ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ 2019: ಸ್ಟೀಲರ್ಸ್‌ ವಿರುದ್ಧ ಬುಲ್ಸ್‌ಗೆ ವೀರೋಚಿತ ಸೋಲು

bengaluru bulls lost to haryana 2019

ಅಹಮದಾಬಾದ್‌, ಆಗಸ್ಟ್‌ 11: ಅಂತಿಮ ಕ್ಷಣದ ಒತ್ತಡ ನಿಭಾಯಿಸುವಲ್ಲಿ ವಿಫಲಗೊಂಡ ಹಾಲಿ ಚಾಂಪಿಯನ್ಸ್‌ ಬೆಂಗಳೂರು ಬುಲ್ಸ್‌ ತಂಡ ಹರಿಯಾಣ ಸ್ಟೀಲರ್ಸ್‌ ವಿರುದ್ಧದ ಪ್ರೊಕಬಡ್ಡಿ ಲೀಗ್‌ 2019ರ ಟೂರ್ನಿಯ ಲೀಗ್‌ ಪಂದ್ಯದಲ್ಲಿ ವೀರೋಚಿತ ಸೋಲುಂಡಿತು.

ಇಲ್ಲಿನ ಅರೆನಾ ಬೈ ಟ್ರಾನ್ಸ್‌ಸ್ಟೇಡಿಯಾ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಹೈವೋಲ್ಟೇಜ್‌ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡ 30-33 ಅಂಕಗಳಿಂದ ಸ್ಟೀಲರ್ಸ್‌ನ ಭದ್ರ ಡಿಫೆನ್ಸ್‌ ಕೋಟೆಯೊಳಗೆ ಬಂಧಿಯಾಯಿತು. ಇದು ಪ್ರಸಕ್ತ ಲೀಗ್‌ನಲ್ಲಿ ಬುಲ್ಸ್‌ ಪಡೆ ಅನುಭವಿಸಿದ ಎರಡನೇ ಸೋಲಾಗಿದೆ.

ಪ್ರೊ ಕಬಡ್ಡಿ ಲೀಗ್‌: ಅಂಕಪಟ್ಟಿ/ ವೇಳಾಪಟ್ಟು/ ತಂಡಗಳ ವಿವರ

ಕಡಿಮೆ ಅಂತರದಲ್ಲಿ ಸೋತು ಒಂದಂಕ ಪಡೆಯುವಲ್ಲಿ ಯಶಸ್ವಿಯಾದ ಬೆಂಗಳೂರು ಬುಲ್ಸ್‌ ತಂಡ ಒಟ್ಟಾರೆ 6 ಪಂದ್ಯಗಳಿಂದ 21 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ. ಅಷ್ಟೇ ಪಂದ್ಯಗಳನ್ನಾಡಿ 26 ಅಂಕಗಳನ್ನು ಗಳಿಸಿರುವ ದಬಾಂಗ್‌ ಡೆಲ್ಲಿ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಪಂದ್ಯದಲ್ಲಿ ಬೆಂಗಳೂರು ತಂಡದ ಪರ ನಾಯಕ ರೋಹಿತ್‌ ಕುಮಾರ್‌ ಆಲ್‌ರೌಂಡ್‌ ಆಡವಾಡುವ ಮೂಲಕ ರೇಡ್‌ಗಳಲ್ಲಿ 10 ಮತ್ತು ಟ್ಯಾಕಲ್‌ನಲ್ಲಿಯೂ 2 ಅಂಕಗಳನ್ನು ಗಳಿಸಿ ಒಟ್ಟಾರೆ 12 ಅಂಕಗಳೊಂದಿಗೆ ಗೆಲುವಿಗಾಗಿ ಹೋರಾಟ ನಡೆಸಿದರು. ಯುವ ರೇಡರ್‌ ಪವನ್‌ ಕುಮಾರ್‌ ಸೆಹ್ರಾವತ್‌ ಕೂಡ 8 ಅಂಕಗಳೊಂದಿಗೆ ಉತ್ತಮ ಸಾಥ್‌ ನೀಡಿದರು. ಆದರೆ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ.

26 ವರ್ಷಗಳ ಒಡಿಐ ದಾಖಲೆ ನುಚ್ಚುನೂರು ಮಾಡಿದ ಕಿಂಗ್‌ ಕೊಹ್ಲಿ!26 ವರ್ಷಗಳ ಒಡಿಐ ದಾಖಲೆ ನುಚ್ಚುನೂರು ಮಾಡಿದ ಕಿಂಗ್‌ ಕೊಹ್ಲಿ!

ಮತ್ತೊಂದೆಡೆ ನಾಯಕ ಧರ್ಮರಾಜ್‌ ಚೇರಲಾಥನ್‌ ಅವರ ಸಾರಥ್ಯದಲ್ಲಿ ಡಿಫೆನ್ಸ್‌ ಕಡೆಗೆ ಹೆಚ್ಚು ಮಹತ್ವ ನೀಡಿದ ಸ್ಟೀಲರ್ಸ್‌ ಪರ, ವಿಕಾಸ್‌ ಕಾಳೆ 6 ಟ್ಯಾಕಲ್‌ ಅಂಕಗಳೊಂದಿಗೆ ಬುಲ್ಸ್‌ ಪಡೆಗೆ ಕಬ್ಬಿಣದ ಕಡಲೆಯಾದರು. ಧರ್ಮರಾಜ್‌ ಮತ್ತು ಕುಲ್ದೀಪ್‌ ಸಿಂಗ್‌ ಕೂಡ ಡಿಫೆನ್ಸ್‌ನಲ್ಲಿ ತಲಾ 2 ಅಂಕಗಳನ್ನು ತಂದುಕೊಟ್ಟರು. ರೇಡಿಂಗ್‌ನಲ್ಲಿ ತಂಡದ ಸ್ಟಾರ್‌ ರೇಡರ್‌ ವಿಕಾಸ್‌ ಖಂಡೋಲ 12 ಅಂಕಗಳನ್ನು ಗಳಿಸಿ ಗಮನ ಸೆಳೆದರು.

ಭಾರತ ವಿರುದ್ಧದ ಟೆಸ್ಟ್‌ ಸರಣಿಗೆ ಗೇಲ್‌ ಬದಲು ದೈತ್ಯನನ್ನು ಕರೆತಂದ ವಿಂಡೀಸ್‌!ಭಾರತ ವಿರುದ್ಧದ ಟೆಸ್ಟ್‌ ಸರಣಿಗೆ ಗೇಲ್‌ ಬದಲು ದೈತ್ಯನನ್ನು ಕರೆತಂದ ವಿಂಡೀಸ್‌!

ಬೆಂಗಳೂರು ಬುಲ್ಸ್‌ ಸೋಮವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಯು.ಪಿ ಯೋಧಾ ವಿರುದ್ಧ ಪೈಪೋಟಿ ನಡೆಸಲಿದೆ. ಯುಪಿ ಯೋಧಾ ತಂಡ ಆಡಿದ 6 ಪಂದ್ಯಗಳಲ್ಲಿ 1 ಜಯ, 3 ಸೋಲು ಮತ್ತು 2 ಡ್ರಾ ಫಲಿತಾಂಶದೊಂದಿಗೆ 11 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದೆ.

Story first published: Sunday, August 11, 2019, 22:06 [IST]
Other articles published on Aug 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X