ಕೆಚ್ಚೆದೆಯ ದಿಟ್ಟ ಪ್ರದರ್ಶನದ ನಡುವೆ ಸೋಲು ಕಂಡ ಭಾರತ

Posted By:

ಬೆಂಗಳೂರು, ಜೂ.12: ವಿಶ್ವಕಪ್ ಫುಟ್ಬಾಲ್ 2018ರ ಜಂಟಿ ಅರ್ಹತಾ ಪಂದ್ಯದಲ್ಲಿ ಬಲಿಷ್ಠ ಒಮಾನ್ ತಂಡದ ವಿರುದ್ಧ ಭಾರತ ತಂಡ ಉತ್ತಮ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ. ಕಂಠೀರವ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಒಮಾನ್ 2-1 ಗೋಲುಗಳ ಅಂತರದಲ್ಲಿ ಪಂದ್ಯ ಗೆದ್ದುಕೊಂಡಿದೆ. ಅದರೆ, ರೆಫ್ರಿಗಳ ಕೆಟ್ಟ ನಿರ್ಣಯ ಭಾರತದ ಸೋಲಿಗೆ ಕಾರಣವಾಯಿತು ಎಂದು ಇಂಡಿಯಾ ಕೋಚ್ ಸ್ಟೀಫನ್ ಕಾಂಸ್ಟಾಟೈನ್ ಅವರು ಟೀಕಿಸಿದ್ದಾರೆ.

ಭಾರತ ಜೂ.16 ರಂದು ಒಮನ್ ವಿರುದ್ಧ ಅದರದೇ ನೆಲದಲ್ಲಿ ಪಂದ್ಯ ಆಡಲು ತೆರಳಲಿದೆ. ವಿಶ್ವಕಪ್ ಗೆ ಅರ್ಹತಾ ಪಡೆಯಲು ಈ ಪಂದ್ಯ ಗೆಲ್ಲುವುದು ಭಾರತಕ್ಕೆ ಅನಿವಾರ್ಯವಾಗಿತ್ತು.

ಫಿಫಾ ಶ್ರೇಯಾಂಕ ಪಟ್ಟಿಯಲ್ಲಿ ಭಾರತಕ್ಕಿಂತ 40 ಸ್ಥಾನ ಮೇಲಿರುವ ಒಮಾನ್ 30 ಸೆಕೆಂಡ್‌ನಲ್ಲಿ 1-0 ಮುನ್ನಡೆ ಸಾಧಿಸಿತು. ಖಾಸಿಮ್ ಸೈದ್ ಮೊದಲ ಗೋಲು ಬಾರಿಸಿದರು.

26ನೇ ನಿಮಿಷದಲ್ಲಿ ಭಾರತದ ಉಪ ನಾಯಕ ಸುನೀಲ್ ಛೆಟ್ರಿ ಅದ್ಭುತ ಗೋಲು ಬಾರಿಸಿ 1-1 ಸಮಬಲಗೊಳಿಸಿದರು. ಚೆಟ್ರಿ ಭಾರತದ ಪರ 46ನೇ ಗೋಲು ಬಾರಿಸಿದರು. ಆದರೆ 40ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್(2 ಬಾರಿ ಪೆನಾಲ್ಟಿ ) ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಇಮಾದ್ ಅಲ್ ಹೊಸ್ನಿ ಒಮನ್‌ಗೆ 2-1 ಮುನ್ನಡೆ ಒದಗಿಸಿಕೊಟ್ಟರು.

ಸುಮಾರು 19,000ಜನ ಪ್ರೇಕ್ಷಕರ ಎದುರು ಭಾರತ 69ನೇ ನಿಮಿಷದಲ್ಲಿ ಗೋಲು ಬಾರಿಸಿ ಡ್ರಾ ಸಾಧಿಸಿದ ಖುಷಿಯಲ್ಲಿತ್ತು. ಅದರೆ, ಫಾರ್ವರ್ಡ್ ಆಟಗಾರ ರಾಬಿನ್ ಸಿಂಗ್ ಗೋಲು ಹೊಡೆದರೂ ಆಫ್​ಸೈಡ್ ಆದ ಪರಿಣಾಮ ರೆಫ್ರಿ ಗೋಲು ಪುರಸ್ಕರಿಸಲಿಲ್ಲ.

ಆ ಗೋಲು ಏಕೆ ಪುರಸ್ಕರಿಸಲಿಲ್ಲ

ಆ ಗೋಲು ಏಕೆ ಪುರಸ್ಕರಿಸಲಿಲ್ಲ

ಆ ಗೋಲು ಏಕೆ ಪುರಸ್ಕರಿಸಲಿಲ್ಲ ಎಂದು ತಿಳಿಯದು, ನಾನು ರೆಫ್ರಿಯನ್ನು ದೂರುತ್ತಿಲ್ಲ. ಆ ಗೋಲು ಬಾರಿಸಿದ ಖುಷಿಯಲ್ಲಿದ್ದೆ. ಅದರೆ, ಲೈನ್ಸ್ ಮನ್ ಫ್ಲಾಗ್ ನಿಧಾನವಾಗಿ ಮೇಲಕ್ಕೇರಿಸಿ ಆಫ್ ಸೈಡ್ ಎಂದು ನಿರ್ಣಯ ನೀಡಿದ್ದು ಆಘಾತವಾಯಿತು.- ಭಾರತದ ಕೋಚ್ ಕಾನ್ಸ್‌ಸ್ಟನ್‌ಸ್ಟೈನ್

ಭಾರತದ ಉಪ ನಾಯಕ ಸುನೀಲ್ ಛೆಟ್ರಿ

ಭಾರತದ ಉಪ ನಾಯಕ ಸುನೀಲ್ ಛೆಟ್ರಿ

ಭಾರತದ ಕೋಚ್ ಕಾನ್ಸ್‌ಸ್ಟನ್‌ಸ್ಟೈನ್ ನಾಲ್ವರು ಆಟಗಾರರಿಗೆ ಚೊಚ್ಚಲ ಪಂದ್ಯ ಆಡಲು ಅವಕಾಶ ನೀಡಿದರು. 26ನೇ ನಿಮಿಷದಲ್ಲಿ ಭಾರತದ ಉಪ ನಾಯಕ ಸುನೀಲ್ ಛೆಟ್ರಿ ಅದ್ಭುತ ಗೋಲು ಬಾರಿಸಿ 1-1 ಸಮಬಲಗೊಳಿಸಿದರು.

ರಕ್ಷಣಾತ್ಮಕ ಆಟವಾಡಿದ ಒಮಾನ್

ರಕ್ಷಣಾತ್ಮಕ ಆಟವಾಡಿದ ಒಮಾನ್

ರಕ್ಷಣಾತ್ಮಕ ಆಟವಾಡಿದ ಒಮಾನ್ ಮುಂದೆ ಭಾರತದ ಅನನುಭವಿ ತಂಡ ಉತ್ತಮ ಪ್ರದರ್ಶನ ನೀಡಿ ಸೋಲು ಕಂಡಿದೆ.

ಒಮಾನ್ ನಾಯಕ ಅಲ್ ಹಬ್ಸಿ

ಒಮಾನ್ ನಾಯಕ ಅಲ್ ಹಬ್ಸಿ

ಒಮಾನ್ ನಾಯಕ ಅಲ್ ಹಬ್ಸಿ ಹಾಗೂ ಕೋಚ್ ಪಾಲ್ ಜೋಸೆಫ್ ಲೆ ಗುವೆನ್ ಅವರು ಸುದ್ದಿಗೋಷ್ಠಿಯಲ್ಲಿ

Story first published: Friday, June 12, 2015, 15:29 [IST]
Other articles published on Jun 12, 2015

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