ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಏಷ್ಯನ್ ಗೇಮ್ಸ್ 2018: ಭಾರತದ ಪದಕ ಭರವಸೆಯ ಟಾಪ್ ಸ್ಪರ್ಧಿಗಳಿವರು

Asian Games 2018: Top Indian medal contenders

ಜಕಾರ್ತಾ, ಆಗಸ್ಟ್ 16: ಪ್ರತಿಷ್ಠಿತ ಏಷ್ಯನ್ ಕ್ರೀಡಾಕೂಟ ಪ್ರಾರಂಭಗೊಳ್ಳಲು ಇನ್ನೊಂದೇ ದಿನ ಉಳಿದುಕೊಂಡಿದೆ. ಭಾರತದ ಪಾಲಿಗೆ ಒಲಿಂಪಿಕ್ಸ್ ಬಳಿಕ ಕೊಂಚ ಪ್ರತಿಷ್ಠೆಯ ಪಂದ್ಯವಾಗಿ ಏಷ್ಯನ್ ಗೇಮ್ಸ್ ಗುರುತಿಸಿಕೊಂಡಿದೆ. ಏಕೆಂದರೆ ಈ ಕ್ರೀಡಾಕೂಟಗಳಲ್ಲಿ ಚೀನಾ, ಜಪಾನ್, ಸೌತ್ ಕೊರಿಯಾ, ನಾರ್ತ್ ಕೊರಿಯಾ ಮತ್ತು ಉಜ್ಬೇಕಿಸ್ತಾನ್ ಇಂಥ ಅನೇಕ ಬಲಿಷ್ಟ ತಂಡಗಳು ಪಾಲ್ಗೊಳ್ಳುತ್ತಿವೆ.

ಯೋ-ಯೋ ಟೆಸ್ಟ್: 29ರ ಹರೆಯದ ಕೊಹ್ಲಿಗಿಂತ 32ರ ಸರ್ದಾರ್ ಫಿಟ್!ಯೋ-ಯೋ ಟೆಸ್ಟ್: 29ರ ಹರೆಯದ ಕೊಹ್ಲಿಗಿಂತ 32ರ ಸರ್ದಾರ್ ಫಿಟ್!

ಇಂಡೋನೇಷ್ಯಾದ ಜಕಾರ್ತಾದಲ್ಲಿ ಆಗಸ್ಟ 18ರಿಂದ ಸೆಪ್ಟೆಂಬರ್ 2ರ ವರೆಗೆ ನಡೆಯಲಿರುವ ಈ ಕ್ರೀಡಾ ಹಬ್ಬದಲ್ಲಿ ಭಾರತದ 572 ಕ್ರೀಡಾಳುಗಳು ಪಾಲ್ಗೊಳ್ಳುತ್ತಿದ್ದಾರೆ. ಕಳೆದ ಬಾರಿ ಸೌತ್ ಕೊರಿಯಾದ ಇಂಚಿಯಾನ್ ನಲ್ಲಿ ನಡೆದಿದ್ದ ಏಷ್ಯಾನ್ ಗೇಮ್ಸ್ ನಲ್ಲಿ ಭಾರತ ಪದಕಪಟ್ಟಿಯಲ್ಲಿ 8ನೇ ಸ್ಥಾನಗಳಿಸಿತ್ತು.

