ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕ್ರೀಡಾಕ್ಷೇತ್ರದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೊಟ್ಟಿದ್ದೇನು?

Government allocates Rs 2826.92 crore to sports budget

ನವದೆಹಲಿ, ಫೆಬ್ರವರಿ 01: ಪ್ರಧಾನಿ ಮೋದಿ ಕನಸಿನ ಖೇಲೋ ಇಂಡಿಯಾ ಕಾರ್ಯಕ್ರಮದ ಯಶಸ್ಸಿನಿಂದ ಕೇಂದ್ರ ಸರ್ಕಾರ ಉತ್ತೇಜನಗೊಂಡಿದ್ದರೂ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಲಭ್ಯವಾಗಿಲ್ಲ. ಕಳೆದ ಬಜೆಟ್ ಅನುದಾನಕ್ಕೆ ಹೋಲಿಸಿದರೆ 50 ಕೋಟಿ ರು ಹೆಚ್ಚಿಗೆ ಸಿಕ್ಕಿದೆ.

ಬೇರುಮಟ್ಟದಿಂದ ಕ್ರೀಡಾರಂಗದಲ್ಲಿ ಅಭಿವೃದ್ಧಿಪಡಿಸಲು ಖೇಲೋ ಇಂಡಿಯಾ ಕಾರ್ಯಕ್ರಮಕ್ಕೆ 291.42 ಕೋಟಿ ರು ಅನುದಾನ ನೀಡಲಾಗಿದೆ.

ಕೇಂದ್ರ ಬಜೆಟ್ 2020: ಯಾವುದು ಏರಿಕೆ? ಯಾವುದು ಇಳಿಕೆ?

ಒಲಿಂಪಿಯನ್ ಗಳಿಗೆ ನೀಡಿರುವ ಪ್ರೋತ್ಸಾಹ ಧನ ಮೊತ್ತ 111 ಕೋಟಿ ರು ನಿಂದ 70 ಕೋಟಿ ರು ಗೆ ಇಳಿಸಲಾಗಿದೆ. ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ನೀಡುವ ಅನುದಾನಕ್ಕೂ ಕತ್ತರಿ ಬಿದ್ದಿದೆ.

ಒಟ್ಟಾರೆ, ಕ್ರೀಡಾ ಕ್ಷೇತ್ರಕ್ಕೆ 2826.92 ಕೋಟಿ ರು ನೀಡಲಾಗಿದ್ದು, ಕಳೆದ ಬಾರಿಗೆ ಹೋಲಿಸಿದರೆ ಹೆಚ್ಚುವರಿ 50 ಕೋಟಿ ರು ಸಿಕ್ಕಿದೆ.

ಇದೇ ವೇಳೆ ಭಾರತೀಯ ಕ್ರೀಡಾ ಪ್ರಾಧಿಕಾರ(SAI)ಕ್ಕೆ ನೀಡಲಾಗಿದ್ದ 615 ಕೋಟಿ ರು ಅನುದಾನವನ್ನು ಕಡಿತಗೊಳಿಸಿ ಪ್ರಸಕ್ತ ಸಾಲಿಗೆ 500 ಕೋಟಿ ರು ಮಾತ್ರ ನೀಡಲಾಗಿದೆ. ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾ ಮೈದಾನ, ರಾಷ್ಟ್ರೀಯ ಶಿಬಿರ, ಮೂಲ ಸೌಕರ್ಯ, ಕ್ರೀಡೋಪಕರಣ, ಲಾಜಿಸ್ಟಿಕ್ ಅಭಿವೃದ್ಧಿ ಎಲ್ಲವೂ SAI ಅಡಿಯಲ್ಲಿ ಬರಲಿದೆ.

Story first published: Saturday, February 1, 2020, 16:39 [IST]
Other articles published on Feb 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X