ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

1964ರ ಒಲಿಂಪಿಕ್ಸ್‌ನ ಚಿನ್ನದ ಪದಕ ಗೆದ್ದ ಹಾಕಿ ತಂಡದ ನಾಯಕ ಚರಣ್‌ಜಿತ್ ಸಿಂಗ್ ವಿಧಿವಶ

Charanjit singh

ಭಾರತದ ಮಾಜಿ ಹಾಕಿ ಪಟು, 1964ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡದ ನಾಯಕ ಚರಣ್‌ಜಿತ್ ಸಿಂಗ್ ತಮ್ಮ 90ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. 1964ರ ಒಲಿಂಪಿಕ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ಹಾಕಿ ತಂಡದ ನಾಯಕ ಚರಣ್‌ಜಿತ್ ಸಿಂಗ್ ಹಿಮಾಚಲ ಪ್ರದೇಶದ ಉನಾದಲ್ಲಿ ತಮ್ಮ ನಿವಾಸದಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ.

ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಚರಣ್‌ಜಿತ್ ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಕಳೆದ ಐದು ವರ್ಷಗಲಿಂದ ಪಾರ್ಶ್ವವಾಯು ಆಗಿತ್ತು. ದೀರ್ಘಕಾಲದ ವಯೋಸಹಜ ಕಾಯಿಲೆಗಳ ನಂತರ ಹೃದಯ ಸ್ತಂಭನದಿಂದ ಇಂದು ನಿಧನರಾಗಿದ್ದಾರೆ.

1964ರ ಒಲಿಂಪಿಕ್ಸ್‌ನಲ್ಲಿ ಭಾರತೀಯ ಹಾಕಿ ತಂಡ ಇವರ ನಾಯಕತ್ವದಲ್ಲಿ ಚಿನ್ನದ ಪದಕ ಗೆದ್ದಿತ್ತು. ಇದಕ್ಕೂ ಮೊದಲು 1960ರ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ವಿಜೇತ ತಂಡದ ಸದಸ್ಯರೂ ಆಗಿದ್ದರು.

'' ನನ್ನ ತಂದೆ ಐದು ವರ್ಷಗಳ ಹಿಂದೆ ಪಾರ್ಶ್ವವಾಯುವಿಗೆ ಒಳಗಾಗಿದ್ದರು. ಅಂದಿನಿಂದಲೂ ಊರುಗೋಲಿನ ಸಹಾಯದಿಂದ ನಡೆಯುತ್ತಿದ್ದ ಅವರ ಆರೋಗ್ಯ ಕಳೆದ ಎರಡು ತಿಂಗಳಿನಿಂದ ಹದಗೆಟ್ಟಿತ್ತು. ಆದ್ರೆ ಇಂದು ಬೆಳಿಗ್ಗೆ ನಮ್ಮನ್ನ ಅಗಲಿದ್ದಾರೆ'' ಎಂದು ಪುತ್ರ ವಿ.ಪಿ. ಸಿಂಗ್ ಅವರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ದೆಹಲಿಯಲ್ಲಿರುವ ನನ್ನ ಸಹೋದರಿ ಉನಾ ತಲುಪಿದ ಕೂಡಲೇ ತಂದೆಯವರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ವಿ.ಪಿ. ಸಿಂಗ್ ಹೇಳಿದ್ದಾರೆ.

12 ವರ್ಷಗಳ ಹಿಂದೆ ಚರಣ್‌ಜಿತ್ ಸಿಂಗ್ ಪತ್ನಿ ವಿಧಿವಶರಾಗಿದ್ದು, ಇವರ ಓರ್ವ ಪುತ್ರ ಕೆನಡಾದಲ್ಲಿ ವೈದ್ಯನಾಗಿದ್ದು, ಇವರ ಕಿರಿಯ ಮಗ ಜೊತೆಗಿದ್ದರು. ಏಕೈಕ ಪುತ್ರಿಯು ದೆಹಲಿಯಲ್ಲಿ ವಾಸವಾಗಿದ್ದಾರೆ.

Story first published: Friday, January 28, 2022, 10:28 [IST]
Other articles published on Jan 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X