ರಷ್ಯಾ ಟೂರ್ ಡೈರಿ: 2ನೇ ವರ್ಲ್ಡ್ ವಾರಿನ ಕತೆ ಹೇಳಿತು ವೋಲ್ಗೊಗ್ರಾಡ್!

By ಅರವಿಂದ್ ಎಸ್
Volgograd, a World War ll site, looks towards a bright future

(ಚಿತ್ರದಲ್ಲಿರುವುದು ವೋಲ್ಗೊಗ್ರಾಡ್ ನ ಡೌನ್ಟೌನ್ ನಲ್ಲಿ ಸ್ಟಾಲಿನ್ಗ್ರಾಡ್ ಕದನದಿಂದ (1942-43) ಹಾಳಾದ ಗೋಧಿ ಗಿರಣಿಯ ಅವಶೇಷಗಳು. ಕ್ರೆಡಿಟ್: ಅರ್ಜುನ್ ಗಣೇಶ್)

ವೋಲ್ಗೊಗ್ರಾಡ್, ಜು. 2: ಸಂಪೂರ್ಣ ನಗರದ ಪುನರ್ನಿರ್ಮಾಣ ವೋಲ್ಗೊಗ್ರಾಡ್ ಗೆ ದೊಡ್ಡ ಕೆಲಸವೇನಲ್ಲ. ಅವರು ಈಗಾಗಲೇ ಎರಡು ಬಾರಿ ಇದನ್ನು ಮಾಡಿದ್ದಾಗಿದೆ. - 1942-43ರಲ್ಲಿ ಸ್ಟಾಲಿನ್ಗ್ರಾಡ್ ಕದನದಲ್ಲಿ ಹಾನಿಗೊಳಗಾದ ಸ್ಟಾಲಿನ್ಗ್ರಾಡ್ ಎಂಬ ಹೆಸರಿನ ಸಿಟಿಯನ್ನು ಮರು ನಿರ್ಮಿಸಿದರು. ಅದು ಸಿಸ್ಸಿಟ್ಸಿನ್ ಆಯಿತು. ಅನಂತರ ಅದೇ ಸಿಟಿ ವೋಲ್ಗಾ ನದಿಯಿಂದಾಗಿ ವೊಲ್ಗೊಗ್ರಾಡ್ ಎಂದು ಹೆಸರು ಬದಲಿಸಿಕೊಂಡಿತ್ತು.

ಆದರೆ ವೋಲ್ಗೊಗ್ರಾಡ್ ಗೆ ತುಂಬಾ ಸವಾಲಿನ ಕೆಲಸವಾಗಿ ಪರಿಣಮಿಸಿರಬಹುದಾದುದು ಫೀಫಾ ವಿಶ್ವಕಪ್ ಪಂದ್ಯಕ್ಕಾಗಿ ವೋಲ್ಗೊಗ್ರಾಡ್ ನಲ್ಲಿ ಸ್ಟೇಡಿಯಂ ಒಂದನ್ನು ನಿರ್ಮಿಸಿದ್ದಾರಲ್ಲ, ಅದು. ಯಾಕೆಂದರೆ ಯುದ್ಧದ ಇತಿಹಾಸವನ್ನು ಸಾರುವ ನಗರದಲ್ಲಿ ಆ ಐತಿಹಾಸಿಕ ಕುರುಹುಗಳಿಗೆ ಚ್ಯುತಿ ಬಾರದಂತೆ ಸ್ಟೇಡಿಯಂ ನಿರ್ಮಿಸೋದು ಕಷ್ಟದ ಕೆಲಸವಲ್ಲವೆ?

ವಿಶ್ವ ಯುದ್ಧದಿಂದ ಮಡಿದ ತಮ್ಮ ನಾಯಕರನ್ನು ನೆನಪಿಟ್ಟುಕೊಳ್ಳಲು ಮಾಮಾಯೆವ್ ಕುರ್ಗನ್ ಮತ್ತು ಡೊಮ್ ಪಾವ್ಲೋವ್ರಂತಹ ಸ್ಮಾರಕಗಳನ್ನು ಇಲ್ಲಿ ನಿರ್ಮಿಸಲಾಗಿದೆ. ಯುದ್ಧದ ಸಮಯದಲ್ಲಿ ರಕ್ತಸಿಕ್ತವಾದ ಗೋಧಿ ಗಿರಣಿಯನ್ನು ನಗರದ ಮಧ್ಯಭಾಗದಲ್ಲಿ ಸುಂದರವಾಗಿ ಸಂರಕ್ಷಿಸಲಾಗಿದೆ. ಈ ಸ್ಮಾರಕಗಳನ್ನು ನೋಡೋದು, ಇಲ್ಲಿ ಸುತ್ತಾಡೋದೇ ಒಂಥರಾ ಖುಷಿ ನೀಡುತ್ತದೆ. ಆದರೆ ಮುಂದೆ ಇದೇ ಸ್ಮಾರಕ ಆಧುನಿಕತೆ, ಸ್ವಾರ್ಥಕ್ಕೀಡಾಗಿ ನಾಳೆ ಹಾಳಾಗುವ ಸಾಧ್ಯತೆಯೂ ಇಲ್ಲದಿಲ್ಲ.

