Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಲೆಜೆಂಡ್ಸ್ ಆಫ್ ಚೆಸ್ ಟೂರ್ನಿಯಲ್ಲಿ ವಿಶ್ವನಾಥ್ ಆನಂದ್‌ಗೆ 7ನೇ ಸೋಲು

Anand suffers seventh loss in Legends of Chess tourney

ನವದೆಹಲಿ, ಜುಲೈ 29: ಕ್ರಿಕೆಟ್‌ಗೆ ಹೊರತಾಗಿ ಕ್ರೀಡೆಯಲ್ಲಿ ವಿಶ್ವದ ಗಮನವನ್ನು ಭಾರತದತ್ತ ಸೆಳೆದಿದ್ದ ಭಾರತದ ಹೆಮ್ಮೆಯ ಚೆಸ್ ಗ್ರ್ಯಾಂಡ್‌ ಮಾಸ್ಟರ್ ವಿಶ್ವನಾಥನ್ ಆನಂದ್‌ಗೆ ಯುಎಸ್‌ಡಿ 150,000 ಲೆಜೆಂಡ್ಸ್ ಆಫ್ ಚೆಸ್ ಟೂರ್ನಿಯಲ್ಲಿ 7ನೇ ಸೋಲಾಗಿದೆ.

8ನೇ ಸುತ್ತಿನ ಸ್ಪರ್ಧೆಯಲ್ಲಿ ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್, ವಿಶ್ವ ನಂ.3 ಶ್ರೇಯಾಂಕಿತ ಚೀನಾ ಸ್ಪರ್ಧಿ ಡಿಂಗ್ ಲಿರೆನ್ ವಿರುದ್ಧ 0.5-2.5ರ ಹಿನ್ನಡೆ ಅನುಭವಿಸಿದರು. ಮಂಗಳವಾರ ನಡೆದ ಸ್ಪರ್ಧೆಯಲ್ಲಿ ಆನಂದ್ ತನ್ನ ಮೊದಲ ಆಟವನ್ನು 22 ಮೂವ್‌ಗಳಲ್ಲೇ ಲಿರೆನ್‌ ಶರಣಾಗಿಸಿದರು.

ಚೈನೀಸ್ ಆಟಗಾರ ವಿರುದ್ಧ ಸೋಲುವ ಮೂಲಕ ಆನಂದ್ ಸತತ 6 ಪಂದ್ಯಗಳ ಸೋಲಿನ ಮುಖಭಂಗ ಅನುಭವಿಸಿದ್ದಾರೆ. ಆನಂದ್-ಲಿರೆನ್ ನಡುವಿನ ಎರಡನೇ ಆಟ 47 ಮೂವ್‌ಗಳಲ್ಲಿ ಡ್ರಾ ಎನಿಸಿತ್ತು. ಆದರೆ ಮೂರನೇ ಆಟದಲ್ಲಿ ಬ್ಲ್ಯಾಕ್ ಪೀಸ್ ಆರಿಸಿದ್ದ ಲಿರೆನ್ 41 ಮೂವ್‌ಗಳಲ್ಲೇ ಗೆಲುವು ತನ್ನದಾಗಿಸಿಕೊಂಡರು.

50ರ ಹರೆಯದ ಆನಂದ್ 9ನೇ ಸುತ್ತಿನಲ್ಲಿ ಉಕ್ರೇನ್‌ನ ವಾಸಿಲ್ ಇವಾಂಚುಕ್ ಅವರನ್ನು ಎದುರಿಸಲಿದ್ದಾರೆ.

Story first published: Wednesday, July 29, 2020, 12:40 [IST]
Other articles published on Jul 29, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+