ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆಯಲು ಸಜ್ಜಾಗಿದ್ದಾರೆ ನೊವಾಕ್ ಜೊಕೋವಿಕ್

Novak Djokovic knows history is on the line at Tokyo Olympics

ಟೋಕಿಯೋ: ಸರ್ಬಿಯಾದ ಸ್ಟಾರ್ ಟೆನಿಸ್ ಆಟಗಾರ ನೊವಾಕ್ ಜೊಕೋವಿಕ್ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಇತಿಹಾಸ ನಿರ್ಮಿಸಲು ಸಿದ್ಧರಾಗಿದ್ದಾರೆ. ವಿಶ್ವ ನಂ.1 ಜೊಕೋವಿಕ್ ಟೋಕಿಯೋ ಒಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್‌ನಲ್ಲೇನಾದರೂ ಚಾಂಪಿಯನ್ಸ್ ಆಗಿ ಮೂಡಿಬಂದರೆ ಟೆನಿಸ್ ಜಗತ್ತಿನಲ್ಲಿ ಮತ್ತೆಂದೂ ಸುಲಭಕ್ಕೆ ಮುರಿಯಲಾಗದ ವಿಶ್ವದಾಖಲೆ ನಿರ್ಮಾಣವಾಗಲಿದೆ.

ಟೋಕಿಯೋ ಒಲಿಂಪಿಕ್ಸ್ ವೇಳಾಪಟ್ಟಿ, ಫಲಿತಾಂಶ, ಪದಕಪಟ್ಟಿ ಸಂಪೂರ್ಣ ಮಾಹಿತಿ ಇಲ್ಲಿದೆ

ಈ ವರ್ಷ ನೊವಾಕ್ ಜೊಕೋವಿಕ್ ಈಗಾಗಲೇ ನಾಲ್ಕು ಗ್ರ್ಯಾಂಡ್‌ಸ್ಲ್ಯಾಮ್‌ಗಳನ್ನು ಗೆದ್ದ ದಾಖಲೆ ನಿರ್ಮಿಸಿದ್ದಾರೆ. ಈ ಸೀಸನ್ ಜೊಕೋವಿಕ್ ಪಾಲಿಗೆ ಚಿನ್ನದ ಗ್ರ್ಯಾಂಡ್‌ಸ್ಲ್ಯಾಮ್‌ ವರ್ಷವೆನಿಸಿದೆ. ಆಡಿದ ನಾಲ್ಕು ಪ್ರಮುಖ ಟೂರ್ನಿಗಳಲ್ಲೂ ಜೊಕೋವಿಕ್ ಚಾಂಪಿಯನ್‌ ಆಗಿ ಮೂಡಿ ಬಂದಿದ್ದರು.

ಒಲಿಂಪಿಕ್ಸ್‌ನಲ್ಲೂ ಚಾಂಪಿಯನ್‌ಪಟ್ಟ ಗೆದ್ದು ಹೊಸ ಇತಿಹಾಸ ನಿರ್ಮಿಸಬೇಕೆನ್ನುವ ಆಲೋಚನೆ ಜೊಕೋವಿಕ್ ತಲೆಯಲ್ಲೂ ಇದೆ. ಇದೇ ಕಾರಣಕ್ಕೆ ಜೊಕೋವಿಕ್ ತಡವಾಗಿಯಾದರೂ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಆಡುವುದಾಗಿ ತೀರ್ಮಾನಿಸಿ ನಿರ್ಧಾರ ಪ್ರಕಟಿಸಿದ್ದರು.

ಇಂಗ್ಲೆಂಡ್ ಪರ ಆಡಿದ ವಾಷಿಂಗ್ಟನ್ ಸುಂದರ್ ವಿಕೆಟ್ ಮುರಿದ ಮೊಹಮ್ಮದ್ ಸಿರಾಜ್: ವೀಡಿಯೋಇಂಗ್ಲೆಂಡ್ ಪರ ಆಡಿದ ವಾಷಿಂಗ್ಟನ್ ಸುಂದರ್ ವಿಕೆಟ್ ಮುರಿದ ಮೊಹಮ್ಮದ್ ಸಿರಾಜ್: ವೀಡಿಯೋ

ಈ ವರ್ಷ ಒಲಿಂಪಿಕ್ಸ್‌ನಲ್ಲೂ ಜೊಕೋವಿಕ್ ಗೆದ್ದರೆ ದಂತಕತೆಗಳಾದ ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್ ಸಾಧನೆಯನ್ನೂ ಮೀರಿಸಿದ ಸಾಧನೆಗಾಗಿ ಜೊಕೋವಿಕ್ ಮಿನುಗಲಿದ್ದಾರೆ. ಜುಲೈ 23ರಿಂದ ಆಗಸ್ಟ್ 8ರ ವರೆಗೆ ಟೋಕಿಯೋ ಒಲಿಂಪಿಕ್ಸ್ ಹಬ್ಬ ನಡೆಯಲಿದೆ.

Story first published: Thursday, July 22, 2021, 22:00 [IST]
Other articles published on Jul 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X