ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಹಾಕಿ ವಿಶ್ವಕಪ್: ನೆದರ್‌ಲ್ಯಾಂಡ್‌ ಹತ್ತಿಕ್ಕಿ ಭಾರತ ಇತಿಹಾಸ ಬರೆಯುವುದೆ!?

Hockey World Cup: India chase slice of history against Netherlands in quarters

ಭುವನೇಶ್ವರ್, ಡಿಸೆಂಬರ್ 12: ಭಾರತದ ಹಾಕಿ ಪುರುಷರು ವಿಶ್ವಕಪ್ ಟ್ರೋಫಿ ಗೆದ್ದ ಸಂಭ್ರಮಕ್ಕೆ 43 ವರ್ಷ ವಯಸ್ಸಾಗಿದೆ. ಆದರೆ ಈ ಬಾರಿ ತವರಿನಲ್ಲೇ ಪ್ರತಿಷ್ಠಿತ ಟೂರ್ನಿ ನಡೆಯುತ್ತಿರುವುದರಿಂದ ವಿಶ್ವಕಪ್ ಟ್ರೋಫಿಯ ಬರ ಕೊನೆಗೊಳ್ಳುವುದೆಂಬ ನಂಬಿಕೆ ಭಾರತೀಯರದ್ದು.

ಹಾಕಿ ವಿಶ್ವಕಪ್ ಮುಖಪುಟ (ಪಾಯಿಂಟ್ ಟೇಬಲ್ ಸೇರಿ ಹೆಚ್ಚಿನ ಮಾಹಿತಿಗಳು ಇಲ್ಲಿವೆ)

ಡಿಸೆಂಬರ್ 13ರ ಗುರುವಾರ ಭುವನೇಶ್ವರ್‌ನ ಕಳಿಂಗ ಅಂತಾರಾಷ್ಟ್ರೀಯ ಹಾಕಿ ಸ್ಟೇಡಿಯಂನಲ್ಲಿ ಕ್ವಾರ್ಟರ್ ಫೈನಲ್ ಪಂದ್ಯಕ್ಕಾಗಿ ಭಾರತ ಮತ್ತು ನೆದರ್‌ಲ್ಯಾಂಡ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಜಯಿಸಿ ಭಾರತ ಪ್ರಶಸ್ತಿ ಸುತ್ತಿನ ದಾರಿ ಸುಲಭವಾಗಿಸುವ ನಿರೀಕ್ಷೆಯಿದೆ.

'ತಂಡಕ್ಕೆ ಆಯ್ಕೆಯಾಗಬೇಕಾದರೆ ಎಂಎಸ್‌ ಧೋನಿ ದೇಸಿ ಕ್ರಿಕೆಟ್ ಆಡಲೇಬೇಕು!''ತಂಡಕ್ಕೆ ಆಯ್ಕೆಯಾಗಬೇಕಾದರೆ ಎಂಎಸ್‌ ಧೋನಿ ದೇಸಿ ಕ್ರಿಕೆಟ್ ಆಡಲೇಬೇಕು!'

ಸದ್ಯದ ಹಾಕಿ ರ್ಯಾಂಕ್ ಪಟ್ಟಿ ಆಧಾರವಾಗಿ ನೋಡಿದರೆ ಭಾರತಕ್ಕಿಂತ ನೆದರ್ಲ್ಯಾಂಡ್ ಕೊಂಚ ಬಲಿಷ್ಠ ತಂಡ. 'ಸಿ' ಗ್ರೂಪ್‌ನಲ್ಲಿರುವ ಭಾರತ ವಿಶ್ವ ರ್ಯಾಂಕಿಂಗ್‌ನಲ್ಲಿ 5ನೇ ಸ್ಥಾನದಲ್ಲಿದ್ದರೆ, 'ಡಿ'ಗ್ರೂಪ್‌ನಲ್ಲಿರುವ ನೆದರ್‌ಲ್ಯಾಂಡ್ 4ನೇ ಸ್ಥಾನದಲ್ಲಿದೆ. ಆದರೆ ತವರು ನೆಲದಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಭಾರತ ಪಂದ್ಯ ಗೆಲ್ಲುವ ಹುಮ್ಮಸ್ಸಿನಲ್ಲಿರುವುದು ನಿಜ.