ಹಿಂದಿನ ಇಂಚಿಯಾನ್ ಗೇಮ್ಸ್ ನಲ್ಲಿ ಭಾರತಕ್ಕೆ ಒಟ್ಟು 11 ಚಿನ್ನ, 9 ಬೆಳ್ಳಿ ಮತ್ತು 37 ಕಂಚಿನ ಪದಕ ಸೇರಿ ಒಟ್ಟು 57 ಪದಕಗಳು ಲಭಿಸಿದ್ದವು. ಈ ಬಾರಿಗೆ ಇನ್ನಷ್ಟು ಹೊಸ ಪ್ರತಿಭೆಗಳು ಭಾರತ ತಂಡದಲ್ಲಿದ್ದಾರೆ. ಈ ಬಾರಿ ಭಾರತ ಕ್ರೀಡಾತಂಡ ಸಾಕಷ್ಟು ಬಲಿಷ್ಟವಾಗಿದೆ ಕೂಡ. ಏಷ್ಯನ್ ಗೇಮ್ಸ್ ನಲ್ಲಿ ಭಾರತ ಪರ ಪದಕದ ನಿರೀಕ್ಷೆ ಮೂಡಿಸಿರುವ ಟಾಪ್ ಸ್ಪರ್ಧಿಗಳ ಮಾಹಿತಿ ಇಲ್ಲಿದೆ.

ಶೂಟಿಂಗ್

ಶೂಟಿಂಗ್

ದೊಡ್ಡ ಕ್ರೀಡಾಕೂಟಗಳಲ್ಲಿ ಭಾರತದಕ್ಕೆ ಹೆಚ್ಚು ಪದಕಗಳು ತರುವ ವಿಭಾಗ ಶೂಟಿಂಗ್. ಏಪ್ರಿಲ್ ತಿಂಗಳಲ್ಲಿ ನಡೆದಿದ್ದ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ ನಲ್ಲೂ ಶೂಟಿಂಗ್ ನಲ್ಲಿ ಹೆಚ್ಚಿನ ಪದಕಗಳು ಲಭಿಸಿದ್ದವು. ಐಎಸ್ಎಸ್ಎಫ್ ಶೂಟಿಂಗ್ ವರ್ಲ್ಡ್ ಕಪ್ ನಲ್ಲಿ ಚಿನ್ನ ಗೆದ್ದಿದ್ದ 16ರ ಹರೆಯದ ಭಾಕರ್ ಈ ಬಾರಿಯ ಏಷ್ಯನ್ ಗೇಮ್ಸ್ ಶೂಟಿಂಗ್ ನಲ್ಲೂ ಚಿನ್ನದ ಪದಕದ ನಿರೀಕ್ಷೆ ಮೂಡಿಸಿದ್ದಾರೆ. ಇವರೊಂದಿಗೆ ಇನ್ನೊಂದಿಷ್ಟು ಪ್ರತಿಭಾನ್ವಿತ ಯುವಕರಿದ್ದಾರೆ.

ಅಥ್ಲೆಟಿಕ್ಸ್

ಅಥ್ಲೆಟಿಕ್ಸ್

ಬಹು ಆಕರ್ಷಣೆಯ ಅಥ್ಲೆಟಿಕ್ಸ ನಲ್ಲಿ ಭಾರತ ಮಿಂಚಿದ್ದ ಕಡಿಮೆಯೆ. ಆದರೆ ದೊಡ್ಡ ಕ್ರೀಡಾಕೂಟಗಳಲ್ಲಿ ಅಥ್ಲೆಟಿಕ್ಸ್ ನಲ್ಲಿ ಭಾರತಕ್ಕೆ ಪದಕ ತಂದ ಸಾಕಷ್ಟು ಮಂದಿಯಿದ್ದಾರೆ. ಇವೆರೆಲ್ಲರ ಮಧ್ಯೆ ಸದ್ಯ ಮುಂಚೂಣಿಯಲ್ಲಿರುವವರು ಹಿಮಾ ದಾಸ್. ಹಿಮಾ ಅವರು ಮಹಿಳಾ 400 ಮೀ. ಓಟದಲ್ಲಿ ಪದಕ ಗೆಲ್ಲುವುದು ಬಹುತೇಕ ಖಚಿತ. ಇನ್ನುಳಿದಂತೆ ನೀರಜ್ ಚೋಪ್ರಾ (ಜಾವೆಲಿನ್ ಥ್ರೋ), ಸೀಮಾ ಪೂನಿಯಾ (ಡಿಸ್ಕಸ್ ಥ್ರೋ), ದ್ಯುತಿ ಚಂದ್ (100 ಮೀ.) ಅವರೂ ಪದಕದ ಆಸೆ ಮೂಡಿಸಿದ್ದಾರೆ.

