ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಮಹಿಳಾ ಹಾಕಿ ಸೆಮಿಫೈನಲ್: ಭಾರತ vs ಅರ್ಜೆಂಟಿನಾ ಪಂದ್ಯದ ದಿನಾಂಕ, ಸಮಯ ಹಾಗೂ ನೇರಪ್ರಸಾರ ಮಾಹಿತಿ

Olympics: India vs Argentina Womens Hockey Semifinal Schedule: Date, Time and telecast info
ಒಲಿಂಪಿಕ್ಸ್ ನಲ್ಲಿ ದಾಖಲೆ ಬರೆದ ಭಾರತದ ಮಹಿಳಾ ಹಾಕಿ ಟೀಮ್ | Oneindia Kannada

ಟೋಕಿಯೋ, ಆಗಸ್ಟ್ 2: 41 ವರ್ಷಗಳ ನಂತರ ಭಾರತೀಯ ಪುರುಷರ ಹಾಕಿ ತಂಡ ಸೆಮಿ ಫೈನಲ್‌ಗೆ ಪ್ರವೇಶ ಪಡೆದ ಮರುದಿನೇ ಭಾರತೀಯ ಮಹಿಳೆಯರ ತಂಡ ಕೂಡ ಐತಿಹಾಕಿಸಕ ಸಾಧನೆ ಮಾಡಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಹಾಕಿ ಮಹಿಳಾ ತಂಡ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಭಾರತೀಯ ಮಹಿಳಾ ತಂಡ ಒಲಿಂಪಿಕ್ಸ್‌ ಹಾಕಿಯಲ್ಲಿ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.

ಕ್ವಾರ್ಟರ್‌ಫೈನಲ್‌ನಲ್ಲಿ ಭಾರತೀಯ ತಂಡಕ್ಕೆ ಎರಡು ಬಾರಿಯ ಚಿನ್ನದ ಪದಕ ವಿಜೇತ ತಂಡವಾಗಿರುವ ಬಲಿಷ್ಠ ಆಸ್ಟ್ರೇಲಿಯಾ ಸವಾಲೊಡ್ಡಿತ್ತು. ಈ ಸವಾಲನ್ನು ಭಾರತದ ಮಹಿಳೆಯರು ದಿಟ್ಟವಾಗಿ ಎದುರಿಸಿದ್ದು ಆಸಿಸ್ ತಂಡಕ್ಕೆ ಸೋಲುಣಿಸಿದ್ದಾರೆ. ಈ ಮೂಲಕ ಭಾರತದ ಹಾಕಿಯ ಪುರುಷ ಹಾಗೂ ಮಹಿಳೆಯರ ತಂಡಗಳು ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದೆ. ಚಿನ್ನದ ಪದಕಕ್ಕೆ ಇನ್ನು ಕೇವಲ ಎರಡು ಗೆಲುವುಗಳು ಎರಡು ತಂಡಕ್ಕೂ ಅಗತ್ಯವಿದೆ.

ಹಾಕಿ: ಬಲಿಷ್ಠ ಆಸ್ಟ್ರೇಲಿಯಾವನ್ನು ಸದೆಬಡಿದು ಸೆಮಿಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಭಾರತ ಮಹಿಳಾ ತಂಡ!ಹಾಕಿ: ಬಲಿಷ್ಠ ಆಸ್ಟ್ರೇಲಿಯಾವನ್ನು ಸದೆಬಡಿದು ಸೆಮಿಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಭಾರತ ಮಹಿಳಾ ತಂಡ!

