ಭಾರತಕ್ಕೆ ನಾಲ್ಕನೆ ಪದಕ ತಂದ ವೆಂಕಟ್ ರಾಹುಲ್

Written By:
venkat-rahul-wins-fourth-gold-for-india

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2018ರಲ್ಲಿ ಭಾರತದ ವೇಯ್ಟ್ ಲಿಫ್ಟರ್‌ಗಳು ಪಾರಮ್ಯ ಮುಂದುವರಿಸಿದ್ದಾರೆ.

ಪುರುಷರ 85 ಕೆ.ಜಿ. ವಿಭಾಗದಲ್ಲಿ ವೆಂಕಟ್ ರಾಹುಲ್ ರಗಾಲಾ ಮೊದಲ ಸ್ಥಾನ ಗಳಿಸಿದರು. ಈ ಮೂಲಕ ದೇಶಕ್ಕೆ ನಾಲ್ಕನೇ ಚಿನ್ನದ ಪದಕವನ್ನು ತಂದಿತ್ತರು. ಒಟ್ಟು 338 ಕೆ.ಜಿ. ಭಾರವನ್ನು ಎತ್ತಿದರು.

ಭಾರತಕ್ಕೆ ಮತ್ತೊಂದು ಚಿನ್ನ ಗೆದ್ದುಕೊಟ್ಟ ವ್ಹೇಟ್‌ಲಿಫ್ಟರ್‌ ಸತೀಶ್‌ ಕುಮಾರ್‌

151 ಕೆಜಿ ಸ್ನ್ಯಾಚ್ ಹಾಗೂ ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ 187 ಕೆಜಿ ತೂಕವನ್ನು ಎತ್ತಿದರು. ಉಳಿದ ಸ್ಪರ್ಧಿಗಳು ಅವರ ಸರಿಸಮ ತೂಕ ಎತ್ತಲು ಸಾಧ್ಯವಾಗದ ಕಾರಣ ಪದಕ ರಾಹುಲ್ ಅವರ ಕೊರಳಿಗೆ ಒಲಿಯಿತು.

ಕಾಮನ್ ವೆಲ್ತ್ ಪಂದ್ಯ: ಚಿನ್ನ ಗೆದ್ದ ವ್ಹೇಟ್ ಲಿಫ್ಟರ್ ಸಂಜಿತಾ ಚಾನು

ಕ್ರೀಡಾಕೂಟದ ಮೂರನೇ ದಿನವಾದ ಶನಿವಾರ ವೇಯ್ಟ್ ಲಿಫ್ಟರ್ ಸತೀಶ್ ಕುಮಾರ್ ಶಿವಲಿಂಗಮ್ ಪುರುಷರು 77 ಕೆ.ಜಿ. ವಿಭಾಗದಲ್ಲಿ ಚಿನ್ನ ಜಯಿಸಿದ್ದರು.

ಭಾರತಕ್ಕೆ ಮೊದಲ ಚಿನ್ನ ತಂದಿತ್ತ ಮೀರಾಬಾಯಿ ಚಾನು

ಆಂಧ್ರಪ್ರದೇಶದ ಗುಂಟೂರಿನವರಾದ ವೆಂಕಟ್ ರಾಹುಲ್ ಅವರ ವಯಸ್ಸು 21. 2014ರಲ್ಲಿ ಚೀನಾದ ನಂಜಿಂಗ್ ನಲ್ಲಿ ನಡೆದ ಸಮ್ಮರ್ ಯೂತ್ ಒಲಿಂಪಿಕ್ಸ್‌ನಲ್ಲಿ 77 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಅದು ಯೂತ್ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ದೊರೆತ ಮೊದಲ ಪದಕವಾಗಿದೆ.

Story first published: Saturday, April 7, 2018, 18:49 [IST]
Other articles published on Apr 7, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