ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಉದ್ದೀಪನ ಸೇವಿಸಿಲ್ಲ, ಮೂತ್ರದ ಮಾದರಿ ತಿರುಚಲಾಗಿದೆ: ಚಾನು

Sanjita Chanu, gold medallist at Commonwealth, provisionally suspended

ನವದೆಹಲಿ, ಜೂ. 2: ಉದ್ದೀಪನ ಸೇವನೆ ಆರೋಪದ ಮೇಲೆ ನಿನ್ನೆಯಷ್ಟೇ ಇಂಟರ್ ನ್ಯಾಷನಲ್‌ ವೇಟ್ ಲಿಫ್ಟಿಂಗ್ ಫೆಡರೇಷನ್ ನಿಂದ ತಾತ್ಕಾಲಿಕವಾಗಿ ಅಮಾನತುಗೊಂಡಿರುವ ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಲಿಫ್ಟರ್ ಸಂಜಿತಾ ಚಾನು, ತಾನು ಉದ್ದೀಪನ ಮದ್ದು ಸೇವಿಸಿಲ್ಲ. ಮೂತ್ರದ ಮಾದರಿ ತಿರುಚಿರುವ ಸಾಧ್ಯತೆಯಿದೆ ಎಂದಿದ್ದಾರೆ.

ಡೋಪ್ ಟೆಸ್ಟ್ ನಲ್ಲಿ ಪಾಸಿಟಿವ್ ವರದಿ ಬಂದಿದ್ದರಿಂದ ಐಡಬ್ಲ್ಯೂಎಫ್ ನಿಂದ ಅಮಾನತುಗೊಂಡ ಬಳಿಕ ಪ್ರತಿಕ್ರಿಯಿಸಿರುವ ಚಾನು, 'ನಾನು ಉದ್ದೀಪನ ಸೇವಿಸಿದ್ದೇನೆ ಎಂದು ನಂಬಲು ನನಗೇ ಸಾಧ್ಯವಾಗುತ್ತಿಲ್ಲ. ಯಾಕೆಂದರೆ ನಾನು ಅಂಥದ್ದೇನನ್ನೂ ಸೇವಿಸಿಲ್ಲ. ಪರೀಕ್ಷೆಗಾಗಿ ಸಂಗ್ರಹಿಸಲಾದ ಮೂತ್ರದ ಮಾದರಿಯನ್ನು ತಿರುಚಲಾಗಿದೆ ಎಂದು ನನಗನ್ನಿಸುತ್ತಿದೆ' ಎಂದಿದ್ದಾರೆ.

'ಭಾರತೀಯ ವೇಟ್ ಲಿಫ್ಟಿಂಗ್ ಫೆಡರೇಷನ್ ನನ್ನ ಬೆಂಬಲಕ್ಕಿದೆ. ನಾನು ಅಮಾಯಕಳು ಎಂಬುದನ್ನು ಸಾಬೀತುಪಡಿಸಲು ನನಗೆ ವೇಟ್ ಲಿಫ್ಟಿಂಗ್ ಫೆಡರೇಷನ್ ಸಹಾಯ ಮಾಡಲಿದೆ' ಎಂದು ಚಾನು ತಿಳಿಸಿದ್ದಾರೆ.

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ ನ ವನಿತಾ ವೇಟ್ ಲಿಫ್ಟಿಂಗ್ ನಲ್ಲಿ ಚಿನ್ನದ ಪದಕ ವಿಜೇತೆ ಸಂಜಿತಾ ಚಾನು ಅವರು ಇಂಟರ್ ನ್ಯಾಷನಲ್‌ ವೇಟ್ ಲಿಫ್ಟಿಂಗ್ ಫೆಡರೇಷನ್ (IWF) ನಿಂದ ಶುಕ್ರವಾರ ಅಮಾನತುಗೊಂಡಿದ್ದರು. ಉದ್ದೀಪನ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಚಾನು ಅವರನ್ನು ಅಮಾನತುಗೊಳಿಸಲಾಗಿತ್ತು.

ಗೋಲ್ಡ್ ಕೋಸ್ಟ್ ಗೇಮ್ಸ್ ನಲ್ಲಿ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಚಿನ್ನ ಗೆದ್ದಿದ್ದ ಚಾನು, 2014ರ ಗ್ಲಾಸ್ಕೋ ಕಾಮನ್‌ವೆಲ್ತ್ ಗೇಮ್ಸ್ ನಲ್ಲೂ 48 ಕೆಜಿ ವಿಭಾಗದಲ್ಲಿ ಬಂಗಾರದ ಪದಕ ಗೆದ್ದಿದ್ದರು.

ಗುರುವಾರವಷ್ಟೇ ಬಂದಿದ್ದ ಉದ್ದೀಪನ ಪರೀಕ್ಷೆ ಫಲಿತಾಂಶದಲ್ಲಿ ಚಾನು ಅವರು ನಿಷೇಧಿತ ಅನಾಬೋಲಿಕ್ ಸ್ಟೆರಾಯ್ಡ್ ಸೇವಿಸಿರುವುದು ಪತ್ತೆಯಾಗಿತ್ತು. ಆದರೆ ಪರೀಕ್ಷೆಗಾಗಿ ಚಾನು ಅವರಿಂದ ರಕ್ತ ಮತ್ತು ಮೂತ್ರದ ಮಾದರಿ ಸಂಗ್ರಹಿಸಿದ ದಿನಾಂಕವನ್ನು ಐಡಬ್ಲ್ಯೂಎಫ್ ಬಹಿರಂಗಪಡಿಸಿರಲಿಲ್ಲ.

ಈ ವಿಚಾರವಾಗಿ ಹೆಚ್ಚಿನ ಮಾಹಿಯನ್ನು ನೀಡಲು ಐಡಬ್ಲ್ಯೂಎಫ್ ನಿರಾಕರಿಸಿದೆಯಾದರೂ ಉದ್ದೀಪನ ಮದ್ದು ಸೇವಿಸಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಚಾನು ಅವರನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ ಎಂದು ತಿಳಿಸಿತ್ತು.

Story first published: Saturday, June 2, 2018, 12:24 [IST]
Other articles published on Jun 2, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X