ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

PKL 2022: ತೆಲುಗು ಟೈಟಾನ್ಸ್ ತಂಡವನ್ನು ಗುಮ್ಮಿದ ಬೆಂಗಳೂರು ಗೂಳಿಗಳು

PKL 2022: Bengaluru Bulls Beat Telugu Titans By 49-38 Points

ಪುಣೆಯ ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ 2022 ಸೀಸನ್ 9ರ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಮತ್ತೊಮ್ಮೆ ಚೇತೋಹಾರಿ ಪ್ರದರ್ಶನ ನೀಡಿ ತೆಲುಗು ಟೈಟಾನ್ಸ್ ತಂಡವನ್ನು 49-38 ಅಂಕಗಳ ಅಂತರದಿಂದ ಮಣಿಸಿತು.

ಮಂಗಳವಾರ ಸಂಜೆ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಆಟವನ್ನು ನಿಧಾನವಾಗಿ ಪ್ರಾರಂಭಿಸಿ, ಸಮಯ ಮುಂದುವರೆದಂತೆ ತಮ್ಮ ರಕ್ಷಣಾ ವಿಭಾಗ ಮತ್ತು ರೈಡಿಂಗ್ ವಿಭಾಗದಲ್ಲಿ ತೆಲುಗು ಟೈಟಾನ್ಸ್ ತಂಡದ ಮೇಲೆ ಸವಾರಿ ಮಾಡಿತು. ಅಂತಿಮವಾಗಿ ಆಲ್‌ರೌಂಡರ್ ಪ್ರದರ್ಶನ ನೀಡುವ ಮೂಲಕ ಗೆಲುವಿಗೆ ಅರ್ಹ ತಂಡವಾಯಿತು.

ಬೆಂಗಳೂರು ಬುಲ್ಸ್ ಪರ ಎಂದಿನಂತೆ ಸ್ಟಾರ್ ರೈಡರ್ ಭರತ್ ಮತ್ತು ನೀರಜ್ ನರ್ವಾಲ್ ಅವರು ತಮ್ಮ ತಂಡವನ್ನು 49-38 ಅಂತರದ ಗೆಲುವಿನತ್ತ ಮುನ್ನಡೆಸಿದರು. ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆಯಿತು.

PKL 2022: Bengaluru Bulls Beat Telugu Titans By 49-38 Points

ಬೆಂಗಳೂರು ಬುಲ್ಸ್ ತಂಡಕ್ಕೆ ನೀರಜ್ ನರ್ವಾಲ್ ಉತ್ತಮ ಅಂಕ ಗಳಿಸುತ್ತಿರುವಾಗ, ಸಾಂಪ್ರದಾಯಿಕ ಎದುರಾಳಿ ಸಿದ್ಧಾರ್ಥ್ ದೇಸಾಯಿ ಅವರು ತೆಲುಗು ಟೈಟಾನ್ಸ್‌ಗೆ ಉತ್ತಮ ಆರಂಭವನ್ನು ನೀಡಿದರು. ಸಿದ್ಧಾರ್ಥ್ ದೇಸಾಯಿ ಅವರು ತಮ್ಮ ತಂಡಕ್ಕೆ ಮೊದಲ ಐದು ಅಂಕಗಳನ್ನು ಗಳಿಸಿಕೊಟ್ಟರು. ನಂತರ ಸುರ್ಜೀತ್ ಸಿಂಗ್ ಅವರು ತೆಲುಗು ಟೈಟಾನ್ಸ್ ತಂಡದ ಸ್ಕೋರ್ ಶೀಟ್‌ ಹೆಚ್ಚಿಸಿದ ಎರಡನೇ ಆಟಗಾರನಾದರು.

ಮೊದಲಾರ್ಧ ಮುಗಿಯುವ ಮೊದಲು ಸಿದ್ಧಾರ್ಥ್ ದೇಸಾಯಿ ತಮ್ಮ ಸೂಪರ್ 10 ಅಂಕ ಗಳಿಸಿದರು. ಆದರೆ ಭರತ್ ಪ್ರತಿದಾಳಿ ನಡೆಸುವ ಮೂಲಕ ಬೆಂಗಳೂರು ಬುಲ್ಸ್ ತಂಡವನ್ನು ನಿಕಟ ಪೈಪೋಟಿಗೆ ತಂದು ನಿಲ್ಲಿಸಿದರು. ಮೊದಲಾರ್ಧದಲ್ಲಿ ಬುಲ್ಸ್ ಮುಂಚೂಣಿಯಲ್ಲಿದ್ದರೂ ತೆಲುಗು ಟೈಟಾನ್ಸ್ 1 ಪಾಯಿಂಟ್‌ನಿಂದ ಮುನ್ನಡೆ ಪಡೆದಿತ್ತು.

PKL 2022: Bengaluru Bulls Beat Telugu Titans By 49-38 Points

ಬುಲ್ಸ್ ತಂಡದ ವಿಕಾಸ್ ಕಂಡೋಲಾ ಅವರನ್ನು ತೆಲುಗು ಟೈಟಾನ್ಸ್ ಡಿಫೆಂಡರ್‌ಗಳು ಅತ್ಯುತ್ತಮವಾಗಿ ನಿಯಂತ್ರಿಸಿದರು. ಆದರೂ, ಭರತ್ ದಾಳಿ ನಡೆಸಿ ಬೆಂಗಳೂರು ಬುಲ್ಸ್ ತಂಡದ ಅಂಕ ಹೆಚ್ಚಿಸಿದರು ಮತ್ತು ತೆಲುಗು ಟೈಟಾನ್ಸ್ ತಂಡವನ್ನು ಆಲೌಟ್ ಮಾಡಿ ಮುನ್ನಡೆದರು. ಬೆಂಗಳೂರು ಬುಲ್ಸ್ ತಂಡವು ಸಿದ್ಧಾರ್ಥ್ ದೇಸಾಯಿ ಅವರ ಆಟವನ್ನು ಕಟ್ಟಿಹಾಕಿತು.

ತೆಲುಗು ಟೈಟಾನ್ಸ್ ಕಠಿಣ ಹೋರಾಟ ನಡೆಸಿದರೂ, ಬೆಂಗಳೂರು ಬುಲ್ಸ್ ತನ್ನ ಪ್ರಾಬಲ್ಯವನ್ನು ಮುಂದುವರೆಸಿತು ಮತ್ತು ಸರಣಿ ಗೆಲುವು ದಾಖಲಿಸಿತು. ಬೆಂಗಳೂರು ಬುಲ್ಸ್ ಈವರೆಗಿನ 14 ಪಂದ್ಯಗಳಲ್ಲಿ 9 ಗೆಲುವು ಮತ್ತು 4 ಸೋಲುಗಳ ಮೂಲಕ ಒಟ್ಟು 51 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.

Story first published: Wednesday, November 16, 2022, 3:25 [IST]
Other articles published on Nov 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X