ಶೂಟಿಂಗ್: ಫೇಸ್ಬುಕ್‌ನಿಂದ ಐಎಸ್‌ಎಸ್‌ಎಫ್‌ ಪೇಜ್ ಡಿಲೀಟ್

ನವದೆಹಲಿ: ದ ಇಂಟರ್ ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್‌ ಫೆಡರೇಶನ್‌ (ಐಎಸ್‌ಎಸ್‌ಎಫ್‌)ನ ಫೇಸ್ಬುಕ್ ಪೇಜ್ ಡಿಲೀಟ್ ಮಾಡಲಾಗಿದೆ. ಫೇಸ್ಬುಕ್‌ನಲ್ಲಿ ಅಹಿತಕರ ಪರಿಸ್ಥಿತಿ ಬರುತ್ತಿದೆ. ಶೂಟಿಂಗ್ ಜಾಗತಿಕ ಮಂಡಳಿಯ ಗಮನಕ್ಕೂ ಬಾರದೆ ಫೇಸ್ಬುಕ್ ಏಕಾಯೇಕಿ ತನ್ನ ಪೇಜ್ ಡಿಲೀಟ್ ಮಾಡಿದೆ ಎಂದು ಐಎಸ್‌ಎಸ್‌ಎಫ್‌ ಹೇಳಿದೆ.

ಐಪಿಎಲ್ 2020: ದಾಖಲೆ ಸನಿಹದಲ್ಲಿದ್ದಾರೆ ಕನ್ನಡಿಗ ಮನೀಷ್ ಪಾಂಡೆ

ಫೇಸ್ಬುಕ್ ಸಾಮಾಜಿಕ ಜಾಲತಾಣ ಬಳಸಿಕೊಂಡು ಅಪರಾಧಕ್ಕೆ ಸಂಬಂಧಿಸಿ, ಮುಖ್ಯವಾಗಿ ಮಾರಕಾಯುಧಗಳ ಚಿತ್ರವಿರುವ ಪೋಸ್ಟ್‌ಗಳ ಪ್ರಚಾರಕ್ಕೆ ನಿರ್ಬಂಧವಿದೆ. ಶೂಟಿಂಗ್ ಕ್ರೀಡೆಯಾದರೂ ಅದನ್ನು ಫೇಸ್ಬುಕ್ ಅಪರಾಧ ರೀತಿಯಲ್ಲಿ ನೋಡುತ್ತಿರುವುದರಿಂದ ಇಂಥ ಸಮಸ್ಯೆ ಬರುತ್ತಿದೆ.

ತನ್ನ ಗಮನಕ್ಕೂ ತಾರದೆ ಪೇಜ್ ಡಿಲೀಟ್ ಮಾಡಿರುವುದಕ್ಕೆ ಅಸಮಾಧಾನಗೊಂಡಿರುವ ಐಎಸ್‌ಎಸ್‌ಎಫ್‌, '#unblock_ISSF_facebook' ಎನ್ನುವ ಕ್ಯಾಂಪೇನ್ ಶುರು ಮಾಡಿದೆ. ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್ ಹೊರತುಪಡಿಸಿ, ಜಾಗತಿಕ ಶೂಟಿಂಗ್ ಬಾಡಿಯ ಪೇಜ್ ಅಪ್ಡೇಟ್ ಆಗುವುದಕ್ಕೋಸ್ಕರ ವಿಶ್ವದಾದ್ಯಂತ ಶೂಟಿಂಗ್ ಕ್ರೀಡಾಪಟುಗಳು ಎದುರು ನೋಡುತ್ತಿದ್ದಾರೆ.

ಇಂಡೋ-ಆಸಿಸ್ ಸರಣಿ: ಸ್ಟೀವ್ ಸ್ಮಿತ್ ಪಡೆಗೆ ಎಚ್ಚರಿಕೆ ನೀಡಿದ ಮಾಜಿ ಆಸ್ಟ್ರೇಲಿಯಾ ನಾಯಕ

ತಪ್ಪೇನೆಂದು ತಿಳಿಸದೆ, ವಿಚಾರವನ್ನೂ ಗಮನಕ್ಕೆ ತಾರದೆ ಫೇಸ್ಬುಕ್ ನಡೆದುಕೊಂಡಿರುವುದಕ್ಕೆ ಬೇಸರಗೊಂಡಿರುವ ಶೂಟಿಂಗ್ ಮಂಡಳಿ, ಸಹಾಯ ಮಾಡುವಂತೆ ಜನತೆಯಲ್ಲಿ ಕೇಳಿಕೊಂಡಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, November 6, 2020, 16:26 [IST]
Other articles published on Nov 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X