ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೋ ಕಬಡ್ಡಿ ಲೀಗ್ 8: ಫೆಬ್ರವರಿ 10ರ ಎಲ್ಲಾ ಪಂದ್ಯಗಳ ಮಾಹಿತಿ ಮತ್ತು ಸಂಭಾವ್ಯ ತಂಡಗಳ ವಿವರ

PKL 8: Patna Pirates vs Puneri Paltan preview, head to head and probable playing 7

ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ ಮತ್ತೆ ಬಂದಿದ್ದು, ಕಳೆದ ಡಿಸೆಂಬರ್ 22ರಂದು ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳ ನಡುವೆ ನಡೆದ ಹಣಾಹಣಿಯ ಮೂಲಕ ಆರಂಭವನ್ನು ಪಡೆದುಕೊಂಡಿದೆ. ಫೆಬ್ರವರಿ 9ರ ಬುಧವಾರದವರೆಗೂ ಒಟ್ಟು 105 ಪಂದ್ಯಗಳು ನಡೆದಿದ್ದು, ಈ ಸಮಯಕ್ಕೆ ಅಂಕಪಟ್ಟಿಯಲ್ಲಿ ಹೆಚ್ಚು ಅಂಕವನ್ನು ಪಡೆದುಕೊಳ್ಳುವುದರ ಮೂಲಕ ಪಾಟ್ನಾ ಪೈರೇಟ್ಸ್ ಅಗ್ರಸ್ಥಾನದಲ್ಲಿದ್ದರೆ, ಹರಿಯಾಣ ಸ್ಟೀಲರ್ಸ್ ದ್ವಿತೀಯ ಸ್ಥಾನ ಮತ್ತು ದಬಾಂಗ್ ಡೆಲ್ಲಿ ತೃತೀಯ ಸ್ಥಾನದಲ್ಲಿವೆ.

ಹೀಗೆ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ ಪೈಕಿ ಇಲ್ಲಿಯವರೆಗೂ 105 ಪಂದ್ಯಗಳು ಈಗಾಗಲೇ ಮುಗಿದಿದ್ದು, ಇಂದು ( ಫೆಬ್ರವರಿ 10) ಒಟ್ಟು 2 ಪಂದ್ಯಗಳು ನಡೆಯಲಿವೆ. ಈ 2 ಪಂದ್ಯಗಳ ಪೈಕಿ ಪ್ರಥಮ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಮತ್ತು ದಬಾಂಗ್ ಡೆಲ್ಲಿ ತಂಡಗಳು ಸೆಣಸಾಟ ನಡೆಸಿದರೆ, ದ್ವಿತೀಯ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ಮತ್ತು ಪಾಟ್ನಾ ಪೈರೇಟ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಹೀಗೆ ಇಂದು ನಡೆಯಲಿರುವ ಈ 2 ಪಂದ್ಯಗಳ ಕುರಿತಾದ ಮಾಹಿತಿ, ಪಂದ್ಯಗಳಲ್ಲಿ ಕಣಕ್ಕಿಳಿಯಲಿರುವ ಸಂಭಾವ್ಯ ಆಟಗಾರರ ಪಟ್ಟಿ ಮತ್ತು ಮುಖಾಮುಖಿ ಹಣಾಹಣಿಗಳಲ್ಲಿ ಯಾವ ತಂಡ ಹೆಚ್ಚು ಪಂದ್ಯಗಳನ್ನು ಗೆದ್ದಿದೆ ಎಂಬುದರ ಮಾಹಿತಿ ಮುಂದೆ ಇದೆ ಓದಿ..

ಮುಂದಿನ ಟೆಸ್ಟ್ ಸರಣಿ: ಈ ನಾಲ್ವರಿಗೆ ನಿಮ್ಮ ಸಮಯ ಮುಗಿಯಿತು ತಂಡದಲ್ಲಿ ಸ್ಥಾನವಿಲ್ಲ ಎಂದ ಆಯ್ಕೆಗಾರರು!ಮುಂದಿನ ಟೆಸ್ಟ್ ಸರಣಿ: ಈ ನಾಲ್ವರಿಗೆ ನಿಮ್ಮ ಸಮಯ ಮುಗಿಯಿತು ತಂಡದಲ್ಲಿ ಸ್ಥಾನವಿಲ್ಲ ಎಂದ ಆಯ್ಕೆಗಾರರು!

