ಮತ್ತೆ ಅಪ್ಪನಾದ ರೊನಾಲ್ಡೋ, ಪುತ್ರಿ ಜತೆ ಫೋಟೊ

Posted By:

ಲಿಸ್ಬನ್, ನವೆಂಬರ್ 13: ಪೋರ್ಚುಗಲ್ ಫುಟ್ಬಾಲ್ ತಂಡದ ನಾಯಕ, ವಿಶ್ವದ ದುಬಾರಿ ಆಟಗಾರ, ಪ್ಲೇ ಬಾಯ್ ಎಂದೇ ಖ್ಯಾತರಾದ ಕ್ರಿಸ್ಟಿಯಾನೋ ರೊನಾಲ್ಡೋ ಮತ್ತೆ ತಂದೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ಮಗು ಹಾಗೂ ತಾಯಿ ಜತೆ ಫೋಟೋ ತೆಗೆಸಿಕೊಂಡಿದ್ದಾರೆ.

ರೊನಾಲ್ಡೊಗೆ ಮಗುವಾಯ್ತಂತೆ, ಆದ್ರೆ ಅಮ್ಮಯಾರು?

ಜತೆಗೆ ರೊನಾಲ್ಡೋ ಅವರು ತಮ್ಮ ಅಧಿಕೃತ ವೆಬ್‌ಸೈಟ್‌ ಸೇರಿದಂತೆ ಟ್ವಿಟರ್ , ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ. ರೊನಾಲ್ಡೋ ಪುತ್ರ ಜ್ಯೂನಿಯರ್ ಗೆ ತನ್ನ ತಾಯಿ ಯಾರು ಎಂಬುದನ್ನು ತಿಳಿಸದೆ ಬೆಳೆಸುತ್ತಿರುವ ರೊನಾಲ್ಡೋ ಅವರು ಈ ಬಾರಿ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ.

Daddy cool! Ronaldo becomes father again!

ರೊನಾಲ್ಡೋ ಅವರ ಗೆಳತಿ ಜಾರ್ಜಿನಾ ರೊಡ್ರಿಗ್ರೇಜ್ ಅವರು ಜನ್ಮ ನೀಡಿದ ಶಿಶುವಿಗೆ ಅಲಾನಾ ಮಾರ್ಟಿನಾ ಎಂದು ಹೆಸರಿಡಲಾಗಿದೆ. ಜಿಯೋ( ಜಾರ್ಜಿನಾ ರೊಡ್ರಿಗ್ರೇಜ್) ಹಾಗೂ ಮಗಳು ಅಲಾನಾ ಇಬ್ಬರು ಚೆನ್ನಾಗಿದ್ದಾರೆ, ನಾನು ತುಂಬಾ ಸಂತೋಷವಾಗಿದ್ದೇನೆ ಎಂದು 32 ವರ್ಷ ವಯಸ್ಸಿನ ಸ್ಟಾರ್ ಆಟಗಾರ ಟ್ವೀಟ್ ಮಾಡಿದ್ದಾರೆ.

ಫಾದರ್ಸ್ ಡೇ: ಫುಟ್ಬಾಲ್ 'ಸ್ಟಾರ್' ಅಪ್ಪಂದಿರು

ರೊನಾಲ್ಡೋ ತಮ್ಮ ಪುತ್ರ ಏಳು ವರ್ಷ ವಯಸ್ಸಿನ ಕ್ರಿಸ್ಟಿಯಾನೋ ಜ್ಯೂನಿಯರ್ ಜತೆ ಜಾರ್ಜಿನಾ ಹಾಗೂ ನವಜಾತ ಶಿಶುವನ್ನು ನೋಡಿ ಫೋಟೋ ತೆಗೆಸಿಕೊಂಡಿದ್ದಾರೆ. ಜೂನ್ ನಲ್ಲಿ ಇವಾ ಹಾಗೂ ಮಟೆಯೋ ಎಂಬ ಅವಳಿಗಳಿಗೆ ರೊನಾಲ್ಡೋ ತಂದೆಯಾದರು.

ಪೋರ್ಚುಗಲ್ ಸದ್ಯ ಸೌದಿ ಅರೇಬಿಯಾ ಹಾಗೂ ಯುನೈಟೆಡ್ ಸ್ಟೇಟ್ಸ್ ವಿರುದ್ಧ ಫ್ರೆಂಡ್ಲಿ ಪಂದ್ಯಗಳನ್ನಾಡುತ್ತಿದ್ದು,ರಿಯಲ್ ಮ್ಯಾಡ್ರಿಡ್ ಸ್ಟಾರ್ ರೊನಾಲ್ಡೋಗೆ ವಿಶ್ರಾಂತಿ ನೀಡಲಾಗಿದೆ.

ರೊನಾಲ್ಡೊ ಗೆಳತಿಯರು: ನಟಿಯರಾದ ಪ್ಯಾರಿಸ್ ಹಿಲ್ಟನ್, ಜೆಮ್ಮಾ ಅಟ್ಕಿನ್ಸನ್, ಇಟಲಿಯ ರೂಪದರ್ಶಿ ಲೆಟಿಜಿಯಾ ಫಿಲಿಪ್ಪಿ, ವೆಲ್ಷ್ ನ ನಟಿ ಇಮೊಗೆನ್ ಥಾಮಸ್ , ಬ್ರೆಜಿಲ್ ನ ಫಿಟ್ ನೆಸ್ ಟ್ರೈನರ್ ಗ್ಯಾಬ್ರಿಲಾ ಏಂಟಿನ್ಜರ್, ಕೊಲಂಬಿಯಾದ ಮಿರೆಲ್ಲ ಗ್ರಿಸಲೆಸ್, ಬ್ರೆಜಿಲಿನ ಬೆಡಗಿ ರೈಕಾ ಒಲಿವೈರಾ, ಸೆಕ್ಸಿ ಅಂಗಾಗಗಳ ಒಡತಿ ಕಿಂ ಕರ್ದಶಿಯನ್ ಕೂಡಾ ರೊನೊಲ್ಡೊ ಜತೆ ಕಾಲಕಳೆದಿದ್ದಳು... ಊಫ್ .. ಪಟ್ಟಿ ಮುಂದುವರೆಯುತ್ತಲೇ ಇರುತ್ತದೆ.

Story first published: Monday, November 13, 2017, 12:24 [IST]
Other articles published on Nov 13, 2017
Please Wait while comments are loading...
POLLS