ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಒಲಿಂಪಿಕ್ಸ್, ವಿಶ್ವಕಪ್ ವಿಜೇತ ಹಾಕಿ ಆಟಗಾರ ವರಿಂದರ್ ಸಿಂಗ್ ನಿಧನ

Hockey World Cup and Olympics Medallist Varinder Singh passes away at age 75

ಒಲಿಂಪಿಕ್ಸ್ ಹಾಗೂ ವಿಶ್ವಕಪ್ ವಿಜೇತ ಹಾಕಿ ತಂಡದ ಭಾಗವಾಗಿದ್ದ ಮಾಜಿ ಹಾಕಿ ಆಟಗಾರ ವರಿಂದರ್ ಸಿಂಗ್ ನಿಧನವಾಗಿದ್ದಾರೆ. 1970ರ ಅವಧಿಯಲ್ಲಿ ಭಾರತ ಸಾಧಿಸಿದ ಕೆಲ ಸ್ಮರಣೀಯ ಗೆಲುವುಗಳಲ್ಲಿ ವರಿಂದರ್ ಸಿಂಗ್ ಹಾಕಿ ತಂಡದ ಭಾಗವಾಗಿದ್ದರು. ಮಂಗಳವಾರ ಜಲಂಧರ್‌ನಲ್ಲಿ ವರಿಂದರ್ ಸಿಂಗ್ ತಮ್ಮ 75ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.

ಹಾಕಿ ಇಂಡಿಯಾ ವರಿಂದರ್ ಸಿಂಗ್ ಅಗಲಿಗೆ ಸಂತಾಪ ಸೂಚಿಸಿದೆ. "ವಿಶ್ವಾದ್ಯಂತ ಇರುವ ಹಾಕಿ ಪ್ರೇಮಿಗಳು ವರಿಂದರ್ ಸಿಂಗ್ ಅವರ ಸಾಧನೆಯನ್ನು ಸ್ಮರಿಸಿಕೊಳ್ಳುತ್ತಾರೆ" ಎಂದು ಹಾಕಿ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದ್ದು ಅಗಲಿಕೆಗೆ ಶೋಕ ವ್ಯಕ್ತಪಡಿಸಿದೆ.

ಟೆಸ್ಟ್ ಕ್ರಿಕೆಟ್‌ನ 4ನೇ ಇನ್ನಿಂಗ್ಸ್‌ನಲ್ಲಿ ವೇಗದ ಶತಕ ಸಿಡಿಸಿದ ಟಾಪ್ 3 ಬ್ಯಾಟ್ಸ್‌ಮನ್‌ಗಳುಟೆಸ್ಟ್ ಕ್ರಿಕೆಟ್‌ನ 4ನೇ ಇನ್ನಿಂಗ್ಸ್‌ನಲ್ಲಿ ವೇಗದ ಶತಕ ಸಿಡಿಸಿದ ಟಾಪ್ 3 ಬ್ಯಾಟ್ಸ್‌ಮನ್‌ಗಳು

ಹಾಕಿ ವಿಶ್ವಕಪ್‌ನಲ್ಲಿ ಗೆದ್ದ ತಂಡದ ಆಟಗಾರ

1975ರಲ್ಲಿ ಕೌಲಲಂಪುರದಲ್ಲಿ ನಡೆದ ಹಾಕಿ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡದ ಪ್ರಮುಕ ಆಟಗಾರನಾಗಿದ್ದರು ವರಿಂದರ್ ಸಿಂಗ್. ಅಂದು ನಡೆದ ಫೈನಲ್ ಪಂದ್ಯದಲ್ಲಿ ಭಾರತ ಹಾಕಿ ತಂಡ ಬದ್ಧ ಎದುರಾಳಿ ಪಾಕಿಸ್ತಾನ ತಂಡವನ್ನು 2-1 ಅಂತರದಿಂದ ಮಣಿಸಿ ಮೊದಲ ಬಾರಿಗೆ ಹಾಕಿ ವಿಶ್ವಕಪ್‌ನ ಚಾಂಪಿಯನ್ ಪಟ್ಟಕ್ಕೇರಿತ್ತು.

ಭಾರತದ ಪರ ಮಿಂಚಿರುವ ವರಿಂದರ್

ಭಾರತದ ಪರ ಮಿಂಚಿರುವ ವರಿಂದರ್

ಇಷ್ಟು ಮಾತ್ರವಲ್ಲದೆ ವಿಶ್ವಕಪ್ ಗೆಲುವಿಗೂ ಮುನ್ನ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಭಾರತ 1972ರಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದ ಭಾಗವಾಗಿದ್ದರು. ಬಳಿಕ 1973ರಲ್ಲಿ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಬೆಳ್ಳಿ ಪದಕವನ್ನು ಕೂಡ ಗೆದ್ದಿದ್ದಾರೆ.

ಧ್ಯಾನ್‌ಚಂದ್ ಪ್ರಶಸ್ತಿ ಪಡೆದಿದ್ದ ವರಿಂದರ್ ಸಿಂಗ್

ಧ್ಯಾನ್‌ಚಂದ್ ಪ್ರಶಸ್ತಿ ಪಡೆದಿದ್ದ ವರಿಂದರ್ ಸಿಂಗ್

ಬಳಿಕ 1974 ಮತ್ತು 1978 ರಲ್ಲಿ ಭಾರತ ಹಾಕಿ ತಂಡ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಾಗಲೂ ಭಾರತ ತಂಡದ ಭಾಗವಾಗಿದ್ದರು. ಭಾರತದ ಈ ಹಾಕಿ ದಿಗ್ಗಜ 1975ರ ಮಾಂಟ್ರಿಯಲ್ ಒಲಿಂಪಿಕ್ಸ್‌ನಲ್ಲಿಯೂ ಪ್ರತಿನಿಧಿಸಿದ್ದಾರೆ. ಹಾಕಿ ಕ್ರೀಡೆಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ 2007ರಲ್ಲಿ ವರೀಂದರ್ ಸಿಂಗ್ ಅವರಿಗೆ ಪ್ರತಿಷ್ಠಿತ ಧ್ಯಾನ್ ಚಂದ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಯಿತು.

Story first published: Tuesday, June 28, 2022, 16:37 [IST]
Other articles published on Jun 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X