ಭುವನೇಶ್ವರ, ನವೆಂಬರ್ 28: ಒಡಿಶಾದ ಭುವನೇಶ್ವರದಲ್ಲಿ ನಡೆಯಲಿರುವ ಪುರುಷರ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಇಂದು (ನವೆಂಬರ್ 28) ಮೊದಲ ಪಂದ್ಯದಲ್ಲಿ ಭಾರತ ತಂಡ, ದಕ್ಷಿಣ ಆಫ್ರಿಕಾದ ಸವಾಲು ಸ್ವೀಕರಿಸಲಿದೆ. ವಿಶ್ವ ರ್ಯಾಂಕಿಂಗ್ ನಲ್ಲಿ 5ನೇ ಸ್ಥಾನದಲ್ಲಿರುವ ಭಾರತ ಇಂದಿನ ಪಂದ್ಯವನ್ನು ಜಯಿಸುವ ನಿರೀಕ್ಷೆಯಲ್ಲಿದೆ.
ಹಾಕಿ ವಿಶ್ವಕಪ್: ಆರಂಭೋತ್ಸವಕ್ಕೆ ಶಾರುಖ್, ಮಾಧುರಿ, ರೆಹಮಾನ್ ಮೆರಗು
ಟೂರ್ನಿಯಲ್ಲಿ ಸಿ ಗ್ರೂಪ್ ನಲ್ಲಿರುವ ಭಾರತ ತಂಡ ವಿಶ್ವ ರ್ಯಾಂಕಿಂಗ್ ನಲ್ಲಿ 15ನೇ ಸ್ಥಾನಿಗ ದಕ್ಷಿಣ ಆಫ್ರಿಕಾ ಎದುರು ಸುಲಭ ಜಯ ಸಾಧಿಸುವ ಸಾಧ್ಯತೆಯಿದೆ. ಭಾರತದ ಪುರುಷರ ಬಳಗವನ್ನು ಮನ್‌ಪ್ರೀತ್ ಸಿಂಗ್ ಮುನ್ನಡೆಸಲಿದ್ದಾರೆ. ತಂಡದದಲ್ಲಿ ಕಿರಿಯ ಆಟಗಾರರೇ ಹೆಚ್ಚಿದ್ದು, ಪಂದ್ಯ ಗೆಲ್ಲುವ ನಿಟ್ಟಿನಲ್ಲಿ ತಂಡ ಸಾಕಷ್ಟು ಬಲಿಷ್ಟವಾಗಿದೆ ಎಂದು ತಂಡದ ಕೋಚ್ ಹರೇಂದ್ರ ಸಿಂಗ್ ಭರವಸೆ ವ್ಯಕ್ತ ಪಡಿಸಿದ್ದಾರೆ.
Star-Studded opening ceremony of 2018 Hockey World Cup in Odisha, India#HockeyWorldCup2018 pic.twitter.com/hk48ZKshfh
— Trends.PK (@PK_Trends01) November 27, 2018
ಸಿ ಪೂಲ್‌ನಲ್ಲಿ ಭಾರತ, ಕೆನಡಾ, ದಕ್ಷಿಣ ಆಫ್ರಿಕಾ, ಮತ್ತು ಬೆಲ್ಜಿಯಂ ತಂಡಗಳಿದ್ದು, ಇವುಗಳಲ್ಲಿ ವಿಶ್ವ ರ್ಯಾಂಕಿಂಗ್ ನ 3ನೇ ಸ್ಥಾನಿಗ ಬೆಲ್ಜಿಯಂ ಕೊಂಚ ಬಲಿಷ್ಟ ತಂಡವಾಗಿ ಗುರುತಿಸಿಕೊಂಡಿದೆ. ಭಾರತ vs ದಕ್ಷಿಣ ಆಫ್ರಿಕಾ ಪಂದ್ಯ 7pmಗೆ ಆರಂಭಗೊಳ್ಳಲಿದ್ದು, 'ಸ್ಟಾರ್ ಸ್ಪೋರ್ಟ್ಸ್' ಪಂದ್ಯವನ್ನು ನೇರ ಪ್ರಸಾರ ಮಾಡಲಿದೆ. ಹಾಟ್ ಸ್ಟಾರ್ ನಲ್ಲೂ ಜಾಲತಾಣಿಗರು ಪಂದ್ಯವನ್ನು ವೀಕ್ಷಿಸಬಹುದು.
ಸಂಭಾವ್ಯ ಭಾರತ ತಂಡ: ಪಿ.ಆರ್. ಶ್ರೀಜೇಶ್, ಕೃಷ್ಣ ಬಹದ್ದೂರ್ ಪಾಠಕ್, ಹರ್ಮನ್‌ಪ್ರೀತ್ ಸಿಂಗ್, ಬಿರೇಂದ್ರ ಲಕ್ರಾ, ವರುಣ್ ಕುಮಾರ್, ಕೊಥಾಜಿತ್ ಸಿಂಗ್ ಖಾದಂಗ್ಬಾಮ್, ಸುರೇಂದರ್ ಕುಮಾರ್, ಅಮಿತ್ ರೋಹಿದಾಸ್, ಮನ್ಪ್ರೀತ್ ಸಿಂಗ್ (ಸಿ), ಚಿಂಗ್ಲೆನ್ಸನಾ ಸಿಂಗ್ ಕಂಗುಂಜಂ, ನೀಲಕಂಠ ಶರ್ಮಾ, ಹಾರ್ದಿಕ್ ಸಿಂಗ್, ಸುಮಿತ್, ಆಕಾಶ್‌ದೀಪ್ ಸಿಂಗ್, ಮನ್‌ದೀಪ್ ಸಿಂಗ್, ದಲ್‌ಪ್ರೀತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ ಮತ್ತು ಸಿಮ್‌ರಣ್‌ಜೀತ್ ಸಿಂಗ್.
ಸಂಭಾವ್ಯ ದಕ್ಷಿಣ ಆಫ್ರಿಕಾ ತಂಡ: ಟಿಮ್ ಡ್ರಮ್ಮೊಂಡ್ (ಸಿ), ದಯಾನ್ ಕ್ಯಾಸಿಯಮ್, ಟೇಲರ್ ಡಾರ್ಟ್, ಟೈಸನ್ ಡ್ಲುಂಗ್ವಾನಾ, ಜೆಥ್ರೊ ಯುಸ್ಟಿಸ್, ರೈಟ್ ಹಾಲ್ಕೆಟ್, ಟಾಮಿ ಹ್ಯಾಮಂಡ್, ಕೀನನ್ ಹಾರ್ನೆ, ಜೂಲಿಯನ್ ಹೈಕ್ಸ್, ಗೋವಾನ್ ಜೋನ್ಸ್, ಪೀಬೊ ಲೆಂಬೆಥೆ, ಮೊ ಮೀಯಾ, ಬಿಲಿ ಎನ್ಟುಲಿ, ಟೈನ್ ಪ್ಯಾಟನ್, ರಿಚರ್ಡ್ ಪೌಟ್ಜ್, ರಸ್ಸೀ ಪೀಟರ್ಸೆ , ಆಸ್ಟಿನ್ ಸ್ಮಿತ್ ಮತ್ತು ನಿಕ್ ಸ್ಪೂನರ್.