ಟೋಕಿಯೋ: ಒಲಿಂಪಿಕ್ಸ್‌ನಂತೆಯೇ ಪ್ರೇಕ್ಷಕರಿಲ್ಲದೆ ಉದ್ಘಾಟನೆಯಾಯಿತು ಪ್ಯಾರಾಲಿಂಪಿಕ್ಸ್

ಟೋಕಿಯೋ, ಆಗಸ್ಟ್ 24: ಕೊರೊನಾವೈರಸ್‌ನ ಆತಂಕದ ಮಧ್ಯೆಯೇ ಈ ಬಾರಿಯ ಪ್ಯಾರಾಲಿಂಪಿಕ್ಸ್ ಕೂಡ ಜಪಾನ್‌ನ ಟೋಕಿಯೋ ನಗರದಲ್ಲಿ ಉದ್ಘಾಟನೆ ಕಂಡಿದೆ. ಒಲಿಂಪಿಕ್ಸ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನಡೆದ ಅದೇ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪ್ಯಾರಾಲಿಂಪಿಕ್ಸ್ ಕೂಡ ಉದ್ಘಾಟನೆ ಕಂಡಿದೆ.

ಜಪಾನ್‌ನ ಚಕ್ರವರ್ತಿ ನಡುಹಿಟೋ ಈ ಕ್ರೀಡಾಕೂಟಕ್ಕೆ ಚಾಲನೆಯನ್ನು ನೀಡುವ ಮೂಲಕ ಅಧಿಕೃತವಾಗಿ ಉದ್ಘಾಟನೆಯಾಗಿದೆ. "ವಿ ಹ್ಯಾವ್ ವಿಂಗ್" (ನಮಗೆ ರೆಕ್ಕೆಗಳಿವೆ) ಎಂಬ ಧ್ಯೇಯವಾಕ್ಯದಡಿಯಲ್ಲಿ ಈ ಕ್ರೀಡಾಕೂಟವನ್ನು ನಡೆಸಲಾಗುತ್ತಿದೆ. ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಪತಿ ಡೌಗ್ಲಾಸ್ ಎಮ್‌ಹಾಫ್, ಅಂತರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿ ಅಧ್ಯಕ್ಷ ಆಂಡ್ರ್ಯೂ ಪಾರ್ಸನ್ಸ್ ಮತ್ತು ಅಂತರಾಷ್ಟ್ರೀಯ ಒಲಿಂಪಿಕ್ ಅಧ್ಯಕ್ಷ ಥಾಮಸ್ ಬ್ಯಾಚ್ ಈ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಅಫ್ಘಾನಿಸ್ತಾನ-ಪಾಕಿಸ್ತಾನ ಏಕದಿನ ಸರಣಿ ಶ್ರೀಲಂಕಾದಿಂದ ಪಾಕಿಸ್ತಾನಕ್ಕೆ ಸ್ಥಳಾಂತರಅಫ್ಘಾನಿಸ್ತಾನ-ಪಾಕಿಸ್ತಾನ ಏಕದಿನ ಸರಣಿ ಶ್ರೀಲಂಕಾದಿಂದ ಪಾಕಿಸ್ತಾನಕ್ಕೆ ಸ್ಥಳಾಂತರ

ಸಾಕಷ್ಟು ವರ್ಷಣರಂಜಿತವಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಚಮತ್ಕಾರಿ ಪ್ರದರ್ಶನಗಳು, ರೋಮಾಂಚಕ ಸಂಗೀತ ಮತ್ತು ಸಿಡಿಮದ್ದುಗಳು ಪ್ರೇಕ್ಷಕರ ಕಣ್ಮನ ಸೆಳೆದಿದೆ.

ಜಪಾನ್‌ನಲ್ಲಿ ಟೋಕಿಯೋ ಒಲಿಂಪಿಕ್ಸ್ ಮುಕ್ತಾಯಗೊಂಡು ಎರಡು ವಾರಗಳ ಬಳಿಕ ಟೋಕಿಯದಲ್ಲೇ ಪ್ಯಾರಾಲಿಂಪಿಕ್ಸ್ ಉದ್ಘಾಟನೆಯಾಗುತ್ತಿದೆ. ಯಶಸ್ವಿಯಾಗಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪ್ರದರ್ಶನ ನೀಡಿದ್ದ ಭಾರತ ಪ್ಯಾರಾಲಿಂಪಿಕ್ಸ್‌ನಲ್ಲೂ ಪದಕಗಳಿಗಾಗಿ ಸೆಣೆಸಲಿದೆ. ಒಟ್ಟು 54 ಭಾರತೀಯ ಸ್ಪರ್ಧಿಗಳು ವಿವಿಧ ಒಂಭತ್ತು ವಿಭಾಗಗಳಲ್ಲಿ ಭಾರತ ಪ್ರತಿನಿಧಿಸಲಿದ್ದಾರೆ.

ಮಂಗಳವಾರ ನಡೆಯುವ ಟೋಕಿಯೋ ಪ್ಯಾರಾಲಂಪಿಕ್ಸ್‌ ಆರಂಭೋತ್ಸವದಲ್ಲಿ ಭಾರತದ ಕೇವಲ 6 ಅಧಿಕಾರಿಗಳು ಮಾತ್ರ ಭಾಗಿಯಾಗಲಿದ್ದಾರೆ ಎಂದು ಚೆಫ್ ಡೆ ಮಿಶನ್ ಗುರುಶರಣ್ ಸಿಂಗ್ ಭಾನುವಾರ ಮಾಹಿತಿ ನೀಡಿದ್ದಾರೆ. ಪ್ಯಾರಾ ಆರ್ಚರಿ, ಪ್ಯಾರಾ ಅಥ್ಲೆಟಿಕ್ಸ್, ಪ್ಯಾರಾ ಬ್ಯಾಡ್ಮಿಂಟನ್, ಪ್ಯಾರಾ ಕ್ಯಾನೋಯಿಂಗ್, ಪ್ಯಾರಾ ಕ್ರೀಡೆ, ಪ್ಯಾರಾ ಪವರ್ ಲಿಫ್ಟಿಂಗ್, ಪ್ಯಾರಾ ಈಜು, ಪ್ಯಾರಾ ಟೇಬಲ್ ಟೆನಿಸ್ ಮತ್ತು ಪ್ಯಾರಾ ಟೇಕ್ವಾಂಡೋ ಸ್ಪರ್ಧೆಗಳಲ್ಲಿ ಭಾರತದ ಕ್ರೀಡಾಪಟುಗಳು ಭಾಗಿಯಾಗುತ್ತಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 15 - October 24 2021, 03:30 PM
ಶ್ರೀಲಂಕಾ
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, August 24, 2021, 22:06 [IST]
Other articles published on Aug 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X