ರಸ್ಲಿಂಗ್

ರಸ್ಲಿಂಗ್

ರಸ್ಲಿಂಗ್ ನಲ್ಲಿ ಭಾರತ ಹೊಳೆಯತೊಡಗಿದ್ದು 2008ರ ಬೀಜಿಂಗ್ ಒಲಿಂಪಿಕ್ಸ್ ನಿಂದೀಚೆಗೆ. ಅದರಲ್ಲೂ ಮಹಿಳಾ ವಿಭಾಗದ ರಸ್ಲಿಂಗ್ ನಲ್ಲಿ ಭಾರತ ಮಿಂಚಿದ್ದು ಪೋಗಟ್ ಕುಟುಂಬದಿಂದಾಗಿ. ರಸ್ಲಿಂಗ್ ವಿಭಾಗದಲ್ಲಿ ಭಾರತಕ್ಕೆ ಪದಕ ತರಬಲ್ಲವರ ಸಾಲಿನಲ್ಲಿ ಬಜರಂಗ್ ಪೂನಿಯಾ (65 ಕೆಜಿ), ಸುಶೀಲ್ ಕುಮಾರ್, ವಿನೇಶ್ ಪೋಗಟ್ (50 ಕೆಜಿ) ಇದ್ದಾರೆ.

ಬ್ಯಾಡ್ಮಿಂಟನ್

ಬ್ಯಾಡ್ಮಿಂಟನ್

ಕ್ರೀಡಾಕೂಟಗಳ ಸಂದರ್ಭ ಜಗತ್ತು ಭಾರತವನ್ನು ಗಮನಿಸೋ ಸ್ಪರ್ಧಾ ವಿಭಾಗದಲ್ಲಿ ಬ್ಯಾಡ್ಮಿಂಟನ್ ಕೂಡ ಒಂದು. ಇತ್ತೀಚಿನ ಸ್ಟಾರ್ ಆಟಗಾರ್ತಿ ಪಿವಿ ಸಿಂಧು, ಅನುಭವಿ ಸೈನಾ ನೆಹ್ವಾಲ್, ಭರವಸೆಯ ಆಟಗಾರ ಕಿದಂಬಿ ಶ್ರೀಕಾಂತ್ ಅವರಿಂದ ಏಷ್ಯನ್ ಗೇಮ್ಸ್ ಪದಕ ನಿರೀಕ್ಷಿಸಬಹುದು.

ಟೆನಿಸ್

ಟೆನಿಸ್

ಲಿಯಾಂಡರ್ ಪೇಸ್-ಮಹೇಶ್ ಭೂಪತಿ ಭಾರತ ಪರ ಟೆನಿಸ್ ನಲ್ಲಿ ಪಾರಮ್ಯ ಮೆರೆದಿದ್ದ ಕಾಲವಿತ್ತು. ಆದರೆ ಈಗಲೂ ಭಾರತ ಟೆನಿಸ್ ನಲ್ಲಿ ಆಗೀಗ ತನ್ನ ಇರುವಿಕೆಯನ್ನು ತೋರಿಸಿಕೊಳ್ಳುತ್ತಲೇ ಇದೆ. ಈ ಬಾರಿಯ ಏಷ್ಯನ್ ಗೇಮ್ಸ್ ನಲ್ಲಿ ರೋಹನ್ ಬೋಪಣ್ಣ, ದಿವಿಜ್ ಶರಣ್ ಮತ್ತು ರಾಜು ಕುಮಾರ್ ರಮಾನಾಥನ್ ಮಿಂಚಬಲ್ಲರು.

