ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ ಲೀಗ್: ಹರಿಯಾಣ ಸ್ಟೀಲರ್ಸ್, ಪಾಟ್ನಾ ಪೈರೇಟ್ಸ್‌ಗೆ ಗೆಲುವು

Pro kabaddi

ಇಂದು ನಡೆದ ಪ್ರೊ ಕಬಡ್ಡಿ ಲೀಗ್‌ನ 102ನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡವು ತಮಿಳ್ ತಲೈವಾಸ್ ವಿರುದ್ಧ ಜಯಗಳಿಸಿದ್ರೆ, 103ನೇ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್‌ ಯು ಮುಂಬಾ ವಿರುದ್ಧ ಅಬ್ಬರಿಸಿದೆ.

ಬೆಂಗಳೂರಿನ ವೈಟ್‌ಫೀಲ್ಡ್‌ನ ಶೆರ್ಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ಇಂದು ನಡೆದ ಪಂದ್ಯದ ಮೊದಲಾರ್ಧದಲ್ಲಿ ಹರಿಯಾಣ ಸ್ಟೀಲರ್ಸ್ 15 ಪಾಯಿಂಟ್ಸ್ ಕಲೆಹಾಕಿದ್ರೆ, ತಮಿಳ್ ತಲೈವಾಸ್ 12 ಪಾಯಿಂಟ್ಸ್‌ ಕಲೆಹಾಕಿ ಹಿನ್ನಡೆ ಕಂಡಿತು. ಎರಡನೇ ಹಂತದಲ್ಲೂ ಕೂಡ ತಮಿಳ್ ತಲೈವಾಸ್ ಹಿಂದಿಕ್ಕಿದ ಹರಿಯಾಣ ಸ್ಟೀಲರ್ಸ್ 22 ಪಾಯಿಂಟ್ಸ್ ಕಲೆಹಾಕಿದ್ರೆ, ತಲೈವಾಸ್ 17 ಪಾಯಿಂಟ್ಸ್‌ ಮುಟ್ಟಿತು. ಕೊನೆಯಲ್ಲಿ ಪಂದ್ಯವನ್ನ ಹರಿಯಾಣ ಸ್ಟೀಲರ್ಸ್ 37-29 ಪಾಯಿಂಟ್ಸ್‌ಗಳಿಂದ ಗೆದ್ದು ಬೀಗಿತು.

ಪಂದ್ಯ ಸೋತರು ಸಹ ತಮಿಳ್ ತಲೈವಾಸ್ ಉತ್ತಮ ರೈಡಿಂಗ್ ಪಾಯಿಂಟ್ಸ್‌ಗಳಿಸಿತು. ತಲೈವಾಸ್ 20 ರೈಡಿಂಗ್ ಪಾಯಿಂಟ್ಸ್‌ ಗಿಟ್ಟಿಸಿದ್ರೆ, ಹರಿಯಾಣ ಸ್ಟೀಲರ್ಸ್ 24 ಪಾಯಿಂಟ್ಸ್ ಕಲೆಹಾಕಿತು. ಆದ್ರೆ ಕ್ಷೇತ್ರ ರಕ್ಷಣೆಯಲ್ಲಿ ಎಡವಿದ ತಲೈವಾಸ್ 8 ಪಾಯಿಂಟ್ಸ್ ಪಡೆದ್ರೆ, ಹರಿಯಾಣ ಸ್ಟೀಲರ್ಸ್ 9 ಟ್ಯಾಕಲ್ ಪಾಯಿಂಟ್ಸ್ ತನ್ನದಾಗಿಸಿಕೊಂಡಿದೆ.

ಹರಿಯಾಣ ಸ್ಟೀಲರ್ಸ್ ಆಶಿಶ್ 16 ಪಾಯಿಂಟ್ಸ್‌, ವಿಕಾಸ್ ಖಂಡೋಲಾ 8 ಪಾಯಿಂಟ್ಸ್, ವಿನಯ್ 3 ಪಾಯಿಂಟ್ಸ್ ಕಲೆಹಾಕಿದ್ದಾರೆ. ತಮಿಳ್ ತಲೈವಾಸ್ ಪರ ಮಂಜಿತ್ 10 ಪಾಯಿಂಟ್ಸ್, ಅಜಿಂಕ್ಯ ಪವಾರ್ 8 ಪಾಯಿಂಟ್ಸ್ ತನ್ನದಾಗಿಸಿಕೊಂಡರು.

ಇಂದು ನಡೆದ ಎರಡನೇ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ತಂಡವು ಯು ಮುಂಬಾ ವಿರುದ್ಧ ಅಬ್ಬರದ ಆಟವಾಡಿತು. ಮೊದಲಾರ್ಧದಲ್ಲಿ 28-16 ಪಾಯಿಂಟ್ಸ್ ಮುನ್ನಡೆ ಸಾಧಿಸಿದ್ದ ಪಾಟ್ನಾ ಪೈರೇಟ್ಸ್‌, ದ್ವಿತಿಯಾರ್ಧದಲ್ಲಿ 21-18 ಪಾಯಿಂಟ್ಸ್ ಜಿಗಿತ ಸಾಧಿಸಿತು. ಅಂತಿಮವಾಗಿ ಪಾಟ್ನಾ ಪೈರೇಟ್ಸ್‌ 47-36 ಪಾಯಿಂಟ್ಸ್ ಅಂತರದಲ್ಲಿ ಗೆಲುವು ಸಾಧಿಸಿತು.

ಪಾಟ್ನಾ ಪರ ರೈಡಿಂಗ್‌ನಲ್ಲಿ ಮಿಂಚಿದ ಸಚಿನ್ 16 ಪಾಯಿಂಟ್ಸ್ ಕಬಳಿಸಿದ್ರೆ, ಗುಮನ್ ಸಿಂಗ್ 11 ಪಾಯಿಂಟ್ಸ್ ತನ್ನದಾಗಿಸಿಕೊಂಡ್ರು. ಯು ಮುಂಬಾ ಪರ ಅಭಿಷೇಕ್ ಸಿಂಗ್ 13 ಪಾಯಿಂಟ್ಸ್ , ವಿ. ಅಜಿತ್ ಕುಮಾರ್ 11 ಪಾಯಿಂಟ್ಸ್ ತನ್ನದಾಗಿಸಿಕೊಂಡ್ರು.

ಈ ಪಂದ್ಯದ ಗೆಲುವಿನ ಮೂಲಕ ಪಾಟ್ನಾ ಪೈರೇಟ್ಸ್ ಟೇಬಲ್ ಟಾಪರ್ ಆಗಿದ್ದು, 17 ಪಂದ್ಯಗಳಲ್ಲಿ 12 ಜಯಗಳಿಂದ ಒಟ್ಟು 65 ಪಾಯಿಂಟ್ಸ್ ಕಲೆಹಾಕಿದೆ. ಎರಡನೇ ಸ್ಥಾನದಲ್ಲಿ ಹರಿಯಾಣ ಸ್ಟೀಲರ್ಸ್ 58 ಪಾಯಿಂಟ್ಸ್ ಮೂಲಕ ಸ್ಥಾನ ಪಡೆದಿದೆ. ದಬಾಂಗ್ ಡೆಲ್ಲಿ 57 ಪಾಯಿಂಟ್ಸ್‌ನಿಂದ ಮೂರನೇ ಸ್ಥಾನಕ್ಕೆ ಕುಸಿದಿದೆ.

Story first published: Tuesday, February 8, 2022, 22:34 [IST]
Other articles published on Feb 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X