ಪಂದ್ಯ 1: ಬೆಂಗಾಲ್ ವಾರಿಯರ್ಸ್ vs ದಬಾಂಗ್ ಡೆಲ್ಲಿ

ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಇಲ್ಲಿಯವರೆಗೂ ಒಟ್ಟು 17 ಪಂದ್ಯಗಳನ್ನಾಡಿರುವ ದಬಾಂಗ್ ಡೆಲ್ಲಿ 9 ಪಂದ್ಯಗಳಲ್ಲಿ ಗೆದ್ದು, 5 ಪಂದ್ಯಗಳಲ್ಲಿ ಸೋತು, ಉಳಿದ 3 ಪಂದ್ಯಗಳನ್ನು ಡ್ರಾ ಮಾಡಿಕೊಳ್ಳುವುದರ ಮೂಲಕ 57 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ. ಅತ್ತ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಇಲ್ಲಿಯವರೆಗೂ ಒಟ್ಟು 18 ಪಂದ್ಯಗಳನ್ನಾಡಿರುವ ಬೆಂಗಾಲ್ ವಾರಿಯರ್ಸ್ ತಂಡ 7 ಪಂದ್ಯಗಳಲ್ಲಿ ಗೆದ್ದು, 9 ಪಂದ್ಯಗಳಲ್ಲಿ ಸೋತಿದ್ದು, ಉಳಿದ 2 ಪಂದ್ಯಗಳನ್ನು ಡ್ರಾ ಮಾಡಿಕೊಳ್ಳುವುದರ ಮೂಲಕ 44 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಇನ್ನು ಇತ್ತಂಡಗಳ ನಡುವೆ ಇಂದು ನಡೆಯಲಿರುವ ಪಂದ್ಯ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ 106ನೇ ಪಂದ್ಯವಾಗಿದ್ದು ಸಂಜೆ 7. 30ಕ್ಕೆ ಆರಂಭಗೊಳ್ಳಲಿದೆ. ಇನ್ನು ಇತ್ತಂಡಗಳ ನಡುವೆ ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಇಲ್ಲಿಯವರೆಗೂ ಒಟ್ಟು 16 ಮುಖಾಮುಖಿ ಪಂದ್ಯಗಳು ನಡೆದಿದ್ದು ದಬಾಂಗ್ ಡೆಲ್ಲಿ 7 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ ಬೆಂಗಾಲ್ ವಾರಿಯರ್ಸ್ 7 ಪಂದ್ಯಗಳಲ್ಲಿ ಗೆದ್ದಿದೆ ಹಾಗೂ ಉಳಿದೆರಡು ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.

ಬೆಂಗಾಲ್ ವಾರಿಯರ್ಸ್ ಸಂಭಾವ್ಯ ಆಡುವ ಬಳಗ: ಮಣಿಂದರ್ ಸಿಂಗ್ (ನಾಯಕ), ಪರ್ವೀನ್ ಸೇತ್ಪಾಲ್, ರವೀಂದ್ರ ಕುಮಾವತ್, ಮೊಹಮ್ಮದ್ ನಬಿಬಕ್ಷ್, ರಾನ್ ಸಿಂಗ್ ಮತ್ತು ಅಬೋಜರ್ ಮಿಘಾನಿ

ದಬಾಂಗ್ ಡೆಲ್ಲಿ ಸಂಭಾವ್ಯ ಆಡುವ ಬಳಗ: ನವೀನ್ ಗೋಯತ್, ಕ್ರಿಶನ್ ಧುಲ್, ಮಂಜೀತ್ ಚಿಲ್ಲರ್, ವಿಜಯ್ ಮಲಿಕ್, ಅಶು ಮಲಿಕ್, ಸಂದೀಪ್ ನರ್ವಾಲ್ ಮತ್ತು ಜೋಗಿಂದರ್ ನರ್ವಾಲ್ (ನಾಯಕ)

ಮುಂದಿನ ಟೆಸ್ಟ್ ಸರಣಿ: ಈ ನಾಲ್ವರಿಗೆ ನಿಮ್ಮ ಸಮಯ ಮುಗಿಯಿತು ತಂಡದಲ್ಲಿ ಸ್ಥಾನವಿಲ್ಲ ಎಂದ ಆಯ್ಕೆಗಾರರು!ಮುಂದಿನ ಟೆಸ್ಟ್ ಸರಣಿ: ಈ ನಾಲ್ವರಿಗೆ ನಿಮ್ಮ ಸಮಯ ಮುಗಿಯಿತು ತಂಡದಲ್ಲಿ ಸ್ಥಾನವಿಲ್ಲ ಎಂದ ಆಯ್ಕೆಗಾರರು!