ಬಾಕ್ಸಿಂಗ್

ಬಾಕ್ಸಿಂಗ್

ಮೇರಿ ಕೋಮ್ ಮತ್ತು ವಿಜೇಂದರ್ ಸಿಂಗ್ ಅವರಿಂದಾಗಿ ಬಾಕ್ಸಿಂಗ್ ವಿಭಾಗದಲ್ಲಿ ಭಾರತ ಮಿಂಚಿತ್ತು. ಈ ಬಾರಿ ವಿಕಾಸ್ ಕೃಷ್ಣನ್ (75 ಕೆಜಿ), ಶಿವ ತಾಪ (60 ಕೆಜಿ), ಸೋನಿಯಾ ಲಾದರ್ (57 ಕೆಜಿ) ಅವರ ಪದಕಗಳನ್ನು ನಿರೀಕ್ಷಿಸಬಹುದು.

ಜಿಮ್ನಾಸ್ಟಿಕ್

ಜಿಮ್ನಾಸ್ಟಿಕ್

ಜಿಮ್ನಾಸ್ಟಿಕ್ ನಲ್ಲಿ ಭಾರತ ಗುರುತಿಸಿಕೊಂಡಿದ್ದು ಇತ್ತೀಚೆಗೆ ಅಂದರೆ 2-3 ವರ್ಷಗಳಿಂದೀಚೆಗೆಯಷ್ಟೆ. ದೀಪಾ ಕರ್ಮಾಕರ್ ಜಿಮ್ನಾಸ್ಟಿಕ್ ಸ್ಪರ್ಧೆಗಿಳಿದಿದ್ದಾರೆಂದರೆ ಅಲ್ಲೊಂದು ಪದಕ ಗ್ಯಾರಂಟಿ ಅನ್ನುವಂತ ಭರವಸೆ. ಕಾಮನ್ವೆಲ್ತ್ ಗೇಮ್ಸ್ ನಿಂದ ದೀಪಾ ಹೊರಗಿದ್ದರು. ಮೊಣಕಾಲದ ಗಾಯ ಇದಕ್ಕೆ ಕಾರಣವಾಗಿತ್ತು. ಆದರೆ ಏಷ್ಯನ್ ಗೇಮ್ಸ್ ನಲ್ಲಿ ದೀಪಾ ಪದಕ ಗೆಲ್ಲೋದು ಖಚಿತ.

ಟೇಬಲ್ ಟೆನಿಸ್

ಟೇಬಲ್ ಟೆನಿಸ್

ಮಣಿಕ ಭಾತ್ರಾ ಹೆಸರೂ ಭಾರತದ ಕ್ರೀಡಾ ರಂಗಕ್ಕೆ ಹೊಸತೇ. ಅದೂ ಟೇಬಲ್ ಟೆನಿಸ್ ನಲ್ಲಿ ಭಾರತ ಗಮನ ಸೆಳೆಯುತ್ತಿರುವುದೂ ಇತ್ತೀಚೆಗೆ. ಗೋಲ್ಡ್ ಕೋಸ್ಟ್ ಗೇಮ್ಸ್ ನಲ್ಲಿ ಮಣಿಕಾ ಮಹಿಳಾ ಟೇಬಲ್ಸ ಟೆನಿಸ್ ವೈಯಕ್ತಿಕ ಮತ್ತು ತಂಡ ಎರಡರಲ್ಲೂ ಚಿನ್ನ ಬಾಚಿಕೊಂಡಿದ್ದರು. ಏಷ್ಯನ್ ಗೇಮ್ಸ್ ನಲ್ಲೂ ಮಣಿಕ ಚಿನ್ನದ ಮಿಂಚು ತರಬಲ್ಲ ಹುಡುಗಿಯೆ.

Story first published: Thursday, August 16, 2018, 19:17 [IST]
Other articles published on Aug 16, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X