ಆಸ್ಟ್ರೇಲಿಯಾ ವಿರುದ್ಧ ನಡೆದ ಕ್ವಾರ್ಟರ್‌ಫೈನಲ್ ಸೆಣೆಸಾಟದಲ್ಲಿ ಭಾರತೀಯ ಮಹಿಳಾ ತಂಡ ಮೊದಲ ಕ್ವಾರ್ಟರ್‌ನಲ್ಲಿಯೇ ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ಪೆನಾಲ್ಟಿ ಕಾರ್ನರ್ ಅವಕಾಶವನ್ನು ಬಳಸಿಕೊಂಡ ಭಾರತದ ಗುರ್ಜೀತ್‌ಕೌರ್ ಇದನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದರು. ಅದಾದ ನಂತರ ಆಸ್ಟ್ರೇಲಿಯಾ ತಂಡದ ದಾಳಿಯನ್ನು ತಮ್ಮ ಬಲಿಷ್ಠವಾದ ರಕ್ಷನೆಯ ಮೂಲಕ ತಡೆಯುತ್ತಲೇ ಸಾಗಿತ್ತು. ಹೀಗೆ ಭಾರತ ಐತಿಹಾಸಿಕ ಸಾಧನೆ ಮಾಡಿ ಬೀಗಿದೆ.

ಸೆಮಿಫೈನಲ್‌ನಲ್ಲಿ ಅರ್ಜೆಂಟಿನಾ ಮುಖಾಮುಖಿ

ಸೆಮಿಫೈನಲ್‌ನಲ್ಲಿ ಅರ್ಜೆಂಟಿನಾ ಮುಖಾಮುಖಿ

ಈ ಗೆಲುವಿನೊಂದಿಗೆ ಭಾರತ ಸೆಮಿಫೈನಲ್‌ಗೆ ಪ್ರವೇಶ ಪಡೆದಿದೆ. ಸೆಮಿಫೈನಲ್‌ನಲ್ಲಿ ಭಾರತ ತಂಡಕ್ಕೆ ಅರ್ಜೆಂಟಿನಾ ತಂಡ ಮುಖಾಮುಖಿಯಾಗಲಿದೆ. ಈ ಸೆಮಿಫಯನಲ್ ಪಂದ್ಯ ಆಗಸ್ಟ್ 4ರಂದು ಬುಧವಾರ ನಡೆಯಲಿದೆ. ಅರ್ಜೆಂಟಿನಾ ತಂಡ ಟೂರ್ನಿಯ ಮತ್ತೊಂದು ಫೆವರೀಟ್ ತಂಡವಾಗಿರುವ ಜರ್ಮನಿಯನ್ನು ಕ್ವಾರ್ಟರ್‌ಫೈನಲ್‌ನಲ್ಲಿ ಮಣಿಸಿ ಸೆಮಿಫೈನಲ್‌ಗೆ ಪ್ರವೇಶ ಪಡದುಕೊಂಡಿದೆ. ಭಾರತ ಪುರುಷರ ತಂಡ ಗ್ರೇಟ್ ಬ್ರಿಟನ್ ತಂಡದ ವಿರುದ್ಧ ಕ್ವಾರ್ಟರ್‌ಫೈನಲ್‌ನಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್‌ಗೆ ಪ್ರವೇಶ ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.

ಪುರುಷರ ತಂಡವೂ ಸೆಮಿಫೈನಲ್‌ಗೆ ಪ್ರವೇಶ

ಪುರುಷರ ತಂಡವೂ ಸೆಮಿಫೈನಲ್‌ಗೆ ಪ್ರವೇಶ

ಭಾರತೀಯ ಪುರುಷರ ತಂಡಕ್ಕೆ ಸೆಮಿಫೈನಲ್‌ನಲ್ಲಿ ಹಾಕಿಯಲ್ಲಿ ನಂಬರ್ 2 ಶ್ರೇಯಾಂಕದ ತಂಡವಾಗಿರುವ ಬೆಲ್ಜಿಯಂ ಸೆಮಿಫೈನಲ್‌ನಲ್ಲಿ ಎದುರಾಗಲಿದ್ದು ಈ ಪಂದ್ಯ ಆಗಸ್ಟ್ 3ರಂದು ನಡೆಯಲಿದೆ. ಒಲಿಂಪಿಕ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದ ಮಹಿಳಾ ಹಾಗೂ ಪುರುಷ ತಂಡಗಳು ಜೊತೆಯಾಗಿ ಸೆಮಿಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಂಡಿದೆ.

