Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚೀನಾದಲ್ಲಿ ನಿರ್ಮಾಣವಾಗುತ್ತಿದೆ ವಿಶ್ವದ ಬೃಹತ್ ಫುಟ್ಬಾಲ್ ಸ್ಟೇಡಿಯಂ!

Worlds largest football stadium under construction in China

ಬೀಜಿಂಗ್, ಏಪ್ರಿಲ್ 24: ಚೀನಾ ದೇಶ ಹೊಸ ಫುಟ್ಬಾಲ್ ಸ್ಟೇಡಿಯಂಗಳ ನಿರ್ಮಾಣಕ್ಕೆ ಬಹುಕೋಟಿ ಡಾಲರ್ ಮೊತ್ತವನ್ನು ಹೂಡುತ್ತಿದೆ. ಅಷ್ಟೇ ಅಲ್ಲ, ಕ್ರೀಡಾಲೋಕದಲ್ಲಿ ಮಹಾನ್ ಶಕ್ತಿಯಾಗಬೇಕೆಂಬ ಮಹತ್ವಕಾಂಕ್ಷೆಯಡಿಯಲ್ಲಿ ಬೆಳೆಯುತ್ತಿರುವ ಚೀನಾ 2030ರ ವೇಳೆಗೆ ವಿಶ್ವಕಪ್ ಫುಟ್ಬಾಲ್‌ಗೆ ಆತಿಥ್ಯ ವಹಿಸುವ ಸೂಚನೆ ಕೂಡ ಈ ಮೂಲಕ ನೀಡುತ್ತಿದೆ.

ಇಂದು ಪ್ರಪಂಚದ ಬಹುಭಾಗವನ್ನು ಸ್ಥಗಿತಗೊಳಿಸಿರುವ, ಆರ್ಥಿಕತೆಯನ್ನು ಹಾಳು ಮಾಡಿರುವ, ಬಹುತೇಕ ಕ್ರೀಡಾಸ್ಪರ್ಧೆಗಳನ್ನು ತಡೆ ಹಿಡಿದಿರುವ ಕೊರೊನಾವೈರಸ್ ಸಾಂಕ್ರಾಮಿಕ ಸೋಂಕಿನ ಹೊರತಾಗಿಯೂ ಚೀನಾದೇಶ ನೂತನ ಫುಟ್ಬಾಲ್ ಸ್ಟೇಡಿಯಂಗಳ ನಿರ್ಮಾಣದ ಅಮಲಿನಲ್ಲಿದೆ.

ಡಿಸೆಂಬರ್‌ನಲ್ಲಿ ಚೀನಾದಲ್ಲೇ ಹಬ್ಬಲಾರಂಭಿಸದ ಮಾರಕ ಕೊರೋನಾವೈರಸ್ ಪ್ರಕರಣ ಚೀನಾದಲ್ಲೀಗ ಗಣನೀಯ ಮಟ್ಟದಲ್ಲಿ ತಗ್ಗುತ್ತಿದ್ದು, ಚೈನೀಸ್ ಸೂಪರ್ ಲೀಗ್‌ (ಸಿಎಸ್‌ಎಲ್) ಚಾಂಪಿಯನ್ ತಂಡ, ಗುವಾಂಗ್‌ ಝೌ ಎವರ್‌ಗ್ರಾಂಡೆ ಟಾವೊಬಾವೊ ಎಫ್ಸಿಯ ತವರೂರಿನಲ್ಲಿ ಬೃಹತ್ ಸ್ಟೇಡಿಯಂ ನಿರ್ಮಾಣಗೊಳ್ಳುತ್ತಿದೆ.

ಗುವಾಂಗ್‌ಝೌ ಸಿಟಿಯಲ್ಲಿ ನಿರ್ಮಾಣವಾಗುತ್ತಿರುವ ಈ ಸ್ಟೇಡಿಯಂನಲ್ಲಿ ಸುಮಾರು 1,00,000 ಮಂದಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇರಲಿದೆ. ಕಮಲದ ಆಕಾರದಲ್ಲಿರುವ ಈ ಬೃಹತ್ ಸ್ಟೇಡಿಯಂ ನಿರ್ಮಾಣಕ್ಕೆ ಚೀನಾ ಸುಮಾರು 1.7 ಬಿಲಿಯನ್ ಡಾಲರ್ (1,29,85,02,50,000 ರೂ.) ವ್ಯಯಿಸುತ್ತಿದೆ.

Story first published: Friday, April 24, 2020, 15:39 [IST]
Other articles published on Apr 24, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+