ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೋ ಕಬಡ್ಡಿ ಲೀಗ್ 8: ಚೊಚ್ಚಲ ಸೋಲು ಕಂಡ ದಬಾಂಗ್ ಡೆಲ್ಲಿ; ಬೃಹತ್ ಜಯ ಸಾಧಿಸಿದ ತಲೈವಾಸ್

PKL 8: Tamil Thalaivas won against Haryana Steelers by 45 - 26

ಪ್ರೋ ಕಬಡ್ಡಿ ಲೀಗ್ 8ನೇ ಆವೃತ್ತಿಯಲ್ಲಿ ಇಂದು ( ಜನವರಿ 10 ) 2 ಪಂದ್ಯಗಳು ನಡೆದಿದ್ದು ಮೊದಲಿಗೆ ತಮಿಳ್ ತಲೈವಾಸ್ ಹಾಗೂ ಹರಿಯಾಣ ಸ್ಟೀಲರ್ಸ್ ತಂಡಗಳ ನಡುವಿನ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ ತಮಿಳ್ ತಲೈವಾಸ್ ಬೃಹತ್ ಗೆಲುವನ್ನು ದಾಖಲಿಸಿದೆ. ಅತ್ತ ಇದೇ ದಿನದಂದು ನಡೆದ ಮತ್ತೊಂದು ಪಂದ್ಯದಲ್ಲಿ ಸೋಲನ್ನೇ ಕಾಣದೇ ಇದ್ದ ದಬಂಗ್ ಡೆಲ್ಲಿ ತಂಡಕ್ಕೆ ಜೈಪುರ ಪಿಂಕ್ ಪ್ಯಾಂಥರ್ಸ್ ಸೋಲುಣಿಸಿದೆ.

ಹೆಚ್ಚು ದಿನ ತಂಡದಲ್ಲಿ ಉಳಿಯಲು ಹೀಗೆ ಮಾಡು ಎಂದು ಧೋನಿ ಈ ಹಿಂದೆ ನೀಡಿದ್ದ ಸಲಹೆ ಬಿಚ್ಚಿಟ್ಟ ಕೊಹ್ಲಿ!ಹೆಚ್ಚು ದಿನ ತಂಡದಲ್ಲಿ ಉಳಿಯಲು ಹೀಗೆ ಮಾಡು ಎಂದು ಧೋನಿ ಈ ಹಿಂದೆ ನೀಡಿದ್ದ ಸಲಹೆ ಬಿಚ್ಚಿಟ್ಟ ಕೊಹ್ಲಿ!

ಇಂದು ನಡೆದ ಚೊಚ್ಚಲ ಪಂದ್ಯದಲ್ಲಿ ತಮಿಳ್ ತಲೈವಾಸ್ ಮತ್ತು ಹರ್ಯಾಣ ಸ್ಟೀಲರ್ಸ್ ತಂಡಗಳು ಸೆಣಸಾಟವನ್ನು ನಡೆಸಿದವು. ಈ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ ತಮಿಳ್ ತಲೈವಾಸ್ ಆಲ್ ರೌಂಡರ್ ಪ್ರದರ್ಶನವನ್ನು ನೀಡುವುದರ ಮೂಲಕ 45 - 26 ಅಂತರದಿಂದ ಗೆದ್ದು ಬೀಗಿದೆ. ತಮಿಳ್ ತಲೈವಾಸ್ ತಂಡದ ಪರ ಮಂಜೀತ್ ಸೂಪರ್ 10 ಕಲೆಹಾಕಿ ಮಿಂಚಿದರೆ, ಸುರ್ಜಿತ್ ಸಿಂಗ್ 8 ಟ್ಯಾಕಲ್ ಪಾಯಿಂಟ್ಸ್ ಮತ್ತು ಸಾಗರ್ 7 ಟ್ಯಾಕಲ್ ಪಾಯಿಂಟ್ಸ್ ಪಡೆದು ಉತ್ತಮ ಪ್ರದರ್ಶನವನ್ನು ನೀಡಿದರು. ಪಂದ್ಯದ ಮೊದಲಾರ್ಧದಲ್ಲಿ ಹರಿಯಾಣ ಸ್ಟೀಲರ್ಸ್ ತಂಡದವರಿಗೆ ಎಲ್ಲಿಯೂ ಅವಕಾಶವನ್ನೇ ನೀಡದ ತಮಿಳ್ ತಲೈವಾಸ್ ತಂಡದ ಸುರ್ಜಿತ್ ಸಿಂಗ್ ಮತ್ತು ಸಾಗರ್ ಟ್ಯಾಕಲ್ ಮೇಲೆ ಟ್ಯಾಕಲ್ ಮಾಡಿ 5ನೇ ನಿಮಿಷಕ್ಕೆ ಆಲ್ ಔಟ್ ಮಾಡಿದರು. ಹಾಗೂ ಮಧ್ಯಂತರಕ್ಕೆ 8 ನಿಮಿಷಗಳು ಬಾಕಿ ಇರುವಾಗ ಮತ್ತೊಮ್ಮೆ ಆಲ್ ಔಟ್ ಮಾಡಿದ ತಮಿಳ್ ತಲೈವಾಸ್ 14 ಅಂಕಗಳ ಮುನ್ನಡೆಯನ್ನು ಸಾಧಿಸಿತ್ತು.

