ಹಾಕಿ ವಿಶ್ವಕಪ್: ಪ್ರತಿಷ್ಠಿತ ಟೂರ್ನಿಯಲ್ಲಿ ಭಾಗವಹಿಸುತ್ತಿಲ್ಲ ಪಾಕಿಸ್ತಾನ: 4 ಬಾರಿಯ ವಿಶ್ವ ಚಾಂಪಿಯನ್ ಆಡದಿರಲು ಕಾರಣ ಇದು!

2023ನೇ ಆವೃತ್ತಿಯ ಹಾಕಿ ವಿಶ್ವಕಪ್ ಟೂರ್ನಮೆಂಟ್ ಜನವರಿ 13ರಿಂದ ಆರಂಭವಾಗುತ್ತಿದೆ. ಭಾರತದ ಎರಡು ಪ್ರಮುಖ ನಗರಗಳಾದ ಭುವನೇಶ್ವರ್ ಹಾಗೂ ರೌರ್ಕೆಲಾದಲ್ಲಿ ಈ ವಿಶ್ವಕಪ್ ಟೂರ್ನಿಯ ಪಂದ್ಯಗಳು ನಡೆಯಲಿದ್ದು ಬಲಿಷ್ಠ ತಂಡಗಳ ನಡುವಿನ ಕಾದಾಟಕ್ಕೆ ಹಾಕಿ ಅಭಿಮಾನಿಗಳು ಕಾತರಿಸುತ್ತಿದ್ದಾರೆ. ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಮುಖಾಮುಖಿಯಾಗಲಿದೆ.
ಆದರೆ ಕುತೂಹಲಕಾರಿ ಅಂಶವೆಂದರೆ ಭಾರತದ ಬದ್ಧ ಎದುರಾಳಿಯಾಗಿರುವ ಪಾಕಿಸ್ತಾನ ತಂಡ ಈ ಬಾರಿಯ ಹಾಕಿ ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿಲ್ಲ. ಹಾಕಿ ವಿಶ್ವಕಪ್‌ನಲ್ಲಿ 4 ಬಾರಿ ಚಾಂಪಿಯನ್ ಆಗಿ ವಿಶ್ವಕಪ್ ಟೂರ್ನಿಯ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ಪಾಕಿಸ್ತಾನ ತಂಡ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸದೆ ಇರುವುದು ಸಾಕಷ್ಟು ಹಾಕಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಕಳೆದ 7 ದಶಕಗಳಲ್ಲೊ ಈ ಎರಡು ತಂಡಗಳ ನಡುವೆ ಅನೇಕ ಐತಿಹಾಸಿಕ ಮುಖಾಮುಖಿಗಳು ನಡೆದಿದೆ. ಆದರೆ ಈ ಬಾರಿಯ ವಿಶ್ವಕಪ್‌ನಲ್ಲಿ ಅಂಥಾ ಪೈಪೋಟಿಯ ಮುಖಾಮುಖಿಗೆ ಅವಕಾಶ ಇಲ್ಲವಾಗಿದೆ.
ಹಾಗಾದರೆ ವಿಶ್ವಕಪ್‌ನ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ಪಾಕಿಸ್ತಾನ ತಂಡ ಈ ಬಾರಿಯ ವಿಶ್ವಕಪ್‌ನಲ್ಲಿ ಭಾಗವಹಿಸದೆ ಇರಲು ಕಾರಣವೇನು? ಇಲ್ಲಿದೆ ಮಾಹಿತಿ. ಮುಂದೆ ಓದಿ..

ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡಿಲ್ಲ ಪಾಕಿಸ್ತಾನ
ಈ ಬಾರಿಯ ಹಾಕಿ ವಿಶ್ವಕಪ್‌ಗೆ ಪಾಕಿಸ್ತಾನ ಭಾಗವಹಿಸದೆ ಇರಲು ಕಾರಣ ಈ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು ಪಾಕಿಸ್ತಾನ ಅರ್ಹತೆಯನ್ನು ಪಡೆದುಕೊಂಡಿಲ್ಲ. 4 ಬಾರಿಯ ವಿಶ್ವಚಾಂಪಿಯನ್ ಪಾಕಿಸ್ತಾನ ಕೊನೆಯ ಬಾರಿ ವಿಶ್ವಕಪ್ ಗೆದ್ದಿರುವುದು 1994ಲ್ಲಿ. ಈ ಬಾರಿ ಹಾಕಿ ಶ್ರೇಯಾಂಕಪಟ್ಟಿಯಲ್ಲಿ ಪಾಕಿಸ್ತಾನ ತಂಡ ಸದ್ಯ 17ನೇ ಶ್ರೇಯಾಂಕದಲ್ಲಿದ್ದು ವಿಶ್ವಕಪ್ ಟೂರ್ನಿಯಲ್ಲಿ ಅರ್ಹತೆ ಗಿಟ್ಟಿಸಿಕೊಳ್ಳಲು ವಿಫಲವಾಗಿದೆ. ಈ ಕಾರಣದಿಂದಾಗಿ ಪಾಕಿಸ್ತಾನ ಭಾರತದಲ್ಲಿ ನಡೆಯುತ್ತಿರುವ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಅವಕಾಶವನ್ನೇ ಕಳೆದುಕೊಂಡಿದೆ.