ಇನ್ನು ಟೂರ್ನಿಯಲ್ಲಿನ ಏಳು-ಬೀಳಿನ ಅಂಕಿ ಅಂಶಗಳನ್ನು ಗಮನಿಸಿದರೆ ಭಾರತವೇ ನೆದರ್ಲ್ಯಾಂಡ್‌ಗಿಂತ ಬಲಾಡ್ಯ ತಂಡ. ಯಾಕೆಂದರೆ ಭಾರತದ ಪುರುಷರು ಆಡಿರುವ ಮೂರು ಪಂದ್ಯಗಳಲ್ಲಿ 2 ಪಂದ್ಯ ಗೆದ್ದು ಇನ್ನೊಂದರಲ್ಲಿ ಡ್ರಾ ಸಾಧಿಸಿದ್ದರು. ನೆದರ್‌ಲ್ಯಾಂಡ್ ಆಡಿರುವ 3ರಲ್ಲಿ 2 ಪಂದ್ಯ ಗೆದ್ದು ಒಂದರಲ್ಲಿ ಸೋಲು ಕಂಡಿದೆ.

ವರ್ಲ್ಡ್ ಟೂರ್ ಫೈನಲ್ಸ್: ಹಾಲಿ ಚಾಂಪಿಯನ್ ಅಕೆನೆ ಸೋಲಿಸಿ ಸಿಂಧು ಮುನ್ನಡೆವರ್ಲ್ಡ್ ಟೂರ್ ಫೈನಲ್ಸ್: ಹಾಲಿ ಚಾಂಪಿಯನ್ ಅಕೆನೆ ಸೋಲಿಸಿ ಸಿಂಧು ಮುನ್ನಡೆ

ಟೂರ್ನಿಯಲ್ಲಿ ಭಾರತದ ಪ್ರದರ್ಶನವನ್ನು ಗಮನಿಸಿದರೆ ನೆದರ್‌ಲ್ಯಾಂಡ್ ವಿರುದ್ದ ದೇಸಿ ತಂಡ ಗೆಲ್ಲೋದು ಬಹುತೇಕ ನಿರೀಕ್ಷಿತ. ಆದರೆ ಫಲಿತಾಂಶ ಎದುರಾಳಿ ನೆದರ್‌ಲ್ಯಾಂಡ್ ಕಡೆಯೂ ವಾಲೋ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ. ಒಟ್ಟಿನಲ್ಲಿ ಭಾರತ ಗೆದ್ದು ಅಪೂರ್ವ ಕ್ಷಣವೊಂದಕ್ಕೆ ಸಾಕ್ಷಿಯಾಗಲಿ ಎಂದು ಹಾರೈಸೋಣವಷ್ಟೆ.

ಕಾಮೆಂಟರಿ ಮೂಲಕ ಕಮಿನ್ಸ್ ತಬ್ಬಿಬ್ಬಾಗಿಸಿದ ಪಂತ್: ಗಮ್ಮತ್ತಿನ ವಿಡಿಯೋ!ಕಾಮೆಂಟರಿ ಮೂಲಕ ಕಮಿನ್ಸ್ ತಬ್ಬಿಬ್ಬಾಗಿಸಿದ ಪಂತ್: ಗಮ್ಮತ್ತಿನ ವಿಡಿಯೋ!

ಗುರುವಾರ ಭಾರತೀಯ ಕಾಲಮಾನ 5pmಗೆ ಆರಂಭಗೊಳ್ಳುವ ಕ್ವಾರ್ಟರ್ ಫೈನಲ್ 3ನೇ ಪಂದ್ಯಕ್ಕಾಗಿ ಜರ್ಮನಿ ಮತ್ತು ಬೆಲ್ಜಿಯಂ ತಂಡಗಳು ಮೈದಾನಕ್ಕಿಳಿದರೆ, 7pmಗೆ ನಡೆಯುವ 4ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ-ನೆದರ್‌ಲ್ಯಾಂಡ್ ಮುಖಾಮುಖಿಯಾಗಲಿವೆ. ಸ್ಟಾರ್ ಸ್ಪೋರ್ಟ್ಸ್ ಪಂದ್ಯವನ್ನು ನೇರ ಪ್ರಸಾರ ಮಾಡಲಿದ್ದು, ಹಾಟ್ ಸ್ಟಾರ್ ನಲ್ಲೂ ಜಾಲತಾಣಿಗರು ಪಂದ್ಯವನ್ನು ವೀಕ್ಷಿಸಬಹುದು.

Story first published: Wednesday, December 12, 2018, 22:35 [IST]
Other articles published on Dec 12, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X