ಪ್ರೋ ಕಬಡ್ಡಿ: ಗುಜರಾತ್ ವಿರುದ್ಧ ಗೆದ್ದ ಜೈಪುರ್, ತೆಲುಗು ಟೈಟಾನ್ಸ್ ಪಂದ್ಯ ಡ್ರಾ

ಸದ್ಯ ಬೆಂಗಳೂರಿನಲ್ಲಿ ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿ ನಡೆಯುತ್ತಿದ್ದು, ಇಂದು ಎರಡು ಪಂದ್ಯಗಳು ನಡೆದಿವೆ. ಮೊದಲಿಗೆ ಸಂಜೆ 7.30ಕ್ಕೆ ಆರಂಭವಾದ ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಜಯ ಸಾಧಿಸಿದರೆ, ನಂತರ 8.30ಕ್ಕೆ ನಡೆದ ಬೆಂಗಾಲ್ ವಾರಿಯರ್ಸ್ ಮತ್ತು ತೆಲುಗು ಟೈಟಾನ್ಸ್ ತಂಡಗಳ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.

ಈ ಬಾರಿಯ ಪ್ರೋ ಕಬಡ್ಡಿ ಲೀಗ್ ಆವೃತ್ತಿಯ 100ನೇ ಪಂದ್ಯದಲ್ಲಿ ಇಂದು ( ಫೆಬ್ರವರಿ 8 ) ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾದವು. ಇತ್ತಂಡಗಳ ನಡುವೆ ನಡೆದ ಈ ಜಿದ್ದಾಜಿದ್ದಿನ ಹಣಾಹಣಿಯಲ್ಲಿ 36 - 31 ಅಂಕಗಳ ಅಂತರದಲ್ಲಿ ಗುಜರಾತ್ ಜೈಂಟ್ಸ್ ತಂಡದ ವಿರುದ್ಧ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಜಯವನ್ನು ಸಾಧಿಸಿತು. ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದ ಜೈಪುರ್ ಪಿಂಕ್ ಪ್ಯಾಂಥರ್ಸ್ ಪ್ಲೇ ಆಫ್ ಪ್ರವೇಶಿಸುವ ತನ್ನ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದ ದೀಪಕ್ ಹೂಡಾ ಸೂಪರ್‌ 10 ( 11 ಅಂಕಗಳು ) ಕಲೆ ಹಾಕಿದ್ದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತು. ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದ ಇತರೆ ಆಟಗಾರರಾದ ಸಂದೀಪ್ ಧುಲ್ 4 ಅಂಕಗಳು, ದೀಪಕ್ ಸಿಂಗ್ ಮತ್ತು ವಿಶಾಲ್ ತಲಾ 3 ಅಂಕಗಳನ್ನು ಕಲೆಹಾಕಿದರು. ಪಂದ್ಯದ ಕೊನೆಯ ಹಂತದಲ್ಲಿ ಗುಜರಾತ್ ಜೈಂಟ್ಸ್ ತಂಡ ಸಮಬಲವನ್ನು ಸಾಧಿಸಿತಾದರೂ ಜೈಪುರ ಪಿಂಕ್ ಪ್ಯಾಂಥರ್ಸ್ ಅನುಭವದ ಮುಂದೆ ಸೋಲಿಗೆ ಶರಣಾಯಿತು. ಗುಜರಾತ್ ಜೈಂಟ್ಸ್ ತಂಡದ ರೈಡರ್ ರಾಕೇಶ್ ನರ್ವಾಲ್ 8 ಅಂಕಗಳನ್ನು ಕಲೆ ಹಾಕಿದರೆ, ಪರ್ವೆಶ್ ಬೈನ್ಸ್ವಾಲ್ 4 ಅಂಕಗಳನ್ನು ಗಳಿಸಿದರು.

ಅವರು ಕರೆದಾಗ ಆರ್‌ಸಿಬಿ ಬಿಟ್ಟು ಬೇರೆ ತಂಡ ಸೇರಲು ಸಿದ್ಧನಾಗಿದ್ದೆ ಆದರೆ ಈ ಕಾರಣದಿಂದ ಆಗಲಿಲ್ಲ ಎಂದ ಕೊಹ್ಲಿಅವರು ಕರೆದಾಗ ಆರ್‌ಸಿಬಿ ಬಿಟ್ಟು ಬೇರೆ ತಂಡ ಸೇರಲು ಸಿದ್ಧನಾಗಿದ್ದೆ ಆದರೆ ಈ ಕಾರಣದಿಂದ ಆಗಲಿಲ್ಲ ಎಂದ ಕೊಹ್ಲಿ