ಪಂದ್ಯ 2: ಪುಣೇರಿ ಪಲ್ಟಾನ್ vs ಪಾಟ್ನಾ ಪೈರೇಟ್ಸ್

ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಇಲ್ಲಿಯವರೆಗೂ ಒಟ್ಟು 17 ಪಂದ್ಯಗಳನ್ನಾಡಿರುವ ಪಾಟ್ನಾ ಪೈರೇಟ್ಸ್ 12 ಪಂದ್ಯಗಳಲ್ಲಿ ಗೆದ್ದು, 4 ಪಂದ್ಯಗಳಲ್ಲಿ ಸೋತು, ಉಳಿದ 1 ಪಂದ್ಯವನ್ನು ಡ್ರಾ ಮಾಡಿಕೊಳ್ಳುವುದರ ಮೂಲಕ 65 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ. ಅತ್ತ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಇಲ್ಲಿಯವರೆಗೂ ಒಟ್ಟು 15 ಪಂದ್ಯಗಳನ್ನಾಡಿರುವ ಪುಣೇರಿ ಪಲ್ಟಾನ್ ತಂಡ 8 ಪಂದ್ಯಗಳಲ್ಲಿ ಗೆದ್ದು, 7 ಪಂದ್ಯಗಳಲ್ಲಿ ಸೋತು 42 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದೆ. ಇನ್ನು ಇತ್ತಂಡಗಳ ನಡುವೆ ಇಂದು ನಡೆಯಲಿರುವ ಪಂದ್ಯ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ 107ನೇ ಪಂದ್ಯವಾಗಿದ್ದು ರಾತ್ರಿ 8. 30ಕ್ಕೆ ಆರಂಭಗೊಳ್ಳಲಿದೆ. ಇನ್ನು ಇತ್ತಂಡಗಳ ನಡುವೆ ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಇಲ್ಲಿಯವರೆಗೂ ಒಟ್ಟು 16 ಮುಖಾಮುಖಿ ಪಂದ್ಯಗಳು ನಡೆದಿದ್ದು ಪಾಟ್ನಾ ಪೈರೇಟ್ಸ್ 12 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ ಪುಣೇರಿ ಪಲ್ಟಾನ್ 2 ಪಂದ್ಯಗಳಲ್ಲಿ ಗೆದ್ದಿದೆ ಹಾಗೂ ಉಳಿದೆರಡು ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.

ಪಾಟ್ನಾ ಪೈರೇಟ್ಸ್ ಸಂಭಾವ್ಯ ಆಡುವ ಬಳಗ: ಪ್ರಶಾಂತ್ ಕುಮಾರ್ ರೈ (ನಾಯಕ), ಸಚಿನ್ ತನ್ವರ್, ಮೋನು ಗೋಯತ್, ನೀರಜ್, ಸಜಿನ್ ಸಿ, ಮೊಹಮ್ಮದ್ರೇಜಾ ಶಾದ್ಲೂಯಿ, ಸುನಿಲ್

ಪುಣೇರಿ ಪಲ್ಟಾನ್ ಸಂಭಾವ್ಯ ಆಡುವ ಬಳಗ: ಅಸ್ಲಾಂ ಇನಾಮದಾರ್, ಮೋಹಿತ್ ಗೋಯತ್, ನಿತಿನ್ ತೋಮರ್ (ನಾಯಕ), ಅಭಿನೇಶ್ ನಡರಾಜನ್, ಸಂಕೇತ್ ಸಾವಂತ್, ಸೋಂಬಿರ್ ಮತ್ತು ಕರಂವೀರ್

ನೇರಪ್ರಸಾರದ ಮಾಹಿತಿ: ಎಲ್ಲಾ ಪಂದ್ಯಗಳ ನೇರಪ್ರಸಾರದ ಮಾಹಿತಿ: ಈ ಬಾರಿಯ ವಿವೋ ಪ್ರೊ ಕಬಡ್ಡಿ ಲೀಗ್‌ನ ಎಲ್ಲ ಪಂದ್ಯಗಳು ಸಹ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ ಚಾನೆಲ್‌ಗಳಲ್ಲಿ ಪ್ರಸಾರವಾಗಲಿದ್ದು, ಡಿಸ್ನೆ + ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿಯೂ ಕೂಡ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.

Story first published: Thursday, February 10, 2022, 17:01 [IST]
Other articles published on Feb 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X