ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ನಮ್ಮೂರ ಪ್ರತಿಭೆ: ಅಂತರಾಷ್ಟ್ರೀಯ ಥ್ರೋಬಾಲ್‌ ಪ್ಲೇಯರ್‌ ಯೋಗಶ್ರೀ D.J.

Yogashree DJ

ಯೋಗಶ್ರೀ , ಅಂತರಾಷ್ಟ್ರೀಯ ಮಟ್ಟದ ಥ್ರೋ ಬಾಲ್ ಪ್ಲೇಯರ್‌. ರಾಜ್ಯ ಅಷ್ಟೇ ಅಲ್ಲದೆ ರಾಷ್ಟ್ರದಾದ್ಯಂತ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ ತನ್ನನ್ನು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡ ಕರ್ನಾಟಕದ ಹೆಮ್ಮೆಯ ಓಟಗಾರ್ತಿ. ಮೈಸೂರಿನ ನಂಜನಗೂಡು ಮೂಲದ ಯೋಗಶ್ರೀ D.J. ರಾಜ್ಯ ಮಟ್ಟದಲ್ಲಿ ಅಷ್ಟೇ ಅಲ್ಲದೆ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ , ಚಾಂಪಿಯನ್‌ಶಿಪ್‌ಗಳಲ್ಲಿ ಭಾಗಿಯಾಗಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ.

ಮೈಖೇಲ್ ಕನ್ನಡದ ಎಕ್ಸ್‌ಕ್ಲೂಸಿವ್ ''ನಮ್ಮೂರ ಪ್ರತಿಭೆ'' ಸರಣಿ ಲೇಖನದಲ್ಲಿ ಈ ಬಾರಿ ಅಂತರಾಷ್ಟ್ರೀಯ ಥ್ರೋಬಾಲ್‌ ಪ್ಲೇಯರ್‌ ಯೋಗಶ್ರೀ D.J. ಕುರಿತಾಗಿ ಪ್ರಮುಖ ವಿಚಾರಗಳನ್ನ ತಿಳಿಸಿಕೊಡುವ ಪ್ರಯತ್ನ ನಡೆಸಲಾಗಿದೆ. ಯೋಗಶ್ರೀ ಕುರಿತು ಕೆಲವು ಪ್ರಮುಖ ಮಾಹಿತಿಗಳು ಈ ಕೆಳಗಿದೆ.

ಬಾಲ್ಯ ಜೀವನ

ಬಾಲ್ಯ ಜೀವನ

1994ರಲ್ಲಿ ಜಗದೀಶ್ ಮತ್ತು ಪುಷ್ಪಲತಾ ದಂಪತಿಯ ಮಗಳೇ ಯೋಗಶ್ರೀ. ನಂಜನಗೂಡು ತಾಲೂಕಿನ ದೇವಿನೂರಿನ ಮೂಲದವರಾದ ಈಕೆ ಸಿಟಿಜನ್ ಆಂಗ್ಲ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರು.

ಪ್ರಾಥಮಿಕ ಶಾಲೆಯಲ್ಲಿ ಥ್ರೋ ಬಾಲ್ ಕ್ರೀಡೆಯಲ್ಲಿ ಆಸಕ್ತಿ ಹಾಗೂ ಓದುವುದರ ಜೊತೆಗೆ ಕ್ರೀಡೆಯಲ್ಲಿ ಮುಂದಿದ್ದಾರೆ. ಇದರ ಜೊತೆಗೆ ಸ್ನಾತಕೋತ್ತರ ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಡೆದಿದ್ದಾರೆ. ಎನ್‌ಸಿಸಿಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ಯಾಂಪ್‌ಗಳಲ್ಲಿ ಕೂಡ ಭಾಗಿಯಾಗಿದ್ದಾರೆ. 2013ರಲ್ಲಿ ವಿಶಾಖಪಟ್ಟಣದಲ್ಲಿ ನಡೆದ ಆಲ್‌ ಇಂಡಿಯಾ ನವ ಸೈನಿಕ್‌ ಕ್ಯಾಂಪ್‌ನಲ್ಲಿ ಬೆಸ್ಟ್ ಕೆಡಿಟ್ ಪಡೆದಿರುವ ಇವರು, ರಾಷ್ಟ್ರಮಟ್ಟದ ಫೈರಿಂಗ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಸಹ ಗೆದ್ದಿದ್ದಾರೆ.

2007ರಲ್ಲಿ ಕ್ರೀಡಾ ಜೀವನ ಆರಂಭ

2007ರಲ್ಲಿ ಕ್ರೀಡಾ ಜೀವನ ಆರಂಭ

ಯೋಗಶ್ರೀ ಆರನೇ ತರಗತಿಯಲ್ಲಿ ಓದುತ್ತಿದ್ದಾಗ, ಆಕೆಯ ಶಾಲೆಯ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಚಾಂಪಿಯನ್‌ ಆದರು. ಅವರು ಪ್ರಶಸ್ತಿ ಸ್ವೀಕರಿಸುವುದನ್ನ ನೋಡಿಗೆ ನನಗೆ ಸ್ಫೂರ್ತಿ ಸಿಕ್ಕಿದ್ದಲ್ಲದೆ, ನಾನೂ ಕೂಡ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಹಾಗೂ ಪ್ರಶಸ್ತಿ ಗೆಲ್ಲಬೇಕೆಂಬ ಹಂಬಲ ಶುರುವಾಯಿತು ಎಂದು ಯೋಗಶ್ರೀ ಹೇಳಿದ್ದಾರೆ. ಇದಾದ ಬಳಿಕ ಏಳನೇ ತರಗತಿಯಿಂದಲೇ ಜೋನ್ ಹಂತದ ಪಂದ್ಯಗಳನ್ನಾಡಲು ಶುರುಮಾಡಿದರು.

ಇನ್ನು ಯೋಗಶ್ರೀಗೆ ಮೊದಲ ದಿನದಿಂದಲೇ ಪೋಷಕರು ಪ್ರೋತ್ಸಾಹ ನೀಡಿದರು. ಮಗಳಿಗೆ ದೇವಿನೂರಿನಿಂದ ನಂಜನಗೂಡಿಗೆ ಪ್ರತಿನಿತ್ಯ ಪ್ರಯಾಣ ಬೆಳೆಸುವುದು ಕಷ್ಟವಾಗುತ್ತದೆ ಎಂದರಿತ ಪೋಷಕರು, ನಂಜನಗೂಡಿಗೆ ಶಿಫ್ಟ್ ಆಗುವ ಮೂಲಕ ಆಕೆಯ ಕ್ರೀಡಾ ಅಭ್ಯಾಸಕ್ಕೆ ನೆರವಾದರು.

ಕಾಲೇಜಿನಲ್ಲಿ ಎನ್‌ಸಿಸಿ ಸೇರಿಕೊಂಡ ಈಕೆ ಮೈಸೂರಿನಲ್ಲಿ ರಾಜ್ಯ ಮಟ್ಟದ ಸ್ಪರ್ಧೆಗೆ ತಯಾರಿ ನಡೆಸಬೇಕಾದ ಕಾರಣ ಪೋಷಕರು ಯೋಗಶ್ರೀ ಜೊತೆಗೆ ಮೈಸೂರಿಗೆ ಶಿಫ್ಟ್ ಆದರು. ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಗೆದ್ದ ವರ್ಷವೇ ನ್ಯಾಷನಲ್‌ ಹಂತಕ್ಕೆ ಆಯ್ಕೆಯಾಗಿದ್ದು, ಈಕೆಯ ಬೆಸ್ಟ್ ಮೂಮೆಂಟ್ ಆಗಿದೆ.

ನಮ್ಮೂರ ಪ್ರತಿಭೆ: ಬಲು ಕಠಿಣ 'ಐರನ್‌ಮ್ಯಾನ್ ಟ್ರಯಥ್ಲಾನ್' ಪೂರ್ತಿಗೊಳಿಸಿ ದಾಖಲೆ ಬರೆದ ಕನ್ನಡಿಗ ಶ್ರೇಯಸ್ ಹೊಸೂರು

ಯೋಗಶ್ರೀ ಕ್ರೀಡಾ ಸಾಧನೆಗಳು

ಯೋಗಶ್ರೀ ಕ್ರೀಡಾ ಸಾಧನೆಗಳು

* 2009-10ರಲ್ಲಿ ನಂಜನಗೂಡಿನಲ್ಲಿ ನಡೆದ ಹೆಚ್‌ಜಿಎಫ್‌ನಲ್ಲಿ ಟೂರ್ನಮೆಂಟ್‌ನಲ್ಲಿ ಪ್ರಥಮ ಸ್ಥಾನ

* 2010ರಲ್ಲಿ ರಾಜಸ್ತಾನದಲ್ಲಿ ನಡೆದ ನ್ಯಾಷನಲ್ ಫೆಡರೇಷನ್ ಕಪ್‌ನಲ್ಲಿ ದ್ವಿತೀಯ ಸ್ಥಾನ

* 2011-12 ಮಹಾರಾಷ್ಟ್ರದಲ್ಲಿ ನಡೆದ ನ್ಯಾಷನಲ್ ಜ್ಯೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ದ್ವಿತೀಯ ಸ್ಥಾನ

* 2015 ರಲ್ಲಿ ಧಾರವಾಡದಲ್ಲಿ ನಡೆದ ನ್ಯಾಷನಲ್ ಜ್ಯೂನಿಯರ್ ಥ್ರೋಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಸ್ಥಾನ

* 2015ರ ಕರ್ನಾಟಕ ಥ್ರೋಬಾಲ್‌ ಲೀಗ್ ಸೀಸನ್ ಒಂದರ ಬೆಸ್ಟ್ ಪ್ಲೇಯರ್ ಅವಾರ್ಡ್ ಪಡೆದಿರುವುದು ಇವರ ಮತ್ತೊಂದು ಹಿರಿಮೆಯಾಗಿದೆ.

* 2015ರಲ್ಲಿ ಬೆಂಗಳೂರಿನಲ್ಲಿ ನಡೆದ ಏಷ್ಯನ್ ಪೆಂಟಾಗ್ಲನ್ ಥ್ರೋ ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡದ ನಾಯಕಿಯಾಗಿ ಚಿನ್ನದ ಪದಕ ಗೆಲುವು

ಥ್ರೋ ಬಾಲ್ ಹಾಗೂ ಎನ್‌ಸಿಸಿ ಜೊತೆಗೆ ಓದಿನಲ್ಲಿ ಮುಂದಿದ್ದ ಯೋಗಶ್ರೀಗೆ ಹಲವು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.

ನಮ್ಮೂರ ಪ್ರತಿಭೆ: ಭಾರತದ ಉದಯೋನ್ಮುಖ ಟೇಬಲ್ ಟೆನಿಸ್ ತಾರೆ ಅರ್ಚನಾ ಕಾಮತ್

ಯೋಗಶ್ರೀ ಮುಂದಿರುವ ಪ್ರಮುಖ ಗುರಿ

ಯೋಗಶ್ರೀ ಮುಂದಿರುವ ಪ್ರಮುಖ ಗುರಿ

ಮೊದಲು ಡಿವಿಶನ್ ಲೆವೆಲ್ ಆಡಬೇಕೆಂದುಕೊಂಡಿದ್ದ ಯೋಗಶ್ರೀ, ಇಷ್ಟು ದೊಡ್ಡ ಮಟ್ಟಿಗೆ ಬೆಳೆದು ನಿಲ್ಲುತ್ತೇನೆ ಎಂದು ಸ್ವತಃ ಅವರೇ ಊಹಿಸಿರಲಿಲ್ಲ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡರು. ಭಾರತದ ನಾಯಕಿಯಾಗಿ ಹೆಚ್ಚು ಅಂತರಾಷ್ಟ್ರೀಯ ಮಟ್ಟದ ಟೂರ್ನಮೆಂಟ್‌ಗಳಲ್ಲಿ ಭಾಗಿಯಾಗಬೇಕು ಎಂದು ಗುರಿಯಿಟ್ಟಿರುವ ಯೋಗಶ್ರೀ, ಜೊತೆಗೆ ಸಿವಿಲ್ ಸರ್ವೀಸ್‌ ಪರೀಕ್ಷೆಗೆ ಸಹ ತಯಾರಿ ನಡೆಸುತ್ತಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರದ ಉದ್ಯೋಗ ಪಡೆಯುವ ಆಸೆಯನ್ನು ಹೊಂದಿದ್ದಾರೆ.

ಯೋಗಶ್ರೀಗೆ ಮುಂಬರುವ ದಿನಗಳಲ್ಲಿ ಹೆಚ್ಚಿನ ಅವಕಾಶ ಸಿಗಲಿ ಮತ್ತು ಭಾರತಕ್ಕೆ ಪದಕ ಗೆದ್ದು ತರಲಿ ಎಂಬುದು 'ಮೈಖೇಲ್ ಕನ್ನಡ'ದ ಆಶಯ.

Story first published: Tuesday, July 26, 2022, 14:00 [IST]
Other articles published on Jul 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X