ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ 2032ರ ಒಲಿಂಪಿಕ್ಸ್‌ ಕ್ರೀಡಾಕೂಟ

ಸಿಡ್ನಿ: ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ 2032ರ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯಲಿದೆ. ಇಂಟರ್ ನ್ಯಾಷನಲ್ ಒಲಿಂಪಿಕ್ ಕಮಿಟಿ (ಐಒಸಿ) ಈ ವಿಚಾರವನ್ನು ಖಾತರಿಪಡಿಸಿದೆ. ಟೋಕಿಯೋದಲ್ಲಿ ನಡೆದ 138 ಐಒಸಿ ಮೀಟಿಂಗ್ ವೇಳೆ ಆಸ್ಟ್ರೇಲಿಯಾದಲ್ಲಿ 2032ರ ಒಲಿಂಪಿಕ್ಸ್ ಕ್ರೀಡಾಕೂಟ ನಡೆಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.

ಟೀಮ್ ಇಂಡಿಯಾ ಗೆಲುವಿನ ಸ್ಟಾರ್ ದೀಪಕ್ ಚಾಹರ್ ಹೊಸ ದಾಖಲೆ!ಟೀಮ್ ಇಂಡಿಯಾ ಗೆಲುವಿನ ಸ್ಟಾರ್ ದೀಪಕ್ ಚಾಹರ್ ಹೊಸ ದಾಖಲೆ!

ಸ್ಪೇನ್ ಮತ್ತು ಜರ್ಮನಿ ದೇಶಗಳನ್ನು ಹಿಂದಿಕ್ಕಿರುವ ಆಸ್ಟ್ರೇಲಿಯಾ 2032ರ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವ ರೇಸ್ ಗೆದ್ದಿದೆ. ಕ್ವೀನ್ಸ್‌ಲ್ಯಾಂಡ್ ಪ್ರೀಮಿಯರ್ ಅನಾಸ್ತೇಸಿಯಾ ಪಲಾಸ್ಜ್‌ಜುಕ್ ಮತ್ತು ಬ್ರಿಸ್ಬೇನ್ ಲಾರ್ಡ್ ಮೇಯರ್ ಆಡ್ರಿಯನ್ ಸ್ಕ್ರಿನ್ನರ್ ಆಸ್ಟ್ರೇಲಿಯಾಕ್ಕೆ ಒಲಿಂಪಿಕ್ಸ್ ಆತಿಥ್ಯ ಸಿಗುವಲ್ಲಿ ಪ್ರಮುಖ ಪಾತ್ರವಹಿಸಿದರು.

"ನಾನು ಬಹಳ ಉತ್ಸುಕನಾಗಿದ್ದೇನೆ. ನನಗೆ ನನ್ನ ರಾಜ್ಯದ ಬಗ್ಗೆ, ನನ್ನ ಜನರ ಬಗ್ಗೆ ತುಂಬಾ ಹೆಮ್ಮೆಯೆನಿಸುತ್ತಿದೆ. ನನ್ನ ಜೀವನದಲ್ಲಿ ಇದು ನಡೆಯುತ್ತದೆ ಎಂದು ನಾನ್ಯಾವತ್ತೂ ಅಂದುಕೊಂಡಿರಲಿಲ್ಲ," ಎಂದು ಮಿಸ್ ಅನಾಸ್ತೇಸಿಯಾ ಪಲಾಸ್ಜ್‌ಜುಕ್ ಹೇಳಿದ್ದಾರೆ.

ಶ್ರೀಲಂಕಾ ವಿರುದ್ಧ ರೋಚಕ ಪಂದ್ಯ ಗೆಲ್ಲಿಸಿದ ದೀಪಕ್ ಚಾಹರ್, ಭುವನೇಶ್ವರ್ ಕುಮಾರ್!ಶ್ರೀಲಂಕಾ ವಿರುದ್ಧ ರೋಚಕ ಪಂದ್ಯ ಗೆಲ್ಲಿಸಿದ ದೀಪಕ್ ಚಾಹರ್, ಭುವನೇಶ್ವರ್ ಕುಮಾರ್!

ಒಲಿಂಪಿಕ್ ಕ್ರೀಡಾಕೂಟದ ಟೋಕಿಯೊ ಸಂಘಟನಾ ಸಮಿತಿಯ ಅಧ್ಯಕ್ಷ ಹಶಿಮೊಟೊ ಸೀಕೊ ಈ ಸಾಧನೆಗಾಗಿ ಆಸ್ಟ್ರೇಲಿಯಾ ಮತ್ತು ಬ್ರಿಸ್ಬೇನ್ ಎರಡನ್ನೂ ಅಭಿನಂದಿಸಿದವರಲ್ಲಿ ಮೊದಲಿಗರು. ಸದ್ಯ ಟೋಕಿಯೋದಲ್ಲೀಗ 2020ರ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯುತ್ತಿದೆ. ಜುಲೈ 23ರಿಂದ ಆಗಸ್ಟ್‌ 8ರ ವರೆಗೆ ಈ ಕ್ರೀಡಾಕೂಟ ನಡೆಯಲಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, July 21, 2021, 15:55 [IST]
Other articles published on Jul 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X