ವಿಶ್ವಕಪ್ ಸೆಮಿಫೈನಲ್ ತಲುಪಲು ಕಪಿಲ್ ಸೂತ್ರ

ನವದೆಹಲಿ, ಫೆ. 2 : ಭಾರತ ಕ್ರಿಕೆಟ್ ತಂಡದ ಪ್ರದರ್ಶನದ ವಿರುದ್ಧ ಮಾಜಿ ನಾಯಕ ಕಪಿಲ್ ದೇವ್ ಕಿಡಿಕಾರಿದ್ದಾರೆ. ಜತೆಗೆ ಪಂದ್ಯ ಗೆಲ್ಲುವ ತಂತ್ರವನ್ನು ಹೇಳಿಕೊಟ್ಟಿದ್ದಾರೆ.

ಇವರೇನು ಡ್ರೆಸ್ಸಿಂಗ್ ರೂಂ ನಲ್ಲಿ ಮೊಟ್ಟೆ ತಿನ್ನುತ್ತಿರುತ್ತಾರಾ? ಶತಕ ಹೊಡೆದಾಗ ಗೆಳತಿಯ ಕಡೆ ಗಾಳಿಯಲ್ಲಿ ಮುತ್ತು ಹಾರಿಬಿಡುವ ಸಂಪ್ರದಾಯ ಬೆಳೆದಿರುವುದು ನಿಜಕ್ಕೂ ವಿಷಾದನೀಯ, ಈ ರೀತಿ ಭಾರತ ತಂಡದ ವಿರುದ್ಧ ನೇರವಾಗಿ ಅಸಮಾಧಾನ ಹೊರಹಾಕಿರುವ ಮಾಜಿ ನಾಯಕ ಆಲ್ ರೌಂಡರ್ ಕಪಿಲ್ ದೇವ್ ಕ್ರಿಕೆಟ್ ವಿವಿಧ ಆಯಾಮಗಳನ್ನು ತೆರೆದಿಟ್ಟಿದ್ದಾರೆ.

cricket

ನಾವು ಕ್ರಿಕೆಟ್ ನ ಹೊಸ ಶಕೆಯಲ್ಲಿದ್ದೇವೆ. ಇದನ್ನೆಲ್ಲ ಒಪ್ಪಿಕೊಳ್ಳಬೇಕು ಎಂಬುದು ಗೊತ್ತಿದೆ. ಇಲ್ಲಾ ಇಂಥ ಘಟನಾಳಿಗಳನ್ನು ಈಗಾಗಲೇ ಸ್ವೀಕರಿಸಿ ಬಿಟ್ಟಿದ್ದೇವೆ. ಆದರೆ ಅಷ್ಟೇ ಉತ್ತಮ ಕ್ರಿಕೆಟ್ ಸಹ ಆಡಬೇಕಿದೆ ಎಂದು 1983ರ ವಿಶ್ವಕಪ್ ವಿಜೇತ ತಂಡದ ನಾಯಕ ಸಲಹೆ ನೀಡಿದ್ದಾರೆ.

ಕ್ರಿಕೆಟ್ ಇಂದು ಶಿಸ್ತಿನ ಆಟ ಎಂಬ ಹಣೆಪಟ್ಟಿ ಕಳಚಿಕೊಳ್ಳುತ್ತಿದೆ. ನಾವು ಟೆಸ್ಟ್ ಕ್ರಿಕೆಟ್ ಮೂಲಕ ತಂಡ ಕಟ್ಟಿದ್ದೆವು. ಆದರೆ ಇಂದು ಟಿ-20ಯೇ ಕ್ರಿಕೆಟ್ ಎಂಬಂತಾಗಿದೆ ಎಂದು ಹೇಳಿದ್ದಾರೆ.

ನನ್ನ ಪ್ರಕಾರ ಭಾರತಕ್ಕೆ ಸೆಮಿಫೈನಲ್ ಹಂತದ ಚಾನ್ಸ್ ಇದೆ. ಮೊದಲ 15 ಓವರ್ ಪಂದ್ಯದ ತೀರ್ಮಾನ ಮಾಡಲಿದೆ. ಮೊದಲ 15 ಓವರ್ ಳಿಗೆ ಕನಿಷ್ಠ 40 ರನ್ ಆದರೂ ಗಳಿಸಬೇಕು. ಆದರೆ ಯಾವುದೇ ವಿಕೆಟ್ ಕಳೆದುಕೊಳ್ಳಬಾರದು. ಈ ರೀತಿಯ ಆಟ ಪ್ರದರ್ಶನ ಮಾಡಿದರೆ 270 ರನ್ ಗಳಿಸಲು ಸಾಧ್ಯ. ಈ ವೇಳೆಗೆ 2 ರಿಂದ 3 ವಿಕೆಟ್ ಕಳೆದುಕೊಂಡರೆ ಪಂದ್ಯ ಕೈ ಬಿಟ್ಟಂತೆಯೇ ಎಂದು ಅಭಿಪ್ರಾಯಪಟ್ಟಿದ್ದಾರೆ.

Story first published: Monday, February 2, 2015, 20:00 [IST]
Other articles published on Feb 2, 2015

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