ಕಾಮನ್ ವೆಲ್ತ್ : ವೇಯ್ಟ್ ಲಿಫ್ಟಿಂಗ್ ನಲ್ಲಿ ಚಿನ್ನ ಗೆದ್ದ ಪೂನಮ್

Posted By:
CWG 2018: Weightlifting gold rush continues, Punam claims 5th for India

ಗೋಲ್ಡ್ ಕೋಸ್ಟ್ (ಆಸ್ಟ್ರೇಲಿಯಾ), ಏಪ್ರಿಲ್ 08: ಇಲ್ಲಿ ನಡೆದಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳ ಚಿನ್ನದ ಬೇಟೆ ಮುಂದುವರೆದಿದೆ.

ಶನಿವಾರ(ಏಪ್ರಿಲ್ 08)ದಂದು ನಡೆದ 69 ಕೆ.ಜಿ. ಮಹಿಳೆಯರ ವೇಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಪೂನಮ್ ಯಾದವ್ ಅವರು ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು. 2014ರ ಗ್ಲಾಸ್ಗೊ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ 63 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದನ್ನು ಇಲ್ಲಿ ಸ್ಮರಿಸಬಹುದು.

2018ರಲ್ಲಿ ಒಟ್ಟು 222 ಕೆ.ಜಿ(110 ಕೆಜಿ + 122 ಕೆಜಿ). ಭಾರ ಎತ್ತುವ ಮೂಲಕ ಪೂನಮ್ ಈ ಸಾಧನೆ ಮಾಡಿದ್ದಾರೆ. ಉತ್ತರಪ್ರದೇಶ ಮೂಲದ ಪೂನಮ್ ಅವರು ಈ ಬಾರಿ 63ಕೆಜಿ ಇಂದ 69ಕೆಜಿ ವಿಭಾಗಕ್ಕೆ ಬಡ್ತಿ ಹೊಂದಿದ್ದರು.

ಇಂಗ್ಲೆಂಡಿನ ಸಾರಾ ಡೇವಿಸ್ 217 ಕೆಜಿ (95 ಕೆಜಿ + 122 ಕೆಜಿ) ಎತ್ತುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟರು. ಫಿಜಿಯ ಅಪೊಲೊನಿಯಾ ವಾಯಿವೈ ಅವರು 216 ಕೆಜಿ (100 ಕೆಜಿ + 116 ಕೆಜಿ) ಎತ್ತಿ, ಕಂಚಿನ ಪದಕ ಗೆದ್ದುಕೊಂಡರು.

ಈ ಸಮಯಕ್ಕೆ ಇದಕ್ಕೂ ಮುನ್ನ ಮಿರಾಬಾಯಿ ಚಾನು(48 ಕೆಜಿ), ಸಂಜಿತಾ ಚಾನು (53 ಕೆಜಿ), ಸತೀಶ್ ಶಿವಲಿಂಗಮ್ (77ಕೆಜಿ) ಹಾಗೂ ವೆಂಕಟ್ ರಾಹುಲ್ ರಗಾಲ (85 ಕೆಜಿ) ಚಿನ್ನದ ಪದಕ ಗೆದ್ದಿದ್ದಾರೆ.

Story first published: Sunday, April 8, 2018, 11:07 [IST]
Other articles published on Apr 8, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