ಅರ್ಜೆಂಟಿನಾ ವಿರುದ್ಧ ಎದುರಾಗಲಿದೆ ಕಠಿಣ ಸವಾಲು

ಅರ್ಜೆಂಟಿನಾ ವಿರುದ್ಧ ಎದುರಾಗಲಿದೆ ಕಠಿಣ ಸವಾಲು

ಸೆಮಿಫೈನಲ್‌ನಲ್ಲಿ ಭಾರತ ಮಹಿಳೆಯರ ತಂಡ ಅರ್ಜೆಂಟಿನಾ ತಂಡದ ವಿರುದ್ಧ ಗೆದ್ದು ಬೀಗುವ ಉತ್ಸಾಹದಲ್ಲಿದೆ. ಆದರೆ ಕ್ವಾರ್ಟರ್‌ಫೈನಲ್‌ನಲ್ಲಿ ಅರ್ಜೆಂಟಿನಾ ಜರ್ಮನಿಯ ವಿರುದ್ಧ ನೀಡಿದ ಶಿಸ್ತಿಬದ್ಧ ಪ್ರದರ್ಶನ ತಂಡಕ್ಕೆ ಸವಾಲಾಗಲಿದೆ. ಹೀಗಾಗಿ ಫೈನಲ್ ಪ್ರವೇಶಕ್ಕೆ ಈ ಪಂದ್ಯವನ್ನು ಭಾರತ ಮಹಿಳೆಯರ ತಂಡ ಗೆಲ್ಲಲೇ ಬೇಕಿದೆ.

ಪಂದ್ಯದ ಸಮಯ ಹಾಗೂ ನೇರಪ್ರಸಾರ ಮಾಹಿತಿ

ಪಂದ್ಯದ ಸಮಯ ಹಾಗೂ ನೇರಪ್ರಸಾರ ಮಾಹಿತಿ

ಭಾರತ ಹಾಗೂ ಅರ್ಜೆಂಟಿನಾ ತಂಡಗಳ ನಡುವಿನ ಸೆಮಿಫೈನಲ್ ಪಂದ್ಯದ ಸಮಯ ಹಾಗೂ ನೇರಪ್ರಸಾರದ ಮಾಹಿತಿ ಇಲ್ಲಿದೆ
ಪಂದ್ಯದ ದಿನಾಂಕ: ಭಾರತ ಹಾಗೂ ಅರ್ಜೆಂಟಿನಾ ತಂಡಗಳ ನಡುವಿನ ಸೆಮಿಫೈನಲ್ ಪಂದ್ಯ ಆಗಸ್ಟ್ 4ರಂದು ಬುಧವಾರ ನಡೆಯಲಿದೆ.
ಪಂದ್ಯದ ಸಮಯ: ಭಾರತೀಯ ಕಾಲಮಾನ ಬೆಳಿಗ್ಗೆ 7 ಗಂಟೆಗೆ ಈ ಪಂದ್ಯ ಆರಂಭವಾಗಲಿದೆ.
ಟಿವಿ ಚಾನೆಲ್, ಲೈವ್ ಸ್ಟ್ರೀಮಿಂಗ್: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪಂದ್ಯದ ನೇರಪ್ರಸಾರವಿರಲಿದೆ. ಅಲ್ಲದೆ ಸೋನಿ ಲಿವ್ ಚಂದಾದಾರರು ನೇರಪ್ರಸಾರ ವೀಕ್ಷಿಸುವ ಅವಕಾಶವಿದೆ. ಜಿಯೋ ಟಿವಿಯಲ್ಲಿಯೂ ಈ ಪಂದ್ಯದ ನೇರಪ್ರಸಾರವನ್ನು ವೀಕ್ಷಿಸಬಹುದು.

Story first published: Monday, August 2, 2021, 15:14 [IST]
Other articles published on Aug 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X