ಏಷ್ಯಾಕಪ್‌ನಲ್ಲಿ ಟಾಪ್ 4ನೇ ತಂಡವಾಗಿದ್ದರೂ ಪಾಕ್‌ಗೆ ಇತ್ತು ಅವಕಾಶ
ಇನ್ನು ಈ ಬಾರಿಯ ವಿಶ್ವಕಪ್‌ನಲ್ಲಿ ಭಾಗವಹಿಸಲು ಪಾಕಿಸ್ತಾನಕ್ಕೆ 2022ರ ಏಷ್ಯಾಕಪ್‌ನಲ್ಲಿ ಅಂತಿಮ ಅವಕಾಶವಿತ್ತು. ಕಳೆದ ವರ್ಷ ಮೇ 23ರಿಂದ ಜೂನ್ 1ರವರೆಗೆ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಕನಿಷ್ಠ ಅಗ್ರ 4ರಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದರೆ ವಿಶ್ವಕಪ್‌ನಲ್ಲಿ ಭಾಗವಹಿಸುವ ಅವಕಾಶವಿತ್ತು. ಆದರೆ ಜಕಾರ್ತಾದಲ್ಲಿ ನಡೆದ ಈ ಟೂರ್ನಿಯಲ್ಲಿ ಲೀಗ್ ಹಂತದಲ್ಲಿ 3ನೇ ಸ್ಥಾನ ಪಡೆಯುವ ಮೂಲಕ ಪಾಕಿಸ್ತಾನ ನಿರ್ಗಮಿಸಿತು. ಈ ಮೂಲಕ ವಿಶ್ವಕಪ್‌ಗೆ ಅರ್ಹತೆ ಪಡೆಯಲು ವಿಫಲವಾಯಿತು.
Ind vs SL: ಪ್ರಮುಖ ದಾಖಲೆ ಬರೆದ ಭಾರತ, ಲಂಕಾ ಹೆಸರಿಗೆ ಬೇಡದ ದಾಖಲೆ: 2ನೇ ಪಂದ್ಯದಲ್ಲಿ ಮುರಿದ 3 ದಾಖಲೆಗಳು!

ಈ ಮುನ್ನವೂ ಇಂಥಾದ್ಧೇ ಮುಖಭಂಗಕ್ಕೆ ಒಳಗಾಗಿತ್ತು ಪಾಕಿಸ್ತಾನ
ಇನ್ನು ಪಾಕಿಸ್ತಾನ ಹಾಕಿ ವಿಶ್ವಕಪ್‌ನಲ್ಲಿ ಅರ್ಹತೆ ಗಿಟ್ಟಿಸಿಕೊಳ್ಳಲು ವಿಫಲವಾಗಿರುವುದು ಇದು ಮೊದಲೇನಲ್ಲ. 2014ರಲ್ಲಿ ನೆದರ್ಲೆಂಡ್ಸ್‌ನ ಹೇಗ್‌ನಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿಯೂ ಪಾಕಿಸ್ತಾನ ಅರ್ಹತೆ ಪಡೆಯಲು ವಿಫಲವಾಗಿತ್ತು. ಈ ಮೂಲಕ ಹಾಕಿ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಈ ಮುಖಭಂಗವನ್ನು ಅನುಭವಿಸಿತ್ತು.

2018ರಲ್ಲಿ ಭಾರತದಲ್ಲಿ ವಿಶ್ವಕಪ್ ಆಡಿತ್ತು ಪಾಕ್ ತಂಡ
ಇನ್ನು 2018ರಲ್ಲಿಯೂ ಭಾರತ ಹಾಕಿ ವಿಶ್ವಕಪ್‌ನ ಆತಿಥ್ಯವನ್ನು ವಹಿಸಿಕೊಂಡಿತ್ತು. ಭುವನೇಶ್ವರದಲ್ಲಿಯೇ ನಡೆದ ಈ 14ನೇ ಆವೃತ್ತಿಯ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಭಾಗವಹಿಸಿತ್ತು. ಆದರೆ ಕಳಪೆ ಪ್ರದರ್ಶನ ನೀಡುವ ಮೂಲಕ ನೀರಸ ಪ್ರದರ್ಶನ ನೀಡಿತ್ತು. ಗ್ರೂಪ್ ಹಂತದಲ್ಲಿಯೇ ಸೋತು ನಿರ್ಗಮಿಸಿದ ಪಾಕಿಸ್ತಾನ ಆ ಆವೃತ್ತಿಯಲ್ಲಿ 12ನೇ ಸ್ಥಾನವನ್ನು ಪಡೆದುಕೊಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications