ಕಾಮನ್‌ವೆಲ್ತ್‌: ಟೇಬಲ್ ಟೆನ್ನಿಸ್‌ನಲ್ಲಿ ಮತ್ತೊಂದು ಚಿನ್ನ

Posted By:
Indian men table tennis team grabs gold

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಚಿನ್ನದ ಬೇಟೆ ಮುಂದುವರೆದಿದೆ. ಭಾರತದ ಕ್ರೀಡಾಳುಗಳು ಪ್ರತಿದಿನವೂ ಚಿನ್ನದ ಬೆಳೆ ತೆಗೆಯುತ್ತಿದ್ದಾರೆ. ಇಂದು ಪುರುಷರ ಟೇಬಲ್ ಟೆನ್ನಿಸ್‌ನಲ್ಲಿ ಚಿನ್ನದ ಪದಕ ಗೆದ್ದಿದೆ ಭಾರತ.

ನಿನ್ನೆ ತಾನೆ ಭಾರತದ ಮಹಿಳಾ ಟೇಬಲ್ ಟೆನ್ನಿಸ್ ತಂಡವು ಚಿನ್ನ ಗೆದ್ದು, ಇತಿಹಾಸ ನಿರ್ಮಿಸಿದ ಬೆನ್ನಲ್ಲೆ ಇಂದು ಪುರುಷರ ಟೇಬಲ್ ಟೆನ್ನಿಸ್ ತಂಡ ಚಿನ್ನ ಗೆದ್ದಿದೆ. ಇಂದು ಪುರುಷರ ಟೇಬಲ್ ಟೆನ್ನಿಸ್ ತಂಡವು ನೈಕೀರಿಯಾ ತಂಡದ ವಿರುದ್ಧ ಸುಲಭದ ಜಯ ಸಾಧಿಸಿ ಭಾರತದ ಪದಕ ಪಟ್ಟಿಗೆ ಮತ್ತೊಂದು ಪದಕ ಸೇರಿಸಿತು.

ಮೊದಲಿಗೆ ಅನುಭವಿ ಆಟಗಾರ ಶರತ್ ಕಮಲ್ ಅವರು ಭಾರತಕ್ಕೆ ಮೊದಲ ಲೀಡ್ ತಂದು ಕೊಟ್ಟರು, ಆ ನಂತರ ಆ ಮುನ್ನಡೆಯನ್ನು ಹೆಚ್ಚಿಸಿದವರು ಇಂಡಿಯಾದ ಬೆಸ್ಟ್ ಟೇಬಲ್ ಟೆನ್ನಿಸ್ ಆಟಗಾರ ಸತ್ತಿಯನ್ ಜ್ಞಾನಶೇಖರನ್, ಆ ನಂತರ ಸುಲಭವಾಗಿ ನೈಜೀರಿಯನ್ ತಂಡವನ್ನು ಬಗ್ಗುಬಡಿದ ಭಾರತ ಚಿನ್ನದ ನಗು ಬೀರಿತು.

ಪುರುಷರ ಟೇಬಲ್ ಟೆನ್ನಿಸ್ ಗೆಲುವಿನ ಮೂಲಕ ಭಾರತ 10 ಚಿನ್ನದ ಪದಕ ಜಯಿಸಿದಂತಾಗಿದ್ದು, ಈವರೆಗೆ ಒಟ್ಟು ಪದಕ 19 ಪದಕ ಜಯಿಸಿದೆ.

Story first published: Monday, April 9, 2018, 18:05 [IST]
Other articles published on Apr 9, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