2032ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಆತಿಥ್ಯದ ಯೋಜನೆಯಲ್ಲಿ ಭಾರತ

ನವದೆಹಲಿ, ಮೇ 2: ಕೊರೊನಾವೈರಸ್ ಸೋಂಕು ಹತೋಟಿಗೆ ಬಂದ ಬಳಿಕ 2032ರ ಒಲಿಂಪಿಕ್ಸ್ ಗೇಮ್ಸ್ ಮತ್ತು ಇತರ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಿಗೆ ಆತಿಥ್ಯ ವಹಿಸಲು ಭಾರತ ಬಿಡ್‌ನಲ್ಲಿ ಪಾಲ್ಗೊಳ್ಳಲಿದೆ ಎಂದು ಕ್ರೀಡಾ ಮುಖ್ಯಸ್ಥ ನರೀಂದರ್ ಬಾತ್ರ ಎಎಫ್‌ಪಿಗೆ ತಿಳಿಸಿದ್ದಾರೆ.
ಕಾಮನ್ವೆಲ್ತ್ ಗೇಮ್ಸ್‌ಗೆ ಆತಿಥ್ಯ ವಹಿಸಿಕೊಂಡ ಹತ್ತು ವರ್ಷಗಳ ಬಳಿಕ ಭಾರತ ಒಂದಿಷ್ಟು ಪಾಠಗಳನ್ನು ಕಲಿಯಬೇಕಾಗಿದೆ. ಹಾಗಂತ ಪ್ರತಿಷ್ಠಿತ ಕ್ರೀಡಾಕೂಟ ಆಯೋಜಿಸುವ ಆಶಯದಿಂದ ಹಿಂದೆ ಸರಿಯಲಾಗುವುದಿಲ್ಲ ಎಂದು ಒಲಿಂಪಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ಹೇಳಿದ್ದಾರೆ.
2026ರ ಯೂತ್ ಒಲಿಂಪಿಕ್ಸ್ ಮತ್ತು 2032ರ ಒಲಿಂಪಿಕ್ಸ್ ಕ್ರೀಡಾಕೂಟಗಳ ಆತಿಥ್ಯಕ್ಕೆ ನಾವು ಗಂಭೀರವಾಗಿ ಮತ್ತು ಖಂಡಿತವಾಗಿಯೂ ಸ್ಪರ್ಧಿಸುತ್ತಿದ್ದೇವೆ,' ಎಂದು ಬಾತ್ರ ಹೇಳಿದ್ದಾರೆ. ಒಲಿಂಪಿಕ್ಸ್ ಆಯೋಜಿಸಲು ಭಾರತ ಈಗಾಗಲೇ ಇಂಟರ್ ನ್ಯಾಷನಲ್ ಒಲಿಂಪಿಕ್ಸ್ ಕಮಿಟಿಗೆ ಪತ್ರ ಬರೆದು ತನ್ನ ಆಸಕ್ತಿ ತೋರಿಸಿಕೊಂಡಿದೆ.
'ಒಲಿಂಪಿಕ್ಸ್ ಆತಿಥ್ಯದ ಬಗ್ಗೆ ಭಾರತ ಆಸಕ್ತಿವಹಿಸಿದೆಯಾದರೂ ವರದಿಯ ಪ್ರಕಾರ, ಥೈಲ್ಯಾಂಡ್, ರಷ್ಯಾ ಮತ್ತು ಕೊಲಂಬಿಯಾ ಕೂಡ 2026ರ ಯೂತ್ ಗೇಮ್ಸ್ ನಡೆಸುವ ರೇಸ್‌ನಲ್ಲಿದೆ. ಒಲಿಂಪಿಕ್ಸ್ ಬಿಡ್ ಬಗ್ಗೆ ಭಾರತವು 2025ರ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎನ್ನಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications