ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕೊಲೆ ಕೇಸ್: ಒಲಿಂಪಿಕ್ಸ್ ಪದಕ ವಿಜೇತ ಸುಶೀಲ್ ಕುಮಾರ್ ವಿರುದ್ಧ ಆರೋಪ ಪಟ್ಟಿ ಮಾಡಿದ ದೆಹಲಿ ನ್ಯಾಯಾಲಯ

Sushil kumar

ಕುಸ್ತಿಪಟು ಸಾಗರ್ ಧನಕರ್ ಹತ್ಯೆ ಪ್ರಕರಣದಲ್ಲಿ ಒಲಿಂಪಿಕ್ಸ್ ಡಬಲ್ಸ್ ಪದಕ ವಿಜೇತ ಸುಶೀಲ್ ಕುಮಾರ್ ಮತ್ತು ಇತರ 17 ಮಂದಿ ವಿರುದ್ಧ ದೆಹಲಿ ನ್ಯಾಯಾಲಯವು ಆರೋಪ ಪಟ್ಟಿ ಮಾಡಿದೆ. ಘಟನೆ ಸಂಬಂಧ ಇಬ್ಬರು ಆರೋಪಿಗಳು ಸದ್ಯ ತಲೆಮರೆಸಿಕೊಂಡಿದ್ದಾರೆ. ಕೊಲೆಯ ಆರೋಪ ಪಟ್ಟಿಯಲ್ಲಿ ಅವರ ಹೆಸರೂ ಇದೆ.

ಸುದ್ದಿ ಸಂಸ್ಥೆ ಎಎನ್‌ಐ ವರದಿಯ ಪ್ರಕಾರ, ಕೊಲೆ, ಕೊಲೆ ಯತ್ನ, ಅಕ್ರಮ ಸಭೆ, ಕ್ರಿಮಿನಲ್ ಪಿತೂರಿ ಸೇರಿದಂತೆ ಹಲವು ಆರೋಪಗಳನ್ನು ಈ ಆರೋಪಿಗಳ ಮೇಲೆ ಹೊರಿಸಲಾಗಿದೆ.

ಸುಶೀಲ್ ಕುಮಾರ್ ಅವರು ಮಾಜಿ ಅಂತಾರಾಷ್ಟ್ರೀಯ ಕುಸ್ತಿಪಟು ಸಾಗರ್ ರಾಣಾ ಅವರನ್ನು ಕೊಲ್ಲಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸುಮಾರು ಒಂದೂವರೆ ವರ್ಷಗಳ ಹಿಂದೆ (ಮೇ 4, 2021), ಸುಶೀಲ್ ಮತ್ತು ಇತರ ಕೆಲವು ಕುಸ್ತಿಪಟುಗಳು ಮಧ್ಯರಾತ್ರಿ ದೆಹಲಿಯ ಚತ್ರಸಾಲ್ ಸ್ಟೇಡಿಯಂನಲ್ಲಿ ಸಾಗರ್ ಮತ್ತು ಅವನ ಸ್ನೇಹಿತರ ಮೇಲೆ ದಾಳಿ ಮಾಡಿದರು.

ವಿಶ್ವದ ಬೆಸ್ಟ್ ಕಾರ್‌ ಅನ್ನು ನೀವು ಗ್ಯಾರೇಜ್‌ನಲ್ಲಿ ಇಟ್ಟಿದ್ದೀರಿ: ಉಮ್ರಾನ್ ಮಲಿಕ್ ಆಯ್ಕೆ ಬೆಂಬಲಿಸಿದ ಬ್ರೆಟ್‌ ಲೀವಿಶ್ವದ ಬೆಸ್ಟ್ ಕಾರ್‌ ಅನ್ನು ನೀವು ಗ್ಯಾರೇಜ್‌ನಲ್ಲಿ ಇಟ್ಟಿದ್ದೀರಿ: ಉಮ್ರಾನ್ ಮಲಿಕ್ ಆಯ್ಕೆ ಬೆಂಬಲಿಸಿದ ಬ್ರೆಟ್‌ ಲೀ

ಪೂರ್ವ ವ್ಯವಸ್ಥಿತ ದಾಳಿಯಿಂದ ಯುವ ಕುಸ್ತಿಪಟು ಸಾಗರ್ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದರು. ಸಾಗರ್ ಧನಕರ್ ಭಾರೀ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ ಎಂದು ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗಪಡಿಸಿದೆ.

ಈ ಘಟನೆ ನಡೆದ 19 ದಿನಗಳ ನಂತರ ಪೊಲೀಸರು ಸುಶೀಲ್ ಕುಮಾರ್ ಅವರನ್ನು ಮೇ 23, 2021 ರಂದು ಬಂಧಿಸಲಾಯಿತು. ಸುಶೀಲ್ ಕುಮಾರ್ ಕಳೆದ ವರ್ಷ ಜೂನ್ 2 ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣದಿಂದ ಮುಕ್ತಿ ಪಡೆಯಲು ಸುಶೀಲ್ ಮತ್ತು ಅವರ ವಕೀಲರು ಮಾಡಿದ ಪ್ರಯತ್ನ ಫಲಕಾರಿಯಾಗಿಲ್ಲ.

ಸುಶೀಲ್‌ಗೆ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಅವರ ವಕೀಲರು, ಭಾರತದ ಸ್ಟಾರ್ ಕುಸ್ತಿಪಟು ವಿರುದ್ಧ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ನ್ಯಾಯಾಲಯ ಸುಶೀಲ್ ಅರ್ಜಿಯನ್ನು ತಿರಸ್ಕರಿಸಿತ್ತು. ಘಟನೆಯ ವೇಳೆ ಸಿಸಿ ಕ್ಯಾಮೆರಾದ ದೃಶ್ಯಗಳಲ್ಲಿ ಸುಶೀಲ್ ಕುಮಾರ್ ಅವರ ಗುರುತು ಸ್ಪಷ್ಟವಾಗಿತ್ತು ಎಂದು ನ್ಯಾಯಾಲಯ ಹೇಳಿರುವುದು ಗಮನಾರ್ಹ.

ಸುಶೀಲ್ ಕುಮಾರ್ ಭಾರತೀಯ ಕುಸ್ತಿ ಇತಿಹಾಸದಲ್ಲಿ ಅತ್ಯಂತ ಸ್ಟಾರ್ ಕುಸ್ತಿಪಟು ಆಗಿದ್ದರು. ಅವರು 2008 ರಲ್ಲಿ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚು ಮತ್ತು 2012 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದರು. 2010ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದರು.

ಸುಶೀಲ್ ಕುಮಾರ್ 2010, 2014 ಮತ್ತು 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದಾರೆ. ಏಷ್ಯನ್ ಕ್ರೀಡಾಕೂಟದಲ್ಲಿ ಸುಶೀಲ್ ಚಿನ್ನ, ಬೆಳ್ಳಿ ಮತ್ತು ಕಂಚು ಗೆದ್ದಿದ್ದರು. ಅವರು ಐದು ಬಾರಿ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದು, ಐದು ಬಾರಿ ಚಿನ್ನ ಗೆದ್ದಿದ್ದಾರೆ. ಆದ್ರೆ ವೈಯಕ್ತಿಕ ದ್ವೇಷದಿಂದಾಗಿ ಸುಶೀಲ್‌ರ ಈ ನಡೆ ದೊಡ್ಡ ಮಟ್ಟಿಗೆ ಹಿನ್ನಡೆಯಾಗಿದ್ದು, ಯುವ ಕುಸ್ತಿ ಪಟುವನ್ನ ಕೊಲೆ ಮಾಡಿರುವ ಆರೋಪ ಎದುರಿಸುತ್ತಿರುವುದು ಕ್ರೀಡೆಗೂ ಮಾಡಿದ ಅಪಮಾನವಾಗಿದೆ.

Story first published: Wednesday, October 12, 2022, 21:13 [IST]
Other articles published on Oct 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X