ಯೂಸಿಕ್, ವಿರಾಟ್ ಕೊಹ್ಲಿ ಡಾನ್ಸ್!

ಇನ್ನೊಂದು ಪಂದ್ಯದಲ್ಲಿ ಗೋನ್ಜಲೆಜ್ ಲೂಯಿಸ್ ನೆರವಿನಿಂದ ತೆಲುಗು ಟೈಗರ್ಸ್ ತಂಡವು ಚೆನ್ನೈ ಸಿಂಗಮ್ ವಿರುದ್ಧ 3-1 ಅಂತರದ ಗೆಲುವು ದಾಖಲಿಸಿತು.

Puneeth Rajkumar

ಪಿಎಫ್ಎಲ್ : ಭಾರತದಲ್ಲಿ ನಡೆಯಲಿರುವ ಮೊಟ್ಟ ಮೊದಲ ಬಹುರಾಷ್ಟ್ರೀಯ ಫುಟ್ಸಾಲ್ ಲೀಗ್ ಇದಾಗಿದೆ. ಪ್ರತಿ ತಂಡದಲ್ಲೂ 5 ಜನ ಆಟಗಾರರಿರುತ್ತಾರೆ. ತಲಾ 20 ನಿಮಿಷಗಳ ಎರಡು ಅವಧಿ ಆಟವಾಡಲಾಗುತ್ತದೆ. ಇದಕ್ಕೆ ಫುಟ್ಸಾಲ್ ಎಂದು ಕರೆಯಲಾಗುತ್ತದೆ.

ಫುಟ್ಸಾಲ್ ಅಸೋಸಿಯೇಷನ್ ಆಫ್ ಇಂಡಿಯಾ (ಎಫ್ಎಐ), ಅಸೋಸಿಯೇಷನ್ ಮುಂಡಿಯಾಲ್ ಡಿ ಫುಟ್ಸಾಲ್ (ಎಎಂಎಫ್) ನ ಮಾನ್ಯತೆ ಇದಕ್ಕಿದೆ. ಪ್ರೀಮಿಯರ್ ಫುಟ್ಸಾಲ್ ಪಂದ್ಯಗಳು ಸೋನಿ ಸಿಕ್ಸ್, ಸೋನಿ ಇಎಸ್ ಪಿಎನ್ ಹಾಗೂ ಸೋನಿ ಆಥ್ ವಾಹಿನಿಯಲ್ಲಿ ನೇರ ಪ್ರಸಾರವಾಗಲಿದೆ.Sony LIV ಅಪ್ಲಿಕೇಷನ್ ನಲ್ಲೂ ಪಂದ್ಯಗಳನ್ನು ನೋಡಬಹುದು.

Story first published: Sunday, September 17, 2017, 15:48 [IST]
Other articles published on Sep 17, 2017
+ ಇನ್ನಷ್ಟು
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