ಈ ಸಂದರ್ಭದಲ್ಲಿ ಎಚ್ಚೆತ್ತ ಹರಿಯಾಣ ಸ್ಟೀಲರ್ಸ್ ತಂಡದ ವಿಕಾಸ್ ಖಂಡೋಲಾ ಮುನ್ನುಗ್ಗುತ್ತಿದ್ದ ತಮಿಳ್ ತಲೈವಾಸ್ ತಂಡಕ್ಕೆ ಬ್ರೇಕ್ ಹಾಕಿ ಮಧ್ಯಂತರಕ್ಕೆ ಇನ್ನೂ 2 ನಿಮಿಷಗಳು ಬಾಕಿ ಇರುವಾಗ ಆಲ್ ಔಟ್ ಮಾಡುವುದರ ಮೂಲಕ ತಮಿಳ್ ತಲೈವಾಸ್ ತಂಡದ ಮುನ್ನಡೆಯನ್ನು 5 ಅಂಕಗಳಿಗೆ ಇಳಿಯುವಂತೆ ಮಾಡಿದರು. ಇನ್ನು ಮಧ್ಯಂತರಕ್ಕೆ ಸರಿಯಾಗಿ ತಮಿಳ್ ತಲೈವಾಸ್ 24 ಅಂಕಗಳನ್ನು ಗಳಿಸಿದರೆ, ಹರಿಯಾಣ ಸ್ಟೀಲರ್ಸ್ 18 ಅಂಕಗಳನ್ನು ಕಲೆ ಹಾಕಿತು.

ಇನ್ನು ದ್ವಿತೀಯಾರ್ಧದಲ್ಲಿಯೂ ತನ್ನ ಅಬ್ಬರವನ್ನು ಮುಂದುವರೆಸಿದ ತಮಿಳ್ ತಲೈವಾಸ್ ತನ್ನ ಅಮೋಘ ಪ್ರದರ್ಶನದಿಂದ 3ನೇ ನಿಮಿಷಕ್ಕೆ ಆಲ್ ಔಟ್ ಮಾಡುವುದರ ಮೂಲಕ ಹರಿಯಾಣ ಸ್ಟೀಲರ್ಸ್ ತಂಡದ ಬಳಿ ಉತ್ತರವೇ ಇಲ್ಲದಂತೆ ಮಾಡಿತು. ಇನ್ನು ಪಂದ್ಯ ಮುಗಿಯಲು 5 ನಿಮಿಷಗಳು ಬಾಕಿ ಇರುವಾಗ ಮತ್ತೊಮ್ಮೆ ಆಲ್ ಔಟ್ ಮಾಡಿದ ತಮಿಳ್ ತಲೈವಾಸ್ ಹರಿಯಾಣ ಸ್ಟೀಲರ್ಸ್ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸಿತು.

ಭಾರತ vs ದ.ಆಫ್ರಿಕಾ: ನಾನೇನೋ 3ನೇ ಟೆಸ್ಟ್ ಆಡಲು ಸಿದ್ಧ ಆದರೆ ಆತನದ್ದೇ ಸಮಸ್ಯೆ ಎಂದ ಕೊಹ್ಲಿ!ಭಾರತ vs ದ.ಆಫ್ರಿಕಾ: ನಾನೇನೋ 3ನೇ ಟೆಸ್ಟ್ ಆಡಲು ಸಿದ್ಧ ಆದರೆ ಆತನದ್ದೇ ಸಮಸ್ಯೆ ಎಂದ ಕೊಹ್ಲಿ!

ಇನ್ನು ಇದೇ ದಿನದಂದು ನಡೆದ ಮತ್ತೊಂದು ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ತಂಡಗಳು ಸೆಣಸಾಟ ನಡೆಸಿದವು. ಈ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ 30 ಅಂಕಗಳನ್ನು ಗಳಿಸಿದರೆ ದಬಾಂಗ್ ಡೆಲ್ಲಿ 28 ಅಂಕಗಳನ್ನು ಕಲೆ ಹಾಕಿತು. ಈ ಮೂಲಕ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಇಲ್ಲಿಯವರೆಗೂ ಯಾವುದೇ ಪಂದ್ಯದಲ್ಲಿಯೂ ಕೂಡ ಸೋಲನ್ನು ಕಾಣದೇ ಇದ್ದ ದಬಾಂಗ್ ಡೆಲ್ಲಿಯ ಗೆಲುವಿನ ನಾಗಾಲೋಟಕ್ಕೆ ಜೈಪುರ್ ಪಿಂಕ್ ಪ್ಯಾಂಥರ್ಸ್ ಬ್ರೇಕ್ ಹಾಕಿತು.

Story first published: Tuesday, January 11, 2022, 0:00 [IST]
Other articles published on Jan 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X