ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಹಾಕಿ ವಿಶ್ವಕಪ್ 2018: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

World Cup 2018: India Beat South Africa by 5-0

ಭುವನೇಶ್ವರ, ನವೆಂಬರ್ 28: ಒಡಿಶಾದ ಭುವನೇಶ್ವರದಲ್ಲಿ ಬುಧವಾರ (ನವೆಂಬರ್ 28) ನಡೆದ ಪುರುಷರ ಹಾಕಿ ವಿಶ್ವಕಪ್ 2018 ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಪುರುಷರು 5-0 ಅಂತರದ ಗೆಲುವು ದಾಖಲಿಸಿದ್ದಾರೆ. ತಂಡದ ಗೆಲುವಿನಲ್ಲಿ ಮನ್‌ದೀಪ್‌ ಸಿಂಗ್, ಆಕಾಶ್‌ದೀಪ್ ಸಿಂಗ್, ಸಿಮ್ರನ್‌ಜೀತ್ ಪ್ರಮುಖರೆನಿಸಿದರು (ಚಿತ್ರ ಕೃಪೆ: ಹಾಕಿ ಇಂಡಿಯಾ).

ಹಾಕಿ ವಿಶ್ವಕಪ್: ಆರಂಭೋತ್ಸವಕ್ಕೆ ಶಾರುಖ್, ಮಾಧುರಿ, ರೆಹಮಾನ್ ಮೆರಗುಹಾಕಿ ವಿಶ್ವಕಪ್: ಆರಂಭೋತ್ಸವಕ್ಕೆ ಶಾರುಖ್, ಮಾಧುರಿ, ರೆಹಮಾನ್ ಮೆರಗು

ಪಂದ್ಯಾರಂಭದಿಂದಲೂ ಭಾರತ ಪಾರಮ್ಯ ಮೆರೆಯಿತು. 10ನೇ ನಿಮಿಷದಲ್ಲಿ ಭಾರತದ ಮನ್‌ದೀಪ್‌ ಸಿಂಗ್ ಅವರು ಗೋಲ್ ಬಾರಿಸಿ ತಂಡಕ್ಕೆ 1-0ಯ ಮುನ್ನಡೆ ಕೊಟ್ಟರು. ಅದಾಗಿ 12ನೇ ನಿಮಿಷದಲ್ಲಿ ತಂಡದ ಪರ ಆಕಾಶ್ ದೀಪ್ ಸಿಂಗ್ ಎರಡನೇ ಗೋಲ್ ಬಾರಿಸಿ ಮುನ್ನಡೆ ಹೆಚ್ಚಿಸಿದರು.

ಅತ್ತ ದಕ್ಷಿಣ ಆಫ್ರಿಕಾದ ಪ್ರತಿರೋಧ ಹೆಚ್ಚಿದಷ್ಟೂ ಭಾರತ ಗೋಲ್ ಪ್ರಯತ್ನವೂ ಹೆಚ್ಚಿತು. 43ನೇ ನಿಮಿಷದಲ್ಲಿ ಸಿಮ್ರನ್‌ಜೀತ್‌ ಅವರಿಂದ ಮೂರನೇ ಗೋಲ್ ದಾಖಲಾಯಿತು. 45ನೇ ನಿಮಿಷದಲ್ಲಿ ಲಲಿತ್ ಉಪಾಧ್ಯಾಯ ನಾಲ್ಕನೇ ಗೋಲ್ ಬಾರಿಸಿ ತಂಡಕ್ಕೆ ಭರ್ಜರಿ ಮುನ್ನಡೆ ಕೊಟ್ಟರು. 46ನೇ ನಿಮಿಷದಲ್ಲಿ ಸಿಮ್ರನ್‌ಜೀತ್ 5ನೇ ಗೋಲ್ ಬಾರಿಸಿದರು.

ಮಿಥಾಲಿ ರಾಜ್ ವಿವಾದ: ಶುರುವಾದಂದಿನಿಂದ ಈವರೆಗಿನ 'ಆಗು-ಹೋಗು'ಗಳುಮಿಥಾಲಿ ರಾಜ್ ವಿವಾದ: ಶುರುವಾದಂದಿನಿಂದ ಈವರೆಗಿನ 'ಆಗು-ಹೋಗು'ಗಳು

ಪಂದ್ಯದ ವೇಳೆ ಭಾರತದ ಹಲವಾರು ಗೋಲ್ ಪ್ರಯತ್ನಗಳನ್ನು ದಕ್ಷಿಣ ಆಫ್ರಿಕಾ ತಂಡ ತಪ್ಪಿಸಿದ್ದೂ ಗಮನ ಸೆಳೆಯಿತು. ವಿಶ್ವ ಶ್ರೇಯಾಂಕದಲ್ಲಿ 5ನೇ ಸ್ಥಾನದಲ್ಲಿರುವ ಭಾರತಕ್ಕೆ ಪಂದ್ಯವನ್ನು ಸುಲಭವಾಗಿ ಬಿಟ್ಟುಕೊಡಲು ವಿಶ್ವ 15ನೇ ಶ್ರೇಯಾಂಕಿತ ದಕ್ಷಿಣ ಆಫ್ರಿಕಾ ಸಿದ್ಧವಿರದಿದ್ದುದು ಕಂಡುಬಂತು. ಆದರೆ ಗೋಲ್‌ ದಾಖಲಿಸಲು ಆಫ್ರಿಕಾದಿಂದ ಸಾಧ್ಯವಾಗಲಿಲ್ಲ. ಅಂತಿಮವಾಗಿ ಗೆಲುವು ಭಾರತ ಪರ ವಾಲಿತು.

ಭಾರತ ತಂಡ: ಮನ್ಪ್ರೀತ್ ಸಿಂಗ್ (ಸಿ), ದಿಲ್‌ಪ್ರೀತ್ ಸಿಂಗ್, ಪಿಆರ್ ಶ್ರೀಜೇಶ್ (ಗೋಲ್‌ಕೀ), ಹರ್ಮನ್ ಪ್ರೀತ್ ಸಿಂಗ್, ಸುರೇಂದರ್ ಕುಮಾರ್, ಮನ್‌ದೀಪ್ ಸಿಂಗ್, ಲಲಿತ್ ಉಪಾಧ್ಯಾಯ, ನೀಲಕಂಠ್ ಶರ್ಮಾ, ವರುಣ್ ಕುಮಾರ್, ಆಕಾಶ್‌ದೀಪ್ ಸಿಂಗ್, ಚಿಂಗ್ಲೆನ್ಸನಾ ಸಿಂಗ್ .

ದಕ್ಷಿಣ ಆಫ್ರಿಕಾ ತಂಡ: ಟಿಮ್ ಡ್ರಮ್ಮೊಂಡ್ (ಸಿ), ದಯಾನ್ ಕ್ಯಾಸಿಯಮ್, ಆಸ್ಟಿನ್ ಸ್ಮಿತ್, ಟೈಸನ್ ಡ್ಲುಂಗ್ವಾನಾ, ಪೀಬೊ ಲೆಂಬೆಥೆ, ಜೂಲಿಯನ್ ಹೈಕ್ಸ್, ರೈಟ್ ಹಾಲ್ಕೆಟ್, ಟೈನ್ ಪ್ಯಾಟನ್, ಜೆಥ್ರೊ ಯುಸ್ಟಿಸ್, ರಸ್ಸೀ ಪೀಟರ್ಸೆ, ನಿಕ್ ಸ್ಪೂನರ್.

Story first published: Wednesday, November 28, 2018, 20:45 [IST]
Other articles published on Nov 28, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X