ಆ ಸ್ಥಳದಲ್ಲಿ ಕಣ್ಣಿಗೆ ಬಿದ್ದ ಒಬ್ಬರಲ್ಲಿ ಮಾತನಾಡಿಸಿದೆ. 'ನಾವು ನಮ್ಮ ನಾಯಕರನ್ನು ಈಗಲೂ ಪ್ರೀತಿ ಪೂರ್ವಕವಾಗಿ ಸ್ಮರಿಸಿಕೊಳ್ಳುತ್ತೇವೆ. ನಗರದ ಸುತ್ತಲೂ ನಮಗಾಗಿ ಪ್ರಾಣ ತ್ಯಾಗ ಮಾಡಿದ ಈ ನಾಯಕರ ಬಗ್ಗೆ ಎಲ್ಲರಿಗೂ ಬಹಳಷ್ಟು ಗೌರವವಿದೆ. ಗ್ರೇಟ್ ಪ್ಯಾಟ್ರಿಯಾಟಿಕ್ ಯುದ್ಧವನ್ನು ನೆನಪಿಸಿಕೊಳ್ಳುವ ಸಲುವಾಗಿ ಮಾಮಾಯೆವ್ ಕುರ್ಗನ್ (ಮಾತೃಭೂಮಿಯ ಪ್ರತಿಮೆ) ಗೆ ವಿಶ್ವಕಪ್ ಸಮಯದಲ್ಲಿ ವಿಶೇಷ ಬೆಳಕನ್ನು ಅಳವಡಿಸಿ ಅದರ ಅಂದ ಹೆಚ್ಚಿಸಲಾಗಿದೆ. ನಮ್ಮ ನಾಯಕರ ಸಾಹಸ, ತ್ಯಾಗಗಳನ್ನು ನಾವು ಯಾವತ್ತಿಗೂ ಸ್ಮರಿಸಿಕೊಳ್ಳುತ್ತಿರುತ್ತೇವೆ. ಈ ನಡುವೆ ನಾವು ಅಭಿವೃದ್ಧಿ ಹೊಂದುತ್ತಿರುವ ಬಗ್ಗೆಯೂ ನಮಗೆ ಖುಷಿಯಿದೆ' ಎಂದು ಅಲ್ಲಿನ ಯುದ್ಧ ಇತಿಹಾಸದ ಬಗ್ಗೆ ನೆಬೋ ರೈ (ಮೀನಿನ ಆಕಾಶ) ಹೆಸರಿನ ವೋಲ್ಗೋಗ್ರಾಡ್ ನ ಜನಪ್ರಿಯ ಬ್ಯಾಂಡ್ ನ ಅಲೆಕ್ಸಾಂಡರ್ ಕೊಸ್ಟನೋವ್ ಎನ್ನುವವರು ತಿಳಿಸಿದರು.

Volgograd, a World War ll site, looks towards a bright future

ವೊಲ್ಗೊಗ್ರಾಡ್ ನಲ್ಲಿ ಬೆಳಕಿನ ಪ್ರದರ್ಶನದ ಸಮಯದಲ್ಲಿ ಕಣ್ಸೆಳೆಯುತ್ತಿರುವ ಮಮಯೆವ್ ಕುರ್ಗನ್ (ಮಾತೃಭೂಮಿಯ ಪ್ರತಿಮೆ).

ಮಾಸ್ಕೋಗೆ ಹೋಲಿಸಿದರೆ ಸೇಂಟ್ ಪೀಟರ್ಸ್ ಬರ್ಗ್, ಕಝಾನ್, ವೋಲ್ಗೋಗ್ರಾಡ್ ಸ್ಟೇಡಿಯಂಗಳನ್ನು ಫೀಫಾ ಕಪ್ ಸಲುವಾಗಿ ಕಡಿಮೆ ಅವಧಿಯಲ್ಲಿ ನಿರ್ಮಿಸಲಾಗಿದೆ ಎಂದೆನಿಸುತ್ತೆ. ಅದರಲ್ಲೂ ವೋಲ್ಗೋಗ್ರಾಡ್ ನಗರವೇ ನೋಡೋಕೆ ಒಂಥರಾ ವಿಭಿನ್ನವಾಗಿದೆ ಅನ್ನಿಸಿತು. ಅಲ್ಲಿನ ಸಾರಿಗೆ ವ್ಯವಸ್ಥೆ, ಬಸ್ ಗಳು ಏನೋ ಹೊಸ ರೀತಿ ಅನ್ನಿಸುತ್ತಿದ್ದವು.

ಏನೇ ಇರಲಿ, ಸುಮ್ಮನೆ ಕೂತ ಊರೊಳಗೂ ಎಷ್ಟೊಂದು ಅಚ್ಚರಿಯ, ಬೆರಗಿನ ವಿಚಾರಗಳನ್ನು ತುಂಬಿರುತ್ತವೆ ಅಲ್ಲವೆ. ಸುಮ್ಮನಾದರೂ ನಾವು ಕೆದಕಿದಾಗಲೇ ಊರೊಂದು ಒಳಗೊಂಡಿರುವ ಅಚ್ಚರಿಗಳು ಅನಾವರಣಗೊಳ್ಳಲು ಸಾಧ್ಯ ಅಲ್ಲವೆ?

(ನಮ್ಮ myKhel.com ಪ್ರತಿನಿಧಿ ಅರವಿಂದ್ ಎಸ್ ಅವರು ರಷ್ಯಾದಲ್ಲಿದ್ದು, ಫುಟ್ಬಾಲ್ ಅಭಿಮಾನಿಗಳ ದೃಷ್ಟಿಕೋನದಿಂದ ಲೇಖನಗಳನ್ನು ರಚಿಸುತ್ತಿದ್ದಾರೆ)

For Quick Alerts
ALLOW NOTIFICATIONS
For Daily Alerts

  Story first published: Monday, July 2, 2018, 4:33 [IST]
  Other articles published on Jul 2, 2018
  + ಇನ್ನಷ್ಟು
  POLLS

  myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more