ಪಂದ್ಯದ ಆರಂಭದಲ್ಲಿಯೇ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡದ ಅರ್ಜುನ್ ದೇಶ್ವಾಲ್ ಮತ್ತು ದೀಪಕ್ ಹೂಡಾ ಯಶಸ್ವಿ ರೈಡ್ ಮಾಡುವ ಮೂಲಕ ಉತ್ತಮ ಆರಂಭವನ್ನು ಪಡೆದುಕೊಂಡರು. ಅತ್ತ ಅಜಯ್ ಕುಮಾರ್ ಮತ್ತು ಪರ್ದೀಪ್ ಕುಮಾರ್ ಉತ್ತಮ ರೈಡ್ ಮೂಲಕ ಗುಜರಾತ್ ಜೈಂಟ್ಸ್ ತಂಡ ನಿಧಾನವಾಗಿ ಖಾತೆ ತೆರೆಯಿತು. ಆದರೆ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದ ರೈಡರ್ಸ್ ಮುಂದೆ ಮಂಕಾದ ಗುಜರಾತ್ ಜೈಂಟ್ಸ್ ಮಧ್ಯಂತರಕ್ಕೆ 1 ನಿಮಿಷ ಬಾಕಿ ಇರುವಾಗ ಆಲ್ ಔಟ್ ಆಯಿತು. ಹೀಗೆ ಮಧ್ಯಂತರಕ್ಕೆ ಸರಿಯಾಗಿ ಜೈಪುರ ಪಿಂಕ್ ಪ್ಯಾಂಥರ್ಸ್ ಗುಜರಾತ್ ಜೈಂಟ್ಸ್ ವಿರುದ್ಧ 20 - 14 ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿತು.

ಇನ್ನು ಪಂದ್ಯದ ದ್ವಿತೀಯಾರ್ಧದಲ್ಲಿ ಆರಂಭದಲ್ಲಿಯೇ ಗುಜರಾತ್ ಜೈಂಟ್ಸ್ ತಂಡವನ್ನು ಮತ್ತೊಮ್ಮೆ ಆಲ್ ಔಟ್ ಮಾಡಿದ ಜೈಪುರ್ ಪಿಂಕ್ ಪ್ಯಾಂಥರ್ಸ್ ಶುಭಾರಂಭವನ್ನು ಮಾಡಿತು. ಆದರೆ ಇದರ ಬೆನ್ನಲ್ಲೇ 2 ಸೂಪರ್ ಟ್ಯಾಕಲ್ ಮಾಡಿದ ಗುಜರಾತ್ ಜೈಂಟ್ಸ್ ತಂಡ ಅಂಕಗಳಲ್ಲಿ ಭಾರೀ ಬದಲಾವಣೆಯನ್ನು ತಂದಿತು. ಗುಜರಾತ್ ಜೈಂಟ್ಸ್ ತಂಡದ ಪರ್ವೆಶ್ ಬೈನ್ಸ್ ವಾಲ್ 4 ಅಂಕಗಳ ಟ್ಯಾಕಲ್ ಜೈಪುರ ಪಿಂಕ್ ಪ್ಯಾಂಥರ್ಸ್ ಮುನ್ನಡೆಯ ಅಂಕಗಳನ್ನು 3ಕ್ಕೆ ಇಳಿಯುವಂತೆ ಮಾಡಿತು. ಹೀಗೆ ಪಂದ್ಯ ಮುಕ್ತಾಯಕ್ಕೆ 7 ನಿಮಿಷಗಳು ಬಾಕಿ ಇರುವಾಗ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಆಲ್ ಔಟ್ ಮಾಡಿದ ಗುಜರಾತ್ ಜೈಂಟ್ಸ್ ಸಮಬಲವನ್ನು ಸಾಧಿಸಿತು. ಆದರೆ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದ ದೀಪಕ್ ಹೂಡಾ ಮತ್ತು ಅರ್ಜುನ್ ದೇಶ್ವಾಲ್ ಉತ್ತಮ ಪ್ರದರ್ಶನ ತಂಡಕ್ಕೆ 5 ಅಂಕಗಳ ಮುನ್ನಡೆಯನ್ನು ತಂದುಕೊಟ್ಟಿತು. ಅಂತಿಮವಾಗಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಗುಜರಾತ್ ಜೈಂಟ್ಸ್ ವಿರುದ್ಧ 5 ಅಂಕಗಳ ಜಯವನ್ನು ಸಾಧಿಸಿತು.

ಕೊಹ್ಲಿ ಚಾಹಲ್‌ಗೆ ನೀಡಿದ ಆ ಉಪಾಯದಿಂದ ಬಿತ್ತು ಪೊಲಾರ್ಡ್ ವಿಕೆಟ್!; ವಿಡಿಯೋ ವೈರಲ್ಕೊಹ್ಲಿ ಚಾಹಲ್‌ಗೆ ನೀಡಿದ ಆ ಉಪಾಯದಿಂದ ಬಿತ್ತು ಪೊಲಾರ್ಡ್ ವಿಕೆಟ್!; ವಿಡಿಯೋ ವೈರಲ್

ಅತ್ತ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ 101ನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಮತ್ತು ಬೆಂಗಾಲ್ ವಾರಿಯರ್ಸ್ ನಡುವೆ ಸೆಣಸಾಟ ನಡೆದಿದ್ದು, ಪಂದ್ಯ 32 - 32 ಅಂಕಗಳೊಂದಿಗೆ ಡ್ರಾ ಆಗಿದೆ.

For Quick Alerts
ALLOW NOTIFICATIONS
For Daily Alerts
Story first published: Monday, February 7, 2022, 23:26 [IST]
Other articles published on Feb 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X