ಬಹ್ರೇನ್ GP: ರೋಮಾಂಚನಕಾರಿ ಹೋರಾಟದಲ್ಲಿ ಗೆದ್ದು ಶುಭಾರಂಭ ಮಾಡಿದ ಹ್ಯಾಮಿಲ್ಟನ್

ರೋಮಾಂಚನಕಾರಿ ಪಂದ್ಯದಲ್ಲಿ ಅತ್ಯದ್ಭುತ ಪ್ರದರ್ಶನ ನೀಡುವ ಮೂಲಕ ತನ್ನ ಚಾಲನಾ ಚಾಕಚಕ್ಯತೆಯ ಅತ್ಯುತ್ತಮ ಪ್ರದರ್ಶನ ನೀಡಿದ ಲೂಯಿಸ್ ಹ್ಯಾಮಿಲ್ಟನ್ ಗೆಲುವು ಸಾಧಿಸಿದ್ದಾರೆ. ಚಾರ್ಜಿಂಗ್ ಮ್ಯಾಕ್ಸ್ ವರ್ಸ್ಟಪ್ಪೆನ್ ಜೊತೆಗೆ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಹ್ಯಾಮಿಲ್ಟನ್ ತಮ್ಮ ಅನುಭವ ಹಾಗೂ ಚಾಕಚಕ್ಯತೆಯ ಮೂಲಕ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು.

ಈ ಗೆಲುವಿನ ಮೂಲಕ ವಿಶ್ವ ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್ ತಮ್ಮ ವೃತ್ತಿ ಜೀವನದಲ್ಲಿ 96ನೇ ಫಾರ್ಮುಲಾ ಒನ್ ಗೆಲುವು ಸಾಧಿಸಿದ್ದಾರೆ. ಇದು 2015ರ ಬಳಿಕ ಹ್ಯಾಮಿಲ್ಟನ್ ಋತುವಿನ ಆರಂಭದ ಪ್ರಥಮ ಗೆಲುವಾಗಿದೆ. ಗೆಲುವಿನ ಬಳಿಕ ಮಾತಮಾಡಿದ ಹ್ಯಾಮಿಲ್ಟನ್ "ಮೊದಲನೆಯದಾಗಿ ಸುದೀರ್ಘ ಕಾಲದ ಬಳಿಕ ನಾನು ಅಭಿಮಾನಿಗಳನ್ನು ನೋಡುತ್ತಿದ್ದೇನೆ" ಎಂದು ಪ್ರತಿಕ್ರಿಯಿಸಿದ್ದಾರೆ.

"ಇದೊಂದು ಅತ್ಯಂತ ಕಠಿಣವಾದ ರೇಸ್‌ ಆಗಿತ್ತು. ಮೊದಲೇ ನಿಲ್ಲಿಸುವುದರಿಂದ ಇದು ಬಹಳ ಕಠಿಣವಾಗಿರಲಿದೆ ಎಂದು ನಮಗೆ ಅರಿವಾಗಿತ್ತು. ನಾವು ಸಾಧ್ಯವಾದಷ್ಟು ವೇಗವಾಗಿ ಮುಗಿಸಬೇಕಾಗಿತ್ತು. ಅದನ್ನು ಮಾಡಲು ಯಾವಾಗಲೂ ಸಾಕಷ್ಟು ವಿಶೇಷವಾಗಿರುತ್ತದೆ" ಎಂದು ಹ್ಯಾಮಿಲ್ಟನ್ ಹೇಳಿದ್ದಾರೆ.

ಫಲಿತಾಂಶಗಳು:

1. ಲೆವಿಸ್ ಹ್ಯಾಮಿಲ್ಟನ್ (ಮರ್ಸಿಡಿಸ್) 1 ಗಂ 32 ನಿಮಿಷಗಳು 03.897 ಸೆಕೆಂಡ್

2. ಮ್ಯಾಕ್ಸ್ ವರ್ಸ್ಟಪ್ಪೆನ್ (ರೆಡ್ ಬುಲ್) + 0.745 ಸೆಕೆಂಡ್

3. ವಾಲ್ಟೆರಿ ಬಾಟಾಸ್ (ಮರ್ಸಿಡಿಸ್) 37.383,

4. ಲ್ಯಾಂಡೊ ನಾರ್ರಿಸ್ (ಮೆಕ್ಲಾರೆನ್) 46.466,

5.ಸರ್ಜಿಯೊ ಪೆರೆಜ್ ( ರೆಡ್ ಬುಲ್-ಹೋಂಡಾ) 52.047,

6. ಚಾರ್ಲ್ಸ್ ಲೆಕ್ಲರ್ಕ್ (ಫೆರಾರಿ) 59.090,

7. ಡೇನಿಯಲ್ ರಿಕಿಯಾರ್ಡೊ (ಮೆಕ್ಲಾರೆನ್) 1: 06.004,

8. ಕಾರ್ಲೋಸ್ ಸೈಂಜ್ ಜೂನಿಯರ್ (ಫೆರಾರಿ) 1: 07.100,

9. ಯೂಕಿ ಸುನೊಡಾ (ಆಲ್ಫಾಟೌರಿ) 1: 25.692,

10. ಲ್ಯಾನ್ಸ್ ಸ್ಟ್ರೋಲ್ (ಆಯ್ಸ್ಟನ್ ಮಾರ್ಟಿನ್) 1: 26.713,

11. ಕಿಮಿ ರಾಯ್ಕೊನೆನ್ (ಆಲ್ಫಾ ರೋಮಿಯೋ) 1: 28.864.

For Quick Alerts
ALLOW NOTIFICATIONS
For Daily Alerts
Story first published: Sunday, March 28, 2021, 23:45 [IST]
Other articles published on Mar 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X