ವ್ಹೇಟ್‌ಲಿಫ್ಟಿಂಗ್‌ನಲ್ಲಿ ಮತ್ತೊಂದು ಪದಕ: ದೀಪಕ್‌ ಲಥೇರ್‌ಗೆ ಕಂಚು

Posted By:
Weight lifter Deepak Lather won bronze in Commonwealth 2018

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಗೇಮ್ಸ್‌ 2018ರಲ್ಲಿ ಭಾರತದ ವ್ಹೇಟ್‌ ಲಿಫ್ಟರ್‌ಗಳು ತಮ್ಮ ಪಾರುಪತ್ಯ ಮುಂದುವರೆಸಿದ್ದಾರೆ. ಇಂದು ಭಾರತದ ದೀಪಕ್ ಲಥೇರ್‌ ಅವರು ವ್ಹೇಟ್‌ ಲಿಫ್ಟಿಂಗ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

ಪುರುಷರ 69 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಕೇವಲ 18ವರ್ಷದ ದೀಪಕ್ ಲಥೇರ್ ತಮ್ಮ ಮೊದಲ ಕಾಮನ್‌ವೆಲ್ತ್‌ ಕೂಟ ಪ್ರವಾಸದಲ್ಲೇ ಕಂಚು ಗೆದ್ದು ಬೀಗಿದ್ದಾರೆ. ದೀಪಕ್ ಅವರು 136 ಸ್ನಾಚ್ ಹಾಗೂ 159 ಕ್ಲೀನ್ ಆಂಡ್ ಜರ್ಕ್‌ ಸೇರಿ ಒಟ್ಟು 295 ಕೆ.ಜಿ ಭಾರ ಎತ್ತಿದ್ದಾರೆ.

ಕಾಮನ್ ವೆಲ್ತ್ ಪಂದ್ಯ: ಚಿನ್ನ ಗೆದ್ದ ವ್ಹೇಟ್ ಲಿಫ್ಟರ್ ಸಂಜಿತಾ ಚಾನು

ದೀಪಕ್ ಲಥೇರ್ ಅವರ ಕಂಚು ಸೇರಿದಂತೆ ಭಾರತವು ಕಾಮನ್‌ವೆಲ್ತ್‌ನಲ್ಲಿ ಈವರೆಗೆ ನಾಲ್ಕು ಪದಕಗಳನ್ನು ಗಳಿಸಿದ್ದು, ನಾಲ್ಕು ಪದಕಗಳು ವ್ಹೇಟ್‌ಲಿಫ್ಟಿಂಗ್‌ನಿಂದಲೇ ಬಂದಿರುವುದು ವಿಶೇಷ.

Weight lifter Deepak Lather won bronze in Commonwealth 2018

ಹರ್ಯಾಣದ ಶಾದಿಪುರ್ ಎಂಬ ಪುಟ್ಟ ಹಳ್ಳಿಯ ಯುವಕ ದೀಪಕ್ ಲಥೇರ್ ಎರಡು ವರ್ಷದ ಹಿಂದೆ ಯೂಥ್ ಕಾಮನ್‌ವೆಲ್ತ್‌ನಲ್ಲಿ ಭಾಗವಹಿಸಿ ಕೂಟ ದಾಖಲೆಯನ್ನು ಪುಡಿಗಟ್ಟಿದ್ದರು.

ಪುರುಷರ 69 ಕೆಜಿ ವಿಭಾಗದಲ್ಲಿ ಚಿನ್ನವು ವೇಲ್ಸ್‌ನ ಗರೇತ್ ಇವಾನ್ಸ್ ಅವರ ಪಾಲಾದರೆ ರಜತ ಪದಕವು ಇಂದಿಕಾ ದಿಸನಾಯಕೇ ಅವರ ಪಾಲಾಯಿತು.

ಕಾಮನ್‌ವೆಲ್ತ್‌: ಎರಡು ಪದಕ, ಹಲವು ಜಯ, ಕೆಲವು ಸೋಲು

ಭಾರತವು ಈವರೆಗೆ ಕಾಮನ್‌ವೆಲ್ತ್‌ನಲ್ಲಿ ಎರಡು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕವನ್ನು ಗೆದ್ದಿದ್ದು, ಈ ನಾಲ್ಕೂ ಪದಕಗಳು ವ್ಹೇಟ್‌ಲಿಫ್ಟಿಂಗ್‌ ವಿಭಾಗದಿಂದಲೇ ಬಂದಿರುವುದು ವಿಶೇಷ.

Story first published: Friday, April 6, 2018, 17:09 [IST]
Other articles published on Apr 6, